ಭಕ್ತಿಯಿದ್ದಲ್ಲಿ ಭಗವಂತ ನೆಲೆಸುತ್ತಾನೆ- ಶ್ರೀ ವಿಶ್ವವಲ್ಲಭ ತೀರ್ಥರು.
ಭಕ್ತಿಯಿದ್ದಲ್ಲಿ ಭಗವಂತ ನೆಲೆಸುತ್ತಾನೆ- ಶ್ರೀ ವಿಶ್ವವಲ್ಲಭ ತೀರ್ಥರು. ರಾಯಚೂರು,ನ.30- ಭಕ್ತಿಯಿದ್ದಲ್ಲಿ ಭಗವಂತ ನೆಲೆಸಿರುತ್ತಾನೆಂದು ಸೋದೆ ಶ್ರೀ ವಾದಿರಾಜತೀರ್ಥ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದಂಗಳವರು ನುಡಿದರು. ಅವರಿಂದು ನಗರದ ಕಾಡ್ಲೂರು ದೇಸಾಯಿಯವರ ನಿವಾಸದಲ್ಲಿ ಪಾದಪೂಜೆ ಸ್ವೀಕರಿಸಿದರು.
ದೇವರ ಮೇಲೆ ಸದಾ ನಿಷ್ಕಲ್ಮಷ ಭಕ್ತಿಯಿರಬೇಕು ಆಗ ಮಾತ್ರ ಇಷ್ಟಾರ್ಥಗಳು ಸಿದ್ಧವಾಗುತ್ತವೆ ಎಂದರು.ದೇವರು ಎಲ್ಲರಿಗೂ ಒಳಿತನ್ನು ಮಾಡಲಿ ಎಂದ ಅವರು ಧರ್ಮ ರಕ್ಷಣೆ ನಮ್ಮೆಲ್ಲರ ಹೊಣೆಯಂದರು. ಈ ಸಂದರ್ಭದಲ್ಲಿ ಜಯಕುಮಾರ ದೇಸಾಯಿ, ವಿಜಯ್ ಕುಮಾರ್,ಪ್ರಹಲ್ಲಾದ, ರಂಗಾಚಾರ್ ಜೋಷಿ, ಸುವರ್ಣ ಬಾಯಿ ದೇಸಾಯಿ, ಬಿಂದು, ಪಲ್ಲವಿ ಇನ್ನಿತರರು ಇದ್ದರು.
Comments
Post a Comment