ಬಯಲು ಆಂಜನೇಯ ದೇವಸ್ಥಾನದಲ್ಲಿ ಶ್ರೀ ಪ್ರಾಣೇಶ ದಾಸರ ಆರಾಧನೆ: ದಾಸ ಸಾಹಿತ್ಯದಲ್ಲಿ ಪ್ರಖ್ಯಾತ ಹರಿದಾಸರು ಪ್ರಾಣೇಶ ದಾಸರು- ಮುರಳಿಧರ ಕುಲಕರ್ಣಿ


ಬಯಲು ಆಂಜನೇಯ ದೇವಸ್ಥಾನದಲ್ಲಿ ಶ್ರೀ ಪ್ರಾಣೇಶ ದಾಸರ ಆರಾಧನೆ:                             
ದಾಸ ಸಾಹಿತ್ಯದಲ್ಲಿ ಪ್ರಖ್ಯಾತ ಹರಿದಾಸರು ಪ್ರಾಣೇಶ ದಾಸರು- ಮುರಳಿಧರ ಕುಲಕರ್ಣಿ

 ರಾಯಚೂರು ,ಅ.21- ಶ್ರೀ ವಿಜಯದಾಸರು, ಶ್ರೀ ಗೋಪಾಲ ದಾಸರು, ಶ್ರೀ ಜಗನ್ನಾಥದಾಸರ, ದಾಸ ಕೂಟದ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಿ, ದಾಸ ಸಾಹಿತ್ಯದ ಪ್ರಖ್ಯಾತ ಹರಿದಾಸರು ಶ್ರೀ ಪ್ರಾಣೇಶ ದಾಸರು ಎಂದು ಶ್ರುತಿ ಸಾಹಿತ್ಯ ಮೇಳದ ಅಧ್ಯಕ್ಷ ಮುರಳಿಧರ ಕುಲಕರ್ಣಿಯವರು ಹೇಳಿದರು.

     ಅವರು ಇಂದು ಶನಿವಾರ ಸಂಜೆ ಜವಾಹರ ನಗರ ಬಯಲು ಆಂಜನೇಯ ದೇವಸ್ಥಾನದಲ್ಲಿ ಹರಿದಾಸ ಬೌದ್ಧಿಕ ಮಂಟಪ ಆಶ್ರಯದಲ್ಲಿಜರುಗಿದ ಶ್ರೀ ಪ್ರಾಣೇಶ ದಾಸರ ಆರಾಧನೆಯ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಾ, ಮಾತನಾಡಿದರು.


     ಪ್ರಾಣೇಶ ದಾಸರು ದಾಸ ಸಾಹಿತ್ಯಕ್ಕೆ ಅದ್ವಿತೀಯವಾದ ಕೊಡುಗೆಯನ್ನು ನೀಡಿದ್ದಾರೆ. ಇವರು ನೂರಾರು  ಸಂಕೀರ್ತನೆಗಳನ್ನು, ಉಗಾ- ಬೋಗಗಳನ್ನು, ಲಾವಣಿ ಪದಗಳನ್ನು, ಗೀಗಿ ಪದಗಳನ್ನು, ಕೋಲಾಟ ಪದಗಳನ್ನು ರಚಿಸುವುದರ ಜೊತೆಗೆ ಗೋಪಿಕ ವಿಲಾಸ, ಗಾಲವ ಚರಿತ್ರ, ಬ್ರಹ್ಮರ ಗೀತಾ, ಅನಿರುದ್ಧ ವಿಲಾಸ, ವಸಿಷ್ಠ ವಿಶ್ವಾಮಿತ್ರ ವ್ಯಾಖ್ಯಾನ, ಹಾಸ್ಯಮಯ ಪ್ರಮೇಯಗಳಾದ ಬುಡ್ಡಿ ಬ್ರಹ್ಮ ಕಥೆ ಮುಂತಾದ ಕೃತಿಗಳನ್ನು ರಚಿಸಿ, ಭಗವಂತನ ಎಂಬ ಬೆಳಕಿನೆಡೆಗೆ ಭಕ್ತಿಯ ಸೇತುವೆಯನ್ನು ನಿರ್ಮಿಸಿದ ಶ್ರೇಷ್ಠ ದಾಸರು. ಎಂದು ಹೇಳಿದರು.

 ಕಾರ್ಯಕ್ರಮವನ್ನು  ಶ್ರೀ ರಾಘವೇಂದ್ರ ಸ್ವಾಮಿಗಳ ಮಠ  ಸಂಚಾಲಕರಾದ ಶ್ರೀ ಸೇತು ಮಾಧವ ಕನವೀಡು ಇವರು ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

  ಈ ಸಂದರ್ಭದಲ್ಲಿ  ಸಂಗೀತಗಾರಾದ  ಶ್ರೀ ಗುಂಡಾಚಾರ್ಯ ಹೊಳಗುಂದಿ, ಸುರೇಶ್ ಕಲ್ಲೂರ್,  ಇವರಿಂದ ದಾಸವಾಣಿ ಜರುಗಿತು.

  ಕಾರ್ಯಕ್ರಮವನ್ನು ಶ್ರೀ ಸುರೇಶ್ ಕುಲಕರ್ಣಿ ಅವರು ಆಯೋಜಿಸಿದ್ದರು.

   ಶ್ರೀ ಕಾಂತಕುಲಕರ್ಣಿ ಹಾಗೂ ವಿವಿಧ ಭಜನ ಮಂಡಳಿಯ ಸದಸ್ಯರುಗಳು ಉಪಸ್ಥಿತರಿದ್ದರು.

  ಕೊನೆಯಲ್ಲಿ ಸುರೇಶ್ ಕಲ್ಲೂರ್ ಅವರು ವಂದಿಸಿದರು .

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ