"ನವರಾತ್ರಿ ಕವನ"

     


        "ನವರಾತ್ರಿ ಕವನ"
                                       ನವ ರಂಗದ ಸೀರಿ  ಮ್ಯಾಲ್ ನನ್ನ  ಕಣ್ಣು  

ಸೀರೆ  ಅಂದ್ರ  ಸಾಕು ಇಷ್ಟಪಡುತ್ತಾಳೆ ಹೆಣ್ಣು 

ಹಳದಿ ಅಂದ್ರ ಹರದೇರು 

ಶೈಲಪುತ್ರಿ  ನೆನೆಯುತ್ತಾ 

ಧಾತ್ರಿಯನ್ನು ಪೂಜಿಸುತ್ತಾ  ಉಟ್ಟೆಬಿಟ್ಟಾರು   

ಬೆಡಗಿಯರೆಲ್ಲಾ  ಸೇರಿ  ಬೆಲ್ಲದಾರುತಿ  ಮಾಡಿ  

ಬಿಳಿಯ  ಸೀರೆಯನ್ನುಟ್ಟು ಬ್ರಹ್ಮಚಾರಣಿ ಪೂಜಿಸಿದ  

ತರುಣಿಯರು 

ಚಂದ್ರನಂತೆ  ಹೊಳೆಯುವ  ಚಕೋರಿಯರು 

ಚಂದ್ರಘಂಟಾ  ನೆನೆಯುತಾ  ಚಂದ್ರಾಕೃತಿ  

ತಿಲಕ  ಧರಿಸಿ

ಕೆಂಪು  ಸೀರೆ  ಧರಿಸಿ 

ಮಿಂಚುವರು  

 ಕನ್ಯೆಯರು  ಕೂಷ್ಮಾಂಡಳ  ಭಜಿಸುತಾ ನೀಲಿಯ  ಸೀರೆಯುಟ್ಟ 

 ನೀರೆಯರು  ನಲಿದಾಡುವರು 

ಸ್ಕಂದಮಾತೆಯ  ಆನಂದದಿ  ಪೂಜಿಸುತ 

ಸಂತ್ರಾ ಬಣ್ಣದ  ಸೀರೆಯಲ್ಲಿ ಸುರ ಸುಂದರಿಯರು ಸೊಬಗು  ತೋರುವರು  

ಕಾತ್ಯಾಯಿನಿ  ಮಾತೆ ಯ ಕಂದಳೆನಿಸಿದ  ಹೆಂಗಳೆಯರು ಹಸಿರ ಸೀರೆಯುಟ್ಟ  ಬಾಳು  ಹಸನ ಗೊಳಿಸು  ಎನ್ನುವರು

ಕಾಳರಾತ್ರಿ  ಆರಾಧಿಸುತ

ಬೂದಿ  ಬಣ್ಣದಲ್ಲಿ  ಸೀರೆ  ಯ  ತಾಳ  ಹಾಕುತ  

ದಾಂಡಿಯಾ  ಕುಣಿತ  ದಂಡು  ದಂಡಿನಲಿ  ಹಿಂಡು  ಹಿಂಡು  ಹೆಣ್ಮಕ್ಕಳು ನೋಡಲು  ಸಾಲದು  ಕಂಗಳು  

ಮಾ ಗೌರಿಯ  ಪೂಜಿಸಿದ  ನೀರೆಯರು 

ನೇರಳೆ ಸೀರೆಯಲ್ಲಿ  

ವಯ್ಯಾರ  ತೋರುವರು

ಸಿದ್ಧಿ  ಕೊಡು  ಎಂದು  

ಸಿದ್ಧಿಧಾತ್ರಿ ಯ ಬದ್ಧದಿ  

ಭಜಿಸಿ  ನವಿಲಿನ  ಬಣ್ಣದ  ಸೀರೆಯನುಟ್ಟು  

ಮೊರಪಂಖಿಯಾಗಿ  

ಮರಳು  ಮಾಡುವರು  ನವವಿಧ  ಭಕುತಿಯ  

ಕೊಡು ಎಂದು  ನವರಾತ್ರಿ  ಪೂಜೆ  ಸಲ್ಲಿಸಿದ  ಸುದತಿಯರು 

ನವದುಗೆ೯ಯ  ಹೆಸರಲ್ಲಿ  ಹೊಸ  ಸೀರೆ  ಸೊಬಗನು  ಸವಿದು 

ನಲಿಯುವರು  ಬಣ್ಣದ  ಜೊತೆಗೆ  ಕಣ್ಮನ  ಸೆಳೆಯುತ  ಬಣ್ಣದ  ಗುಟ್ಟನು  ರಟ್ಟು  ಮಾಡುತ ವೈವಿಧ್ಯತೆಯ  ಮಹತನು  ಕುಣಿಯುತ ತೋರುತ  ತಣಿಯುವರು. 



     

 -ಶ್ರೀಮತಿ  ಭಾರತಿ ಗುರುರಾಜ ಕುಲಕರ್ಣಿ,           ಸಾವಿತ್ರಿ ಕಾಲೋನಿ, ರಾಯಚೂರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ