ಗ್ರಾಮೀಣದಲ್ಲಿ ವೈದ್ಯ ಸೇವೆ ರದ್ದುಗೊಳಿಸಿದಕ್ಕಾಗಿ ಕರವೇ ಆಕ್ರೋಶ
ಗ್ರಾಮೀಣದಲ್ಲಿ ವೈದ್ಯ ಸೇವೆ ರದ್ದುಗೊಳಿಸಿದಕ್ಕಾಗಿ ಕರವೇ ಆಕ್ರೋಶ
ರಾಯಚೂರು ,ಅ.20-ವೈದ್ಯ ಸೇವೆ ಮುಗಿಸಿದವರಿಗೆ ಗ್ರಾಮ ಸೇವೆ ಕಡ್ಡಾಯ ನೀತಿ, ಕಾನೂನು ರದ್ದುಗೊಳಿಸಿದ ಸರ್ಕಾರದ ನಡೆಯನ್ನು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷರು ಮತ್ತು ರಾಜ್ಯ ಸಂಘಟನಾ ಕಾರ್ಯದರ್ಶಿ ಅಶೋಕಕುಮಾರ ಸಿ ಕೆ ಜೈನ ಆಕ್ರೋಶ ಹೊರ ಹಾಕಿದ್ದಾರೆ. ರಾಜ್ಯದ ಹಳ್ಳಿಗಳಲ್ಲಿ ಸರಿಯಾದ ವೈದ್ಯ ಸೇವೆ ಸಿಗುತ್ತಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರೇ ಇರುವುದಿಲ್ಲ. ನರ್ಸಗಳೇ ಪ್ರಕರಣ ಬಗೆಹರಿಸಲಿಕ್ಕೆ ಪ್ರಯತ್ನಿಸುತ್ತಾರೆ. ಇದರಿಂದ ಹೆರಿಗೆ ಮತ್ತು ಗರ್ಭೀಣಿ, ಮಕ್ಕಳ ಸಾವು, ಅಪೌಷ್ಠಿಕತೆಯ ಸಾವಾಗುತ್ತಿವೆ. ಔಷಧೋಪಚಾರ ಸಿಗುತ್ತಿಲ್ಲ. ಅದರಲ್ಲೂ ಹಿಂದುಳಿದ ಜಿಲ್ಲೆಗಳಲ್ಲಿ ಕಲುಷಿತ ನೀರು, ಕಲುಷಿತ ವಾತಾವರಣದಿಂದ ಸಾಮೂಹಿಕವಾಗಿ ಅನಾರೋಗ್ಯಕ್ಕೆ ಒಳಗಾಗುವುದು ಸಹಜ.ಅನಾರೋಗಿಗಳು ನಗರ, ಪಟ್ಟಣಕ್ಕೆ ಬರಲು ತಡವಾಗುತ್ತದೆ. ಗ್ರಾಮೀಣ ಭಾಗದಲ್ಲಿ ವೈದ್ಯರ ನೇಮಕವಾಗಿಲ್ಲ. ನೇಮಕವಾದರೂ, ಸೇವೆಗೆ ಬರುತ್ತಿಲ್ಲ. ನರ್ಸ ಮತ್ತು ಆರ್.ಎಂ.ಪಿ ಗಳೇ ಚಿಕಿತ್ಸೆ ನೀಡುವುದು ನಡೆದಿದೆ.ಗುಣಮಟ್ಟದ ಸೇವೆ ಗ್ರಾಮದಲ್ಲಿ ಶೂನ್ಯವಾಗಿದೆ. ಇಂತಹ ಕ್ಲಿಷ್ಟ ಸಂದರ್ಭದಲ್ಲಿ ಗ್ರಾಮೀಣ ವೈದ್ಯ ಸೇವೆ ರದ್ದು, ಗಂಭೀರವಾದ ವಿಚಾರ, ಈ ಆದೇಶ ವಾಪಸ್ಸಾತ್ತಿಗೆ ಶಿವರಾಮೇಗೌ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕ ಒತ್ತಾಯ ಮಾಡಿದ್ದಾರೆ.
ರಾಜ್ಯ ಸರ್ಕಾರ ಈಗಾಗಲೇ ಹಿಂದುಳಿದ ಜಿಲ್ಲೆಗಳಲ್ಲಿ ಶಿಕ್ಷಕರ ವರ್ಗಾವಣೆ ಮಾಡಿ, ಶಿಕ್ಷಣ ವಿರೋಧಿ ಭಾಗ್ಯ ತೋರಿಸಿದ ಹಿಂದೆಯೇ ವೈದ್ಯರ ಕೊರತೆ ಭಾಗ್ಯಕ್ಕೆ ಮುಂದಾಗಿರುವುದು ದುರಂತವೇ ಸರಿ. ಎಂದು ಟೀಕಿಸಿದ್ದಾರೆ. ಈ ಎಂಬಿಬಿಎಸ್ ಮುಗಿಸಿದ ವೈದ್ಯರ ಕಡ್ಡಾಯ ಗ್ರಾಮ ಸೇವೆ ರದ್ದು, ಆದೇಶ ಮುಂದುವರೆಸಿದರೆ, ರಾಜ್ಯಾದ್ಯಂತ ಹೊರಾಟದ ಮಾಡಲಾಗುವುದೆಂದು ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗುತ್ತಿದೆ.
Comments
Post a Comment