ಹಿಂದೂ ಧರ್ಮ ಉಳಿದರೆ ಮಾತ್ರ ಬ್ರಾಹ್ಮಣತ್ವ ಉಳಿಯುತ್ತದೆ- ಸೋದೆ ಶ್ರೀ ವಿಶ್ವ ವಲ್ಲಭ ತೀರ್ಥರು.
ಹಿಂದೂ ಧರ್ಮ ಉಳಿದರೆ ಮಾತ್ರ ಬ್ರಾಹ್ಮಣತ್ವ ಉಳಿಯುತ್ತದೆ- ಸೋದೆ ಶ್ರೀ ವಿಶ್ವ ವಲ್ಲಭ ತೀರ್ಥರು. ರಾಯಚೂರು,ನ.28- ಹಿಂದೂ ಧರ್ಮ ಉಳಿದರೆ ಮಾತ್ರ ಬ್ರಾಹ್ಮಣತ್ವ ಉಳಿಯುತ್ತದೆ ಎಂದು ಸೋದೆ ಶ್ರೀ ವಾದಿರಾಜ ಮಠದ ಪೀಠಾಧಿಪತಿಗಳಾದ ಶ್ರೀ ವಿಶ್ವವಲ್ಲಭ ತೀರ್ಥರು ನುಡಿದರು. ಅವರಿಂದು ನಗರದಲ್ಲಿ ಆಶೀರ್ವಚನ ನೀಡಿ ಹಿಂದೂ ಧರ್ಮ ಬಹು ಪುರಾತನ ಧರ್ಮ ಇಲ್ಲಿ ಅನೇಕ ಧಾರ್ಮಿಕ ಸಾಂಸ್ಕೃತಿಕ ಆಚಾರ ವಿಚಾರಗಳಿವೆ ಭಗವಂತನ ಭಕ್ತಿಯ ಬಗ್ಗೆ ಮಹತ್ವವಿದೆ ಭಕ್ತಿಗೆ ನಿದರ್ಶನ ಹನುಮಂತ ದೇವರು ಎಂದ ಅವರು ಶ್ರೀ ವಾದಿರಾಜ ಶ್ರೀಗಳು ಭಕ್ತಿಯ ಬಗ್ಗೆ ಅನೇಕ ಕೃತಿಗಳನ್ನು ರಚಿಸಿದ್ದಾರೆ ಎಂದರು.
ನಗರದಲ್ಲಿ ಯುವಕರು ಭವ್ಯವಾಗಿ ನಮಗೆ ಸ್ವಾಗತ ಕೋರಿದ್ದಾರೆ ಎಂದು ಅವರು ನಗರದ ಪ್ರಮುಖ ರಸ್ತೆಗಳಲ್ಲಿ ಬಜರಂಗಿಯ ಭಾವಚಿತ್ರ ಧ್ವಜಗಳು ರಾರಾಜಿಸಿದವು ಎಂದ ಅವರು ಯುವಕರು ಧರ್ಮ ರಕ್ಷಣೆಗೆ ಮಹತ್ವ ನೀಡಬೇಕೆಂದರು.
ಪ್ರಾರಂಭದಲ್ಲಿ ಕೃಷಿ ವಿವಿಯಿಂದ ನೂರಾರು ದ್ವಿಚಕ್ರ ವಾಹನಗಳ ಮೂಲಕ ಜವಾಹರ್ ನಗರ ರಾಯರ ಮಠಕ್ಕೆ ಶ್ರೀಪಾದಂಗಳವರನ್ನು ಸ್ವಾಗತಿಸಲಾಯಿತು. ನಂತರ ಕೋಟೆಯ ಮುಂಗ್ಲಿ ಪ್ರಾಣದೇವರ ದೇವಸ್ಥಾನದಲ್ಲಿ ಆಶೀರ್ವಚನ ,ತೊಟ್ಟಿಲು ಪೂಜೆ ಹಾಗೂ ಭೂತರಾಜರ ಬಲಿ ನಡೆಯಿತು . ದೇವಸ್ಥಾನ ಸಮಿತಿ ಸದಸ್ಯರು ,ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.
Comments
Post a Comment