ಕರ್ನಾಟಕ ರಾಜ್ಯೋತ್ಸವ ದಿನಾಚರಣೆ: ನಾಲ್ವರು ಮಹನಿಯರಿಗೆ ಎಡೆದೊರೆ ಸಾಧನಾ ಪುರಸ್ಕಾರ


ಕರ್ನಾಟಕ ರಾಜ್ಯೋತ್ಸವ ದಿನಾಚರಣೆ:                         
ನಾಲ್ವರು ಮಹನಿಯರಿಗೆ   ಎಡೆದೊರೆ ಸಾಧನಾ ಪುರಸ್ಕಾರ


ರಾಯಚೂರು ಅ.31- ಕರ್ನಾಟಕ ರಾಜ್ಯೋತ್ಸವ ದಿನಾಚರಣೆ 2023ರ ಅಂಗವಾಗಿ ರಾಯಚೂರು ಜಿಲ್ಲೆಯ ನಾಲ್ವರು ಮಹನಿಯರಿಗೆ ಜಿಲ್ಲಾ ಎಡೆ ದೊರೆ ಸಾಧನಾ ಪುರಸ್ಕಾರ ನೀಡಿ ಗೌರವಿಸಲಾಗುತ್ತಿದೆ ಎಂದು  ಕರ್ನಾಟಕ ರಾಜ್ಯೋತ್ಸವ ಆಚರಣಾ ಸಮಿತಿಯ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿಗಳಾದ ಚಂದ್ರಶೇಖರ ನಾಯಕ ಎಲ್ ಅವರು ತಿಳಿಸಿದ್ದಾರೆ.


ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ನರಸಿಂಹರಾವ್ ಸರ್ಕೀಲ್ (ಪತ್ರಿಕೋದ್ಯಮ), ಬುರ್ ಕಥಾ ಅಯ್ಯಮ್ಮ (ಜನಪದ), ಸೂಲಗಿತ್ತಿ ಮಲ್ಲಮ್ಮ (ಸಮಾಜ ಸೇವೆ) ಮತ್ತು ಅಮರೇಶ್ ಯತಗಲ್ (ಸಾಹಿತ್ಯ)


ಈ ಮಹನಿಯರು 2023ನೇ ಸಾಲಿನ ಎಡೆ ದೊರೆ ಸಾಧನಾ ಪುರಸ್ಕಾರ ಪಡೆದುಕೊಂಡಿದ್ದಾರೆಂದು ಹೇಳಲು ಜಿಲ್ಲಾಡಳಿತ ಹರ್ಷಿಸುತ್ತಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ವೇದಿಕೆ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ: ನವೆಂಬರ್‌ 01ರಂದು ಬೆಳಗ್ಗೆ 9 ಗಂಟೆಗೆ ನಗರದ ಮಹಾತ್ಮಗಾಂಧೀ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ನಡೆಯುವ ರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಎಡೆದೊರೆ ಸಾಧನಾ ಪುರಸ್ಕಾರವನ್ನು ಮಹನಿಯರಿಗೆ  ನೀಡಿ ಗೌರವಿಸಲಿದ್ದಾರೆ.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ