ಮಮದಾಪುರ ಶ್ರೀ ಮಾತಾ ಗಧಾರ ಮಾರಿಕಾಂಬಾ ದೇವಸ್ಥಾನ : ದುರ್ಗಾಷ್ಟಮಿ ಅಂಗವಾಗಿ ಚಂಡಿಹೋಮ
ಮಮದಾಪುರ ಶ್ರೀ ಮಾತಾ ಗಧಾರ ಮಾರಿಕಾಂಬಾ ದೇವಸ್ಥಾನ : ದುರ್ಗಾಷ್ಟಮಿ ಅಂಗವಾಗಿ ಚಂಡಿಹೋಮ ರಾಯಚೂರು,ಅ.22- ತಾಲೂಕಿನ ಸುಕ್ಷೇತ್ರ ಮಮದಾಪುರ ಶ್ರೀ ಮಾತಾ ಗಧಾರ ಮಾರಿಕಾಂಬಾ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ 10ನೇ ವರ್ಷದ ವೈಭವದ ಶರನ್ನವರಾತ್ರಿ ಮಹೋತ್ಸವ ಅಂಗವಾಗಿ ಇಂದು ದುರ್ಗಾಷ್ಟಮಿ ದಿನದಂದು ಬೆಳಿಗ್ಗೆ 6 :00 ಗಂಟೆಗೆ ದೇವಸ್ಥಾನದ ಯುವ ಬಳಗದ ಅಚ್ಚುಮೆಚ್ಚಿನ ವೈದಿಕ ರತ್ನ ಶ್ರೀ ಬಸವರಾಜ ಸ್ವಾಮಿ ಹಿರೇಮಠ ಮನ್ಸಲಾಪುರ ಹಾಗೂ ಶ್ರೀ ಚನ್ನಬಸಯ್ಯ ಶಾಸ್ತ್ರಿಗಳು ಕೆಂಗಲ್ ಹಿರೇಮಠ, ಮಾಡ ಶಿರವಾರ ಇವರ ನೇತೃತ್ವದಲ್ಲಿ ಚಂಡಿಹೋಮ ಕಾರ್ಯಕ್ರಮ ಜರಗಿತು.
ದಿವ್ಯಸಾನಿದ್ಯವನ್ನು ಶ ಬ್ರ ಶ್ರೀ ಶಾಂತಮಲ್ಲ ಶಿವಚಾರ್ಯ ಮಹಾಸ್ವಾಮಿಗಳು 108 ಸಾವಿರ ದೇವರ ಸಂಸ್ಥಾನ ಕಿಲ್ಲೇಬ್ರಹನ್ಮಠ ರಾಯಚೂರು ಹಾಗೂ ಸಾನಿದ್ಯ ವೇ ಮೂ॥ ಪರಮ ಪೂಜ್ಯ ಶ್ರೀ ಡಾ. ಕ್ಷೀರಲಿಂಗ ಮಹಾಸ್ವಾಮಿಗಳು ಸುಕ್ಷೇತ್ರ ಚೇಗುಂಟ ಇವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
Comments
Post a Comment