ದೀಪಾವಳಿ ದೀಪಗಳ ಕವಿತೆ.
ದೀಪಾವಳಿ ದೀಪಗಳ ಕವಿತೆ.
"ದೀಪ ದೀಪಗಳ ಸಾಲು
ದೀಪಾವಳಿಯ ಕಮಾಲು ಬೆಳಕಿನ ಹಬ್ಬ
ಚಟ ಪಟ ಪಟಾಕಿ ಅಬ್ಬಾ!ಅಬ್ಬಬ್ಬಾ!
ದೀಪದ ಜೊತೆಗೆ
ಬಾಂಧವ್ಯ ಬೆಸೆಯುವ
ಬಗೆ ಭಾರತೀಯ
ಸಂಸ್ಕೃತಿಯ ಸೊಗೆ
ಅಳೆತನ ಹೆಸರು
ಹೊಸತನ ಹೆಣ್ಣಿಗೆ ತವರು ಅವಳೆ
ದೀಪ ತವರಿನ ಉಸಿರು
ಹೆಂಗಳೆಯರ ಕಾಪಾಡಿ
ಸೆರೆ ಬಿಡಿಸಿದ ಶ್ರೀಕೃಷ್ಣ
ನರಕಾಸುರನ ಸಂಹರಿಸಿದ ಮಧುಸೂದನ
ಕಾತಿ೯ಕ ದಾಮೋದರನಿಗೆ ಆರುತಿ ಹರುಷದಿ ಬೆಳಗಿದ ಸುಭದ್ರೆ
ಅಣ್ಣ ತಂಗಿಯರ
ಪ್ರೀತಿಯ ಬೆಸುಗೆಯ
ಬೆಳಗಿದ ಹಣತೆ
ಪ್ರಣತಿಯ ಪ್ರತಿ
ಬೆಳಕು ತೊಳೆಯಲಿ
ಮನಸಿನ ಕೊಳಕು
ದೀಪಾವಳಿಯ ದೀವಿಗೆ
ಪ್ರಭಾವಳಿಯ ನಲಿವಿಗೆ
ತುಂಬಿರಲಿ ನಗುವಿನ ಸಿಹಿ ಹೋಳಿಗೆ ಪ್ರತಿಯೊಬ್ಬರ ಬಾಳಿಗೆ ........ "
-ಶ್ರೀಮತಿ ಭಾರತಿ ಗುರುರಾಜ ಕುಲಕರ್ಣಿ, ಸಾವಿತ್ರಿ ಕಾಲೋನಿ, ರಾಯಚೂರು.
ಅದ್ಬುತವಾದ ಕವಿತೆ
ReplyDelete