ದೇವಸೂಗುರಿನಲ್ಲಿ ಸಂಭ್ರಮದ ದಸರಾ ಆಚರಣೆ: ಸೂಗುರೇಶ್ವರ ಬಡಾವಣೆ ನಿವಾಸಿಗಳಿಂದ ಬನ್ನಿ ವಿನಿಮಯ

 


ದೇವಸೂಗುರಿನಲ್ಲಿ ಸಂಭ್ರಮದ ದಸರಾ ಆಚರಣೆ:

ಸೂಗುರೇಶ್ವರ ಬಡಾವಣೆ ನಿವಾಸಿಗಳಿಂದ ಬನ್ನಿ ವಿನಿಮಯ

 ರಾಯಚೂರು: ಅ:25: ತಾಲೂಕಿನ ದೇವಸೂಗುರಿನಲ್ಲಿ ನಾಡ ಹಬ್ಬ ವಿಜಯದಶಮಿ ಹಬ್ಬವನ್ನು ಮ೦ಗಳವಾರ ಸಡಗರ ಸಂಭ್ರಮದಿಂದ ಆಚರಿಸಲಾಯಿತು.         ಸ್ಥಳೀಯ ಸೂಗುರೇಶ್ವರ ಮತ್ತು ಶ್ರೀಶೈಲ ಮಲ್ಲಿಕಾರ್ಜುನ ಬಡಾವಣೆ ನಿವಾಸಿಗಳಿಂದ ಬನ್ನಿ ಮಂಟಪ ದವರೆಗೆ ಮೆರವಣಿಗೆ ತೆರಳಿ ಪಂಪಯ್ಯ ಸ್ವಾಮೀಜಿಗಳ ಸಮ್ಮುಖದಲ್ಲಿ ಬನ್ನಿಮರಕ್ಕೆ ಪೂಜೆ ಸಲ್ಲಿಸಿ  ಸಾಂಪ್ರದಾಯಿಕ ಆಯುಧದಿಂದ ಬನ್ನಿ ಕತ್ತರಿಸುವ ಮೂಲಕ ವಿಜಯದಶಮಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.


ಈ ಸಂದರ್ಭದಲ್ಲಿ ಶರಣಗೌಡ, ಸುನೀಲಗೌಡ, ಮಹಾಂತೇಶ ಅಂಗಡಿ,ನಾಗೇಶ ಕಾಂಟ್ರಾಕ್ಟರ್, ಬಸವರಾಜ ಬನಶಂಕರಿ,ಸೂಗುರೇಶ ಮಾಸ್ಟರ್ ಗುಡೇಬಲ್ಲೂರು, ಸೋಮಶೇಖರ ಹಿರೇಮಠ, ವಿರೇಶ ಆಟೋಮೊಬೈಲ್,ಗಂಗಾಧರ ಶೆಟ್ಟಿ, ಈರಣ್ಣ,ಲಿಂಗಪ್ಪ,ಸೇರಿದಂತೆ ವಿವಿಧ ಸಮಾಜದ ಮುಖಂಡರು, ಗಣ್ಯರು ಅಪಾರ ಸಂಖ್ಯೆಯ ಮಹಿಳೆಯರು ಪರಸ್ಪರ ಬನ್ನಿ ವಿತರಣೆ ಮಾಡಿ ಶುಭಾಶಯ ಕೋರಿದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ