ಕಾಟೇ ದರ್ವಾಜಾ ಬಳಿ ಕಮಾನು ನಿರ್ಮಾಣ: ಸ್ಥಳದಲ್ಲಿ ಬಿಗುವಿನ ವಾತಾವರಣ.
ಕಾಟೇ ದರ್ವಾಜಾ ಬಳಿ ಕಮಾನು ನಿರ್ಮಾಣ: ಸ್ಥಳದಲ್ಲಿ ಬಿಗುವಿನ ವಾತಾವರಣ. ರಾಯಚೂರು,ನ.30- ನಗರದ ಸೂಪರ್ ಮಾರ್ಕೆಟ್ ಬಳಿಯ ಕಾಟೇ ದರ್ವಾಜಾ ಬಳಿ ಸ್ವಾಗತ ಕಮಾನು ನಿರ್ಮಾಣ ಸ್ಥಳದಲ್ಲಿ ಬೆಳಿಗ್ಗೆ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಬಿಜೆಪಿ ಕಾರ್ಯಕರ್ತರ ಮತ್ತು ಅನ್ಯ ಕೋಮಿನ ಕೆಲ ಯುವಕರ ಮಧ್ಯೆ ವಾಗ್ವಾದ ನಡೆಯಿತು.
ಶಾಸಕ ಡಾ.ಶಿವರಾಜ ಪಾಟೀಲ್, ಮಾಜಿ ಶಾಸಕ ಪಾಪಾರೆಡ್ಡಿ, ಇನ್ನಿತರರು ಉಭಯ ಪ್ರತಿಭಟನಾ ಕರಾರನ್ನು ಸಮಾಧಾನಪಡಿಸಿದರು. ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಮಾಡಿದ್ದ ಪೊಲೀಸರು ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ತಡೆದಿದ್ದಾರೆ ಎನ್ನಲಾಗಿದೆ.
Comments
Post a Comment