ಮಂತ್ರಾಲಯದಲ್ಲಿ ವೈಭವದಿಂದ ತುಂಗಾರತಿ ಕಾರ್ಯಕ್ರಮ: ದೀಪ ಪ್ರಜ್ವಾಲನೆಯಿಂದ ಭಗವಂತನ ಅನುಗ್ರಹ ಪ್ರಾಪ್ತಿ- ಶ್ರೀ ಸುಬುಧೇಂದ್ರತೀರ್ಥರು.
ಮಂತ್ರಾಲಯದಲ್ಲಿ ವೈಭವದಿಂದ ತುಂಗಾರತಿ ಕಾರ್ಯಕ್ರಮ: ದೀಪ ಪ್ರಜ್ವಾಲನೆಯಿಂದ ಭಗವಂತನ ಅನುಗ್ರಹ ಪ್ರಾಪ್ತಿ- ಶ್ರೀ ಸುಬುಧೇಂದ್ರತೀರ್ಥರು. ರಾಯಚೂರು,ನ.27- ದೀಪ ಪ್ರಜ್ವಾಲನೆಯಿಂದ ಭಗವಂತನ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀ ಪಾದಂಗಳವರು ಹೇಳಿದರು.
ಅವರಿಂದು ಮಂತ್ರಾಲಯದಲ್ಲಿ ತುಂಗಭದ್ರಾ ನದಿಯಲ್ಲಿ ತುಂಗಾರತಿ ನೆರವೇರಿಸಿ ಅನುಗ್ರಹ ಸಂದೇಶ ನೀಡಿದರು. ಕಾರ್ತಿಕ ಮಾಸದಲ್ಲಿ ದೀಪವನ್ನು ಬೆಳಗುವುದರಿಂದ ಬೆಳಕಿನತ್ತ ಸಾಗುತ್ತೇವೆ ದೀಪ ಹಚ್ಚುವುದರಿಂದ ಪಾಪ ತೊಲಗುತ್ತವೆ ನಮಗೆ ಉತ್ತಮ ಬುದ್ಧಿ ಲಭಿಸುತ್ತದೆ ಎಂದರು.
ಮೊದಲಿಗೆ ಶ್ರೀ ಪ್ರಹಲ್ಲಾದರಾಜರ ಮೂರ್ತಿಯ ಮೆರವಣಿಗೆ ನದಿ ತೀರದವರೆಗೂ ನೆರವೇರಿತು . ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ದಾಸವಾಣಿ ನಡೆಯಿತು.
Comments
Post a Comment