ಡಿ.4 ರಂದು ಉಚಿತ 'ಐಎಎಸ್ ಓರಿಯೆಂಟೆಷನ್' ಕಾರ್ಯಕ್ರಮ

 


ಡಿ.4 ರಂದು ಉಚಿತ 'ಐಎಎಸ್ ಓರಿಯೆಂಟೆಷನ್' ಕಾರ್ಯಕ್ರಮ

ರಾಯಚೂರು,ನ.29- ಐಎಎಸ್,ಐಪಿಎಸ್, ಕೆಎಎಸ್ ಸೇರಿದಂತೆ ಯುಪಿಎಸ್ಸಿ ಸಂಬಂಧಿತ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ರಾಯಚೂರು ಜಿಲ್ಲೆಯ ವಿದ್ಯಾರ್ಥಿಗಳಿಗೆ ಉಚಿತ ಓರಿಯೆಂಟೆಷನ್ ಕಾರ್ಯಕ್ರಮ ಡಿ.4, ಸೋಮವಾರ ನಗರದ ಶ್ರೀ ವೆ೦ಕಟೇಶ್ವರ ಕಾಲೇಜಿನಲ್ಲಿ ನಡೆಯಲಿದೆ.

ಸಮುತ್ಕರ್ಷ ಐಎಎಸ್ ಅಕಾಡೆಮಿ ಹುಬ್ಬಳ್ಳಿ & ಶ್ರೀ ವೆ೦ಕಟೇಶ್ವರ ಕಾಲೇಜು,ಮ೦ತ್ರಾಲಯ ರಸ್ತೆ, ರಾಯಚೂರು ಸಹಯೋಗದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಯುಪಿಎಸ್ಸಿ ಸಂಬಂಧಿತ ಪರೀಕ್ಷಾ ತಯಾರಿ ನಡೆಸುತ್ತಿರುವವರಿಗಾಗಿ ಅಂದು ಬೆಳಿಗ್ಗೆ 11 ರಿಂದ 1 ಗ೦ಟೆಯವರೆಗೆ ಎರಡು ಗಂಟೆಗಳ ಕಾಲ 'ಐಎಎಸ್ ಪರೀಕ್ಷೆಯನ್ನು ಎದುರಿಸಿ, ಉತ್ತೀರ್ಣರಾಗುವುದು ಹೇಗೆ ?' ಎಂಬ ವಿಷಯದ ಮೇಲೆ ಉಚಿತ ಓರಿಯೆಂಟೆಷನ್ ಕಾರ್ಯಕ್ರಮ ನಡೆಯಲಿದೆ. ಪದವಿ ಮುಗಿಸಿರುವ ಅಥವಾ ಅಂತಿಮ ವರ್ಷದಲ್ಲಿ ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಆಗಮಿಸಲು ಅವಕಾಶವಿದೆ. ಹೆಚ್ಚಿನ ಮಾಹಿತಿಗಾಗಿ 9663400284 ಸಂಪರ್ಕಿಸಬಹುದಾಗಿದೆ ಎಂದು ಅಶೋಕ್ ಪಾಟೀಲ್ ಅತ್ತನೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್