ಕನ್ನಡ ಭಾಷೆ ಮನೆ ಮನೆಗಳಲ್ಲಿ ಮೊಳಗಲಿ: ನ.28 ರಂದು ಕನ್ನಡ ಸಂಘ ಉದ್ಘಾಟನೆ- ನಾಗರಾಜ.
ಕನ್ನಡ ಭಾಷೆ ಮನೆ ಮನೆಗಳಲ್ಲಿ ಮೊಳಗಲಿ: ನ.28 ರಂದು ಕನ್ನಡ ಸಂಘ ಉದ್ಘಾಟನೆ- ನಾಗರಾಜ. ರಾಯಚೂರು,ನ.25- ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕನ್ನಡ ಸಂಘದ ಕಾರ್ಯ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ನ.28 ರಂದು ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಸಂಘದ ಅಧ್ಯಕ್ಷ ಪಲುಗುಲ ನಾಗರಾಜ್ ಹೇಳಿದರು. ಅವರಿಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ನ.28 ರಂದು ನಗರದ ಬೊಳಮಾನದೊಡ್ಡಿ ರಸ್ತೆಯ ಶಾರದಾ ವಿದ್ಯಾನಿಕೇತನ ಶಾಲೆಯಲ್ಲಿ ಸಂಜೆ 5.30ಕ್ಕೆ ನಡೆಯುವ ಕಾರ್ಯಕ್ರಮ ಉದ್ಘಾಟನೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಷಿ ನೆರವೇರಿಸಲಿದ್ದು ಅಧ್ಯಕ್ಷತೆಯನ್ನು ಕನ್ನಡ ಸಂಘದ ಅಧ್ಯಕ್ಷ ಪಲಗುಲ ನಾಗರಾಜ್ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ರಾಯಚೂರು ವಿವಿ ಕುಲಪತಿ ಪ್ರೊ.ಡಾ.ಹರೀಶ ರಾಮಸ್ವಾಮಿ, ಮಾಜಿ ಶಾಸಕ ಎಂ.ಪಾಪಾರೆಡ್ಡಿ,ಜಿಲ್ಲಾ ಕಸಾಪ ಅಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ, ಕರ್ನಾಟಕ ಸಂಘದ ಅಧ್ಯಕ್ಷ ಕೆ.ಶಾಂತಪ್ಪ, ಹಿರಿಯ ಸಾಹಿತಿ ಡಾ.ಜಯಲಕ್ಷ್ಮೀ ಮಂಗಳಮೂರ್ತಿ,ಮಾಲತಿ ಮಹೇಶ್ ಜೋಷಿ,ದಾಸೋತ್ಸವ ಸಮಿತಿ ಅಧ್ಯಕ್ಷ ವೆಂಕಟರಾವ್ ಕುಲಕರ್ಣಿ, ಕನ್ನಡ ಸಂಘ ಕಾರ್ಯದರ್ಶಿ ಪ್ರಸನ್ನ ಆಲಂಪಲ್ಲಿ ಮುಂತಾದವರು ಉಪಸ್ಥಿತರಿರಲಿದ್ದು ಇದೆ ಸಂದರ್ಭದಲ್ಲಿ ಸೈಯದ್ ವಲಿ ಮುಜಾವರ್ ರವರ ಮಸ್ತಕಧಾರೆ ಕೃತಿ ಲೋಕಾರ್ಪಣೆಯಾಗಲಿದೆ ಎಂದರು.
ಕನ್ನಡ ಸಂಘ ಸ್ಥಾಪನೆ ಯಾವುದೆ ಇನ್ನಿತರ ಸಂಘ ಸಂಸ್ಥೆಗಳಿಗೆ ಪೈಪೋಟಿ ನೀಡಲು ಅಲ್ಲ ಕನ್ನಡ ಭಾಷೆ ಉಳಿಸಿ ಬೆಳೆಸಲು ಮನೆ ಮನೆಯಲ್ಲಿ ಕನ್ನಡ ಸಂಘಗಳು ಉದಯಿಸಬೇಕು ಎಂದ ಅವರು ನಾವೆಲ್ಲರು ಕನ್ನಡತನ ಬೆಳೆಸಲು ಬಧ್ದರಾಗಿ ಕನ್ನಡ ಸಂಘ ಸ್ಥಾಪಿಸುತ್ತಿದ್ದೇವೆಂದರು. ಈ ಸಂದರ್ಭದಲ್ಲಿ ಪ್ರಸನ್ನ ಆಲಂಪಲ್ಲಿ, ವಸುಧೇಂದ್ರ ಸಿರವಾರ, ಸಂಗಮೇಶ ಮಂಗಾನವರ್, ಸೈಯದ್ ವಲಿ ಮುಜಾವರ್ ಇದ್ದರು.
Comments
Post a Comment