ನಗರದಲ್ಲಿ ಉಜ್ಜೀವನ್ ಎಸ್‌ಎಫ್‌ಬಿ ಬ್ಯಾಂಕ್ ಶಾಖೆ ಆರಂಭ: ವೈವಿಧ್ಯಮಯ ಮತ್ತು ಸ್ಥಿರ ಗ್ರಾಹಕ ನೆಲೆಯನ್ನು ನಿರ್ಮಿಸುವ ಉದ್ದೇಶವನ್ನು ಬ್ಯಾಂಕ್ ಹೊಂದಿದೆ- ಸಂದೀಪ್. ಬಿ
ನಗರದಲ್ಲಿ ಉಜ್ಜೀವನ್ ಎಸ್‌ಎಫ್‌ಬಿ ಬ್ಯಾಂಕ್ ಶಾಖೆ ಆರಂಭ: ವೈವಿಧ್ಯಮಯ ಮತ್ತು ಸ್ಥಿರ ಗ್ರಾಹಕ ನೆಲೆಯನ್ನು ನಿರ್ಮಿಸುವ ಉದ್ದೇಶವನ್ನು ಬ್ಯಾಂಕ್ ಹೊಂದಿದೆ- ಸಂದೀಪ್. ಬಿ
ರಾಯಚೂರು,ಅ.26- ನಗರದಲ್ಲಿ ಉಜ್ಜೀವನ್ ಎಸ್‌ಎಫ್‌ಬಿ ಶಾಖೆ ಪ್ರಾರಂಭದೊಂದಿಗೆ ಕರ್ನಾಟಕದಲ್ಲಿ ಒಟ್ಟು 92 ಶಾಖೆಗಳನ್ನು ಹೊಂದಿದಂತಾಗಿದ್ದು, 10.5 ಲಕ್ಷ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿದೆ ವೈವಿಧ್ಯಮಯ ಮತ್ತು ಸ್ಥಿರ ಗ್ರಾಹಕ ನೆಲೆಯನ್ನು ನಿರ್ಮಿಸುವ ಉದ್ದೇಶವನ್ನು ಬ್ಯಾಂಕ್ ಹೊಂದಿದೆ ಎಂದು ಬ್ಯಾಂಕಿನ ಹಿರಿಯ ಪ್ರಾದೇಶಿಕ ಮುಖ್ಯಸ್ಥರಾದ ಸಂದೀಪ್ ಬಿ. ದೀಪ ಹೇಳಿದರು . ಅವರು ನಗರದಲ್ಲಿ ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಲಿಮಿಟೆಡ್ (ಉಜ್ಜೀವನ್ ಎಸ್‌ಎಫ್‌ಬಿ) ರಾಯಚೂರಿನಲ್ಲಿ ತನ್ನ ನೂತನ ಶಾಖೆಯನ್ನು ಸ್ಟೇಷನ್ ರಸ್ತೆಯಲ್ಲಿರುವ ರಜಪೂತ್ ಬಿಲ್ಡಿಂಗ್‌ನಲ್ಲಿ ಉದ್ಘಾಟಿಸಿ ಮಾತನಾಡಿದರು.
ಉಜ್ಜೀವನ್ ಎಸ್‌ಎಫ್‌ಬಿ ನಿಶ್ಚಿತ ಠೇವಣಿಗಳ ಮೇಲೆ ಆಕರ್ಷಕ ಬಡ್ಡಿ ದರ ನೀಡುತ್ತಿದ್ದು, ಶೇ 8.25ರಷ್ಟು ಬಡ್ಡಿಯನ್ನು 12 ತಿಂಗಳ ಮತ್ತು 80 ವಾರಗಳ (560) ಎಫ್‌ಡಿ ಮೇಲೆ ನೀಡುತ್ತಿದೆ. ಹಿರಿಯ ನಾಗಕರಿಗೆ ಇದು ಶೇ 8.75ರಷ್ಟಿದೆ. ಮ್ಯಾಕ್ಸಿಮಾ ಮತ್ತು ಪ್ರಿವಿಲೇಜ್ ಉಳಿತಾಯ ಖಾತೆಗಳ ಮೇಲೆಯೂ ಉಜ್ಜೀವನ್ ಎಸ್‌ಎಫ್‌ಬಿ ವಾರ್ಷಿಕ ಶೇ 7.5ರವರೆಗೆ ಬಡ್ಡಿಯನ್ನು ನೀಡುತ್ತಿದೆ.
ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗೆ 10 ಲಕ್ಷದಿಂದ 10 ಕೋಟಿ ರೂಪಾಯಿಗಳವರೆಗೆ ಸಾಲ ನೆರವನ್ನು ಉಜ್ಜೀವನ್ ಎಸ್‌ಎಫ್‌ಬಿ ನೀಡುತ್ತಿದೆ. ಆಸ್ತಿ, ದುಡಿಯುವ ಬಂಡವಾಳದ ಮೇಲೆ ಬ್ಯಾಂಕ್ ಗ್ರಾಹಕರ ವಿವಿಧ ಅಗತ್ಯತೆಗಳಿಗೆ ಅನುಗುಣವಾಗಿ ಸಾಲವನ್ನು ಒದಗಿಸುತ್ತಿದೆ. ಜೊತೆಗೆ ಕೈಗೆಟಕುವ ಬಡ್ಡಿಯಲ್ಲಿ 5 ಲಕ್ಷದಿಂದ 75 ಲಕ್ಷ ರೂ.ಗಳವರೆಗೆ ಗೃಹ ಸಂಬಂಧಿ ಸಾಲವನ್ನು ಒದಗಿಸುತ್ತಿದೆ. ಗೃಹಸಾಲದ ಸೇವೆಯನ್ನು ಬ್ಯಾಂಕ್ ಮನೆಬಾಗಿಲಿಗೆ ನೀಡುತ್ತಿದೆ.
ಹೊಸ ಶಾಖೆಯ ಉದ್ಘಾಟನೆಯ ಸಂದರ್ಭದಲ್ಲಿ ಮಾತನಾಡಿದ ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನ ಎಂಡಿ ಮತ್ತು ಸಿಇಒ ಇಟ್ಟಿರಾ ಡೇವಿಸ್ ಅವರು “ಉಳಿತಾಯ ಮತ್ತು ಠೇವಣಿಗಳ ಮೇಲೆ ಸ್ಪರ್ಧಾತ್ಮಕ ಬಡ್ಡಿ ಸೇರಿದಂತೆ ವ್ಯಕ್ತಿಗತ ಬ್ಯಾಂಕಿಂಗ್ ಉತ್ಪನ್ನ ಮತ್ತು ಸೇವೆಗಳನ್ನು ನಾವು ಹೊಂದಿದ್ದು, ರಾಯಚೂರಿನ ಗ್ರಾಹಕರ ಜೀವನದಲ್ಲಿ ಇದು ಮಹತ್ವದ ಸಕಾರಾತ್ಮಕ ಬದಲಾವಣೆ ತರಲಿದೆ” ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳಾದ ಹನುಮಂತಪ್ಪ, ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಎಸ್. ಕಮಲ್ ಕುಮಾರ್, ಬ್ಯಾಂಕಿನ ಅಧಿಕಾರಿಗಳಾದ ಅಭಿಜಿತ್ ಇನಾಂದಾರ್, ವಿನಯ್, ಪಿ. ರಾಘವೇಂದ್ರ, ಶಂಕರ್ ವಿಕಾಸ್, ರಂಜಿತ್ ಇನ್ನಿತರರು ಉಪಸ್ಥಿತರಿದ್ದರು.
Comments
Post a Comment