ಮಕ್ತಲ್ ಪೇಟೆ ಶ್ರೀ ಮಾತಾ ಚೌಡೇಶ್ವರಿ ದೇವಿಯ ಸಮುದಾಯ ಭವನದ ಉದ್ಘಾಟನೆ. ಮಾತೆ ಚೌಡೇಶ್ವರಿ ದೇವಿಗೆ ರವಿ‌ ಬೋಸರಾಜುರಿಂದ ವಿಶೇಷ ಪೂಜೆ ಸಲ್ಲಿಕೆ.

 


ಮಕ್ತಲ್ ಪೇಟೆ ಶ್ರೀ ಮಾತಾ ಚೌಡೇಶ್ವರಿ ದೇವಿಯ ಸಮುದಾಯ ಭವನದ ಉದ್ಘಾಟನೆ:                       ಮಾತೆ ಚೌಡೇಶ್ವರಿ ದೇವಿಗೆ ರವಿ‌ ಬೋಸರಾಜುರಿಂದ ವಿಶೇಷ ಪೂಜೆ ಸಲ್ಲಿಕೆ.

ರಾಯಚೂರು,20-ನಗರದ ಮಕ್ತಲ್ ಪೇಟ್ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀ ಮಾತಾ ಚೌಡೇಶ್ವರಿ ದೇವಿಯ ಸಮುದಾಯ ಭವನದ ಉದ್ಘಾಟನಾ ಸಮಾರಂಭದಲ್ಲಿ ಕಾಂಗ್ರೆಸ್ ರಾಜ್ಯ ಯುವ ಮುಖಂಡರಾದ ರವಿ‌ ಬೋಸರಾಜು ಅವರು ಭಾಗವಹಿಸಿ ಮಾತನಾಡಿ ಶ್ರೀದೇವಿಯು  ಸಮಸ್ತ ಜನರ ಸಂಕಷ್ಟಗಳನ್ನು ದೂರ ಮಾಡು ಎಲ್ಲರಿಗೂ ಒಳಿತಾಗಲಿ ಎಂದು  ಮಾತೇ ಚೌಡೇಶ್ವರಿ ದೇವಿ ಹಾಗೂ ಲಕ್ಷ್ಮಿದೇವಿಗೆ  ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.

ನೂತನ ಭವನ ಕಟ್ಟಡವನ್ನು ರಿಬ್ಬನ್ ಕತ್ತರಿಸುವ ಮೂಲಕ  ರಾಜ್ಯ ಕಾಂಗ್ರೆಸ್ ಯುವ ಮುಖಂಡ ರವಿ ಬೋಸರಾಜು ಉದ್ಘಾಟಿಸಿದರು.


ಉದ್ಘಾಟನೆಯಲ್ಲಿ ಮಾಜಿ ಶಾಸಕ ಎ ಪಾಪರಡ್ಡಿ ಹಾಗೂ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಮೊಹ್ಮದ್ ಶಾಲಂ ಅವರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಯಾಪಚಟ್ಟು ಚಿನ್ನಯ್ಯ, ಗೋವಿಂದರಡ್ಡಿ ಉಪ್ಪೇಟ, ಶೇಖರ್ ರಡ್ಡಿ, ಶಶಿಧರ್ ಏಗನೂರು, ತಿಮ್ಮಾರಡ್ಡಿ, ಅರುಣ ದೋತರಬಂಡಿ,  ಪೋಗುಲ್ ಚಂದ್ರಶೇಖರ್ ರಡ್ಡಿ, ರವಿ‌ಕಂಬೈಗಾರ್ ನೂರಾರು ಭಕ್ತರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ