ರೈಲ್ವೆ ಪೊಲೀಸ್ ಇನ್ಸ್ಪೆಕ್ಟರ್ ಅಭಿಷೇಕ್ ಕುಮಾರ ದುರ್ವರ್ತನೆ ಖಂಡಿಸಿ ಮತ್ತು ಅವರ ಮೇಲೆ ಶಿಸ್ತು ಕ್ರಮಕ್ಕೆ ಆಗ್ರಹಿಸಿ ಪತ್ರಕರ್ತರಿಂದ ಜಿಲ್ಲಾಧಿಕಾರಿಗಳಿಗೆ ಮನವಿ

 


 


ರೈಲ್ವೆ ಪೊಲೀಸ್ ಇನ್ಸ್ಪೆಕ್ಟರ್ ಅಭಿಷೇಕ್ ಕುಮಾರ  ದುರ್ವರ್ತನೆ ಖಂಡಿಸಿ ಮತ್ತು ಅವರ ಮೇಲೆ ಶಿಸ್ತು ಕ್ರಮಕ್ಕೆ ಆಗ್ರಹಿಸಿ ಪತ್ರಕರ್ತರಿಂದ ಜಿಲ್ಲಾಧಿಕಾರಿಗಳಿಗೆ ಮನವಿ

ರಾಯಚೂರು,ನ.23- ರೈಲ್ವೆ ಪೊಲೀಸ್ ಇನ್ಸ್ಪೆಕ್ಟರ್ ಅಭಿಷೇಕ್ ಕುಮಾರ  ದುರ್ವರ್ತನೆ ಖಂಡಿಸಿ ಮತ್ತು ಅವರ ಮೇಲೆ ಶಿಸ್ತು ಕ್ರಮಕ್ಕೆ ಆಗ್ರಹಿಸಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ರಾಯಚೂರು ರಿಪೋಟರ‍್ಸ್ ಗಿಲ್ಡ್ ವತಿಯಿಂದ  ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ಸುದ್ದಿ ಮಾಡಲು ಹೋಗಿದ್ದ  ಸುವರ್ಣ ವಾಹಿನಿಯ ಜಿಲ್ಲಾ ವರದಿಗರರಾದ ಜಗನ್ನಾಥ ಪೂಜಾರ್ ಮತ್ತು ಅವರ ಕ್ಯಾಮರಾಮನ್ ಶ್ರೀನಿವಾಸ ಇವರ ಮೇಲೆ ರೈಲ್ವೆ ಪಿಎಸ್‌ಐ ಅಭಿಷೇಕ್ ಕುಮಾರ ಇವರು ಗೂಂಡಾ ವರ್ತನೆ ತೋರಿರುವುದು ಅಕ್ಷಮ್ಯ ಅಪರಾಧವಾಗಿದೆ. ಇದನ್ನು ಉಭಯ ಸಂಘಟನೆಗಳು ತೀವ್ರವಾಗಿ ಖಂಡಿಸುತ್ತದೆ. 

 ರಾಯಚೂರು ಸಮೀಪದ ಯರಮರಸ್ ರೈಲ್ವೆ ನಿಲ್ದಾಣದಲ್ಲಿ ಕಲ್ಲಿದ್ದಲು ಕಳ್ಳತನದ ವರದಿ ಕುರಿತಂತೆ ಕೆಪಿಸಿ ಅಧಿಕಾರಿಗಳ ತಂಡ ಪರಿಶೀಲನೆಗಾಗಿ ಆಗಮಿಸಿತ್ತು. ಇದರ ವರದಿಗಾಗಿ ನಾಲ್ಕಾರು ವರದಿಗಾರರು ಹೋಗಿದ್ದರು, ಅವರ ಜೊತೆ ಸುವರ್ಣ ವಾಹಿನಿ ವರದಿ ಜಗನ್ನಾಥ ಪೂಜಾರ ಮತ್ತು ಅವರ ಕ್ಯಾಮರಾಮನ್ ಶ್ರೀನಿವಾಸ ಸುದ್ದಿ ಮಾಡುತ್ತಿರುವಾಗ ಪಿಎಸ್‌ಐ ಅಭಿಷೇಕ ಕುಮಾರ  ಯಾರ ಅನುಮತಿ ಮೇಲೆ ರೈಲ್ವೆ ಫ್ಲಾಟ್‌ಫಾರಂ ಮೇಲೆ ಬಂದಿದ್ದೀರಿ ಎಂದು ಪ್ರಶ್ನಿಸಿ ತಮ್ಮ ಇತರ ಪೇದೆಗಳೊಂದಿಗೆ ವಿಡೀಯೋ ಮಾಡದಂತೆ ಬೆದರಿಕೆ ಹಾಕಿದ್ದು ಕ್ಯಾಮರಾ ಜಪ್ತಿ ಮಾಡಿದ್ದಾರೆ.  ನಂತರ ವಾಹಿನಿ ವರದಿಗಾರನನ್ನು ಪೊಲೀಸ್ ವಾಹನದಲ್ಲಿ ಕೂರಿಸಿಕೊಂಡು ನಾಲ್ಕು ತಾಸುಗಳವರೆಗೆ ತಿರುಗಾಡಿಸಿ ಏನೂ ತಪ್ಪು ಮಾಡದ ವರದಿಗಾರನಿಂದ ತಮಗೆ ಬೇಕಾದಂತೆ ತಪ್ಪೊಪ್ಪಿಗೆ ಬರೆಸಿಕೊಂಡು ಶಕ್ತಿನಗರದ ಗೆಸ್ಟ್ ಹೌಸ್ ಬಳಿ ಬಿಟ್ಟು ಕಳಿಸಿದ್ದಾರೆ. 


ಈ ಘಟನೆ ಮಾನವ ಹಕ್ಕುಗಳ ಉಲ್ಲಂಘನೆ ಜೊತೆಗೆ ರೈಲ್ವೆ ಪೊಲೀಸ್ ದೌರ್ಜನ್ಯವಾಗಿರುತ್ತದೆ.  ಈ ಘಟನೆಯನ್ನು ಉಭಯ ಸಂಘಟನೆಗಳು ತೀವ್ರವಾಗಿ ಖಂಡಿಸುತ್ತವೆ.  ಇದರ ಜೊತೆಗೆ ಪಿಎಸ್ ಅಭೀಷೇಕ್ ಕುಮಾರ ಅವರ ವಿರುದ್ಧ ಕಾನೂನು ಪ್ರಕಾರ ಶಿಸ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು.                                                 

 ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಆರ್.ಗುರುನಾಥ, ರಾಯಚೂರು ರಿಪೋಟರ‍್ಸ್ ಗಿಲ್ಡ್  ಅಧ್ಯಕ್ಷ ಚೆನ್ನಬಸವಣ್ಣ, ಪತ್ರಕರ್ತರಾದ ಬಿ.ವೆಂಕಟಸಿಂಗ್, ಶಿವಮೂರ್ತಿ ಹೀರೆಮಠ, ಬಸವರಾಜ ನಾಗಡದಿನ್ನಿ, ವಿಜಯಜಾಗಟಗಲ್ ,ಪಾಷಾ ಹಟ್ಟಿ, ಜಗನ್ನಾಥ ಪೂಜಾರಿ , ರಾಮಕೃಷ್ಣ ದಾಸರಿ, ಸಿದ್ದಯ್ಯ ಸ್ವಾಮಿ ಕುಕನೂರು ,ಸುರೇಶ್ ರೆಡ್ಡಿ, ಮಲ್ಲಿಕಾರ್ಜುನಯ್ಯ ,ನೀಲಕಂಠಸ್ವಾಮಿ, ವಿಶ್ವನಾಥ್ ಹೂಗಾರ, ಭೀಮೇಶ , ನಾಗರಾಜ್, ಜಯಕುಮಾರ ದೇಸಾಯಿ ಕಾಡ್ಲೂರು, ಜಯರಾಮ, ಆನಂದ ಕುಲಕರ್ಣಿ, ರಾಚಯ್ಯ ಸ್ವಾಮಿ, ಪ್ರಸನ್ನಕುಮಾರ್ ಜೈನ್,ಸಣ್ಣ ಈರಣ್ಣ, ಮುತ್ತಣ್ಣ, ಮಹಿಪಾಲರೆಡ್ಡಿ, ರವಿಕುಮಾರ್, ಚೆನ್ನು, ಶ್ರೀನಿವಾಸ, ಖಾದರ್, ಜಿಲಾನಿ,ಯಲ್ಲಪ್ಪ, ವೀರೇಶ,ಶಿವು,ಬಾಲು,ಅಯ್ಯಪ್ಪ ಪಿಕಲಿಹಾಳ ಇನ್ನಿತರರು ಇದ್ದರು .







Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್