ರಾಜ್ಯೋತ್ಸವ ಪಥಸಂಚಲನ: ಜಹೀರಾಬಾದ ಸರಕಾರಿ ಪ್ರೌಢಶಾಲೆಗೆ ಪ್ರಥಮ ಸ್ಥಾನ
ರಾಜ್ಯೋತ್ಸವ ಪಥಸಂಚಲನ: ಜಹೀರಾಬಾದ ಸರಕಾರಿ ಪ್ರೌಢಶಾಲೆಗೆ ಪ್ರಥಮ ಸ್ಥಾನ ರಾಯಚೂರು,ನ.೧- ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ ಕರ್ನಾಟಕ ರಾಜ್ಯೋತ್ಸವ-೨೦೨೩ ರ ದಿನಾಚರಣೆಯಂದು ಆಯೋಜಿಸಿದ ಪಥಸಂಚಲನದಲ್ಲಿ ಭಾಗವಹಿಸಿ ಸರಕಾರದ ವತಿಯಿಂದ ನಗದು ಬಹುಮಾನ ಹಾಗೂ ಟ್ರೋಫಿಯೊಂದಿಗೆ ಪ್ರಥಮ ಸ್ಥಾನ ಪಡೆದ ಸರಕಾರಿ ಪ್ರೌಢಶಾಲೆ ಜಹೀರಾಬಾದ ನ ತಂಡದ ನಾಯಕಿ ಕುಮಾರಿ ಪರಿಬಾನು ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಉಪನಿರ್ದೇಶಕರಾದ ಶ್ರೀ ಸುರೇಶ್ ಹುಗ್ಗಿ,ಜಿಲ್ಲಾ ಯೋಜನಾ ಉಪ ಸಮನ್ವಯಾಧಿಕಾರಿಗಳಾದ ಇಂದಿರಾ ಆರ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಚಂದ್ರಶೇಖರ ಭಂಡಾರಿ ಶಿವಕುಮಾರ, ರಾಯಚೂರು ಕೇಂದ್ರ ವಲಯದ ಮಲ್ಲಪ್ಪ ಮುಖ್ಯಗುರುಗಳು ರಾಜಶ್ರೀ ಸಜ್ಜನ್ ದೈ.ಶಿ.ಶಿ ಸರಕಾರಿ ಪ್ರೌಢಶಾಲೆ ಜಹೀರಾಬಾದ ನ ಶಿಕ್ಷಕರುಗಳಾದ ತಾರಾನಾಥ ರಾವ್ ಜೇಗರಕಲ್ ,ರಾಘವೇಂದ್ರ ಕುಲಕರ್ಣಿ ಆರೀಪ್ ಅಲಿ, ಲೀಲಾವತಿ ,ಅಶ್ವಿನಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
Thnq jaykumar
ReplyDelete