"ಸಮಾಜ-ಮಾಧ್ಯಮ-ಹೋರಾಟ" ಒಂದು ಅವಲೋಕನ ಕಾರ್ಯಕ್ರಮ ಉದ್ಘಾಟನೆ: ಮಾಧ್ಯಮ ಕ್ಷೇತ್ರದಲ್ಲಿ ಸಮಷ್ಟಿ ಭಾವ ಕ್ಷೀಣಿಸುತ್ತಿದೆ- ಕಪಗಲ್.


"ಸಮಾಜ-ಮಾಧ್ಯಮ-ಹೋರಾಟ" ಒಂದು ಅವಲೋಕನ ಕಾರ್ಯಕ್ರಮ ಉದ್ಘಾಟನೆ:                                 
ಮಾಧ್ಯಮ ಕ್ಷೇತ್ರದಲ್ಲಿ ಸಮಷ್ಟಿ ಭಾವ ಕ್ಷೀಣಿಸುತ್ತಿದೆ- ಕಪಗಲ್.       
                    ರಾಯಚೂರು,ನ.23- ಮಾಧ್ಯಮ ಕ್ಷೇತ್ರದಲ್ಲಿ ಸಮುಷ್ಠಿ ಭಾವ ಕ್ಷೀಣಿಸುತ್ತಿದೆ ಎಂದು ಹಿರಿಯ ಪತ್ರಕರ್ತರಾದ ಮೃತ್ಯುಂಜಯ ಕಪಗಲ್ ಅಭಿಪ್ರಾಯ ವ್ಯಕ್ತಪಡಿಸಿದರು.              ಅವರಿಂದು ನಗರದ ಪತ್ರಿಕಾ ಭವನದಲ್ಲಿ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಅಂಗವಾಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ರಾಯಚೂರು ರಿಪೋರ್ಟ್ರಸ್ ಗಿಲ್ಡ್ ವತಿಯಿಂದ ಹಮ್ಮಿಕೊಂಡಿದ್ದ "ಸಮಾಜ-ಮಾಧ್ಯಮ-ಹೋರಾಟ" ಒಂದು ಅವಲೋಕನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.  ಮಾಧ್ಯಮ ಕ್ಷೇತ್ರ ಅನೇಕ ಬದಲಾವಣೆ ಕಂಡಿದೆ ಈ ಹಿಂದೆ ಸಮಾಜ ನಂತರ ಕುಟುಂಬ ತದನಂತರ ವ್ಯಕ್ತಿ ಎಂಬ ಸಮುಷ್ಠಿ ಭಾವ ಇತ್ತು ಈಗ ಅದು ವ್ಯತಿರಿಕ್ತವಾಗಿದ್ದು ನಾನು, ನನ್ನ ಕುಟುಂಬ ನಂತರ ಸಮಾಜ ಎಂಬ ಸ್ವಾರ್ಥ ಮನೆ ಮಾಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಪತ್ರಿಕಾ ರಂಗ ಉದ್ಯಮವಾಗಿದೆ ಅದು ತಪ್ಪಲ್ಲ ಏಕೆಂದರೆ ಪತ್ರಿಕಾ ಸಿಬ್ಬಂದಿಗೆ ಸಂಬಳ, ಪತ್ರಿಕಾ ಮುದ್ರಣ ಖರ್ಚು ವೆಚ್ಚಗಳಿಗೆ ಆರ್ಥಿಕ ಸದೃಡತೆ ಅನಿವಾರ್ಯ ಆದರೆ ಪತ್ರಿಕೋದ್ಯಮ ಜನರಿಗೆ ಸ್ಪಂದಿಸಿವಂತೆ ಇರಬೇಕು ಎಂದರು. ಜಿಲ್ಲೆ ಅನೇಕ ಚಳುವಳಿ ಹೋರಾಟ ಕಂಡಿದೆ ಎಂದು ಅಂದಿನ ದಿನಗಳನ್ನು ಮೆಲುಕು ಹಾಕಿದರು.

ಹೋರಾಟಗಾರ ರಾಘವೇಂದ್ರ ಕುಷ್ಟಗಿ ಮಾತನಾಡಿ ನಾನು ಸಹ ಪತ್ರಿಕಾ ಕ್ಷೇತ್ರದಲ್ಲಿ ಕೆಲ ದಿನ ತೊಡಗಿಸಿಕೊಂಡಿದ್ದೆ ನಂತರ ಹೋರಾಟಗಾರನಾದೆ   ಎಂದ ಅವರು ಗಾಂಧೀಜಿ, ಅಂಬೇಡ್ಕರ್  ಸಹ ಪತ್ರಿಕೆ ಸ್ಥಾಪಿಸಿದ್ದರು ಎಂದರು.ಪತ್ರಿಕಾ ಕ್ಷೇತ್ರದಲ್ಲಿ ಪ್ರಾಮಾಣಿಕತೆ ಎಂಬ ರಕ್ತ ಕಣಗಳು ಕ್ಷೀಣಿಸುತ್ತಿದ್ದು ಇದು ಸಮಾಜಕ್ಕೆ ಮಾರಕವೆಂದ ಅವರು ಮಾಧ್ಯಮ ಸಮಾಜದ ರಕ್ಷಣೆ ಬದಲಿಗೆ ಭಕ್ಷಣೆ ಮಾಡುತ್ತಿದೆ ಎಂದರು.ಮಾಧ್ಯಮ ಏಕ ಮುಖವಾಗುತ್ತದೆ ಸರ್ಕಾರಗಳ ಕಪಿಮುಷ್ಠಿಯಲ್ಲಿವೆ ಸರ್ಕಾರದ ವಿರುದ್ದ ಧ್ವನಿ ಎತ್ತುವ ಅನೇಕ ಪತ್ರಕರ್ತರು ಕೆಲಸ ಕಳೆದುಕೊಂಡಿದ್ದಾರೆ ಅನೇಕರು ಸೆರೆವಾಸ ಅನುಭವಿಸುತ್ತಿದ್ದಾರೆ ಸಮಾಜ ಸುಧಾರಣೆ ಮತ್ತು ಭ್ರಷ್ಟಾಚಾರ ವಿರುಧ್ದ ಧ್ವನಿಯತ್ತಿದ    ಪತ್ರಕರ್ತರ ಕೊಲೆಗಳು ಸಹ ನಡೆದಿವೆ ಜಗತ್ತಿನ 180 ರಾಷ್ಟ್ರ ಗಳು ಪೈಕಿ  ನಮ್ಮ ದೇಶ ಪತ್ರಿಕಾ ಸ್ವಾತಂತ್ರ್ಯ ಶ್ರೇಣಿಯಲ್ಲಿ 160 ನೇ ಸ್ಥಾನದಲ್ಲಿದೆ ಅದು ಇನ್ನೂ ಕಡಿಮೆ ಸ್ಥಾನಕ್ಕೆ ಬರಬೇಕು ನಾವು ವಿಶ್ವಗುರು ಆಗುವ ಮೊದಲು ಪತ್ರಿಕಾ ಸ್ವಾತಂತ್ರ್ಯ ಕಾಪಾಡುವುದು ಮುಖ್ಯವಾಗಿದೆ ಎಂದರು. ಹೋರಾಟಗಳಿಗೆ ಮಾಧ್ಯಮ ವೇಗ ವರ್ಧಕವಾಗಿ ಬೇಕೆಂದು ಅವರು ಹೋರಾಟಗಳು ಪರಿಪೂರ್ಣವಾಗಿರಬೇಕೆಂದರು. ರೈಲ್ವೇ ನೇಮಕ, ಕರೋನಾ ಸಂದರ್ಭದಲ್ಲಿ ಬಡ ಕಾರ್ಮಿಕರು ನೂರಾರು ಕಿ.ಮಿ ಕಾಲ್ನಡಿಗೆ ಬಗ್ಗೆ ಮಾಧ್ಯಮ ಗಟ್ಟಿ ಧ್ವನಿ ಮೊಳಗಿಸಲಿಲ್ಲ ಆದರೆ ಸಾಮಾಜಿಕ ಜಾಲತಾಣ ಆ ಕೆಲಸ ಮಾಡಿದೆ ಎಂದರು. ಹೋರಾಟಗಳಿಗೆ ಪತ್ರಿಕಾರಂಗ ಪೂರಕವಾಗಿ ಕೆಲಸ ಮಾಡಲಿ ಎಂದರು.

ರೈತ ಮುಖಂಡರಾದ ಚಾಮರಸ ಮಾಲಿಪಾಟೀಲ ಮಾತನಾಡಿ ಜಿಲ್ಲೆ ಅನೇಕ ಹೋರಾಟದ ತವರೂರು ನಾನು ಮೂಲತಃ ಒಕ್ಕಲುತನ ಕುಟುಂಬದಿಂದ ಬಂದವನು ಆದರೆ ಆಕಸ್ಮಿಕವಾಗಿ ರೈತ ಹೋರಾಟಗಾರನಾಗಿ ರೂಪುಗೊಂಡೆ ಎಂದು ಅಂದಿನ ದಿನಗಳನ್ನು ಸ್ಮರಿಸಿಕೊಂಡು ಅವರು ಸ್ವಾತಂತ್ರ್ಯ ಚಳುವಳಿ ವೇಳೆ ಇಂದಿನ ಹಾಗೆ ಸಂಪರ್ಕ ಕ್ರಾಂತಿ ಇರಲಿಲ್ಲ ಆಧುನಿಕತೆ ಇರಲಿಲ್ಲ ಆದರೂ ಸ್ವಾತಂತ್ರ್ಯ ಚಳುವಳಿ ಯಶಸ್ವಿಯಾಗಲು ಮುಖ್ಯ ಕಾರಣ ಪ್ರಾಮಾಣಿಕತೆ ಮತ್ತು ಸ್ವಾಭಿಮಾನ ಅದು ಈಗಿನ ಚಳುವಳಿಗಳಲ್ಲಿ ಕಡಿಮೆಯಾಗುತ್ತಿದೆ ಎಂದರು. ಮಾಧ್ಯಮಗಳು ಅಭಿವೃದ್ದಿಗ ಒತ್ತು ನೀಡುವ ಬದಲು ಬ್ರೇಕಿಂಗ್ ನ್ಯೂಸ್ ಹಿಂದೆ ಬಿದ್ದಿವೆ ಒಬ್ಬ ನಟನ ನಿಧನ ಸುದ್ದಿ ವಾರಗಟ್ಟಲೆ ಪ್ರಸಾರ ಮಾಡುತ್ತವೆ ರೈತರ‌ ಮತ್ತು ಕೃಷಿ ಬಿಕ್ಕಟ್ಟು ಬಗ್ಗೆ ಹೆಚ್ಚು ಪ್ರಾಶಸ್ತ್ಯ ನೀಡಬೇಕು ಎಂದರು . ತುಂಗಭದ್ರಾ ಎಡದಂಡೆ ನಾಲೆ ಬಿರುಕು ಬಿಟ್ಟಾಗ ಅಂದಿನ ಸಿಎಂ ಧರಂ ಸಿಂಗ್ ಭೇಟಿ ನೀಡಿದಾಗಿನ ಕ್ಷಣಗಳನ್ನು ಹಂಚಿಕೊಂಡರು ಯಡಿಯೂರಪ್ಪ ಸಿಎಂ ಆಗಿದ್ದಾಗ ನಾಲೆ ಆಧುನೀಕರಣಕ್ಕೆ ಅನುದಾನ ಭರವಸೆ ನೀಡಿದರು ಅದು ಹುಸಿಯಾದಾಗ ಅವರ ‌ವಿರುದ್ಧ ಪ್ರತಿಭಟನೆ ಮಾಡಿದ್ದನ್ನು ಮೆಲಕು ಹಾಕಿದರು.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ  ಆರ್. ಗುರುನಾಥ ಮಾತನಾಡಿ ಜಿಲ್ಲೆ ಅನೇಕ ಹೋರಾಟಗಾರರನ್ನು ಕೊಡುಗೆಯಾಗಿ ನೀಡಿದೆ ನೈಜ ಹೋರಾಟಗಾರರನ್ನು ಸಹ ಕನಿಷ್ಟವಾಗಿ ನೋಡುವ ಪರಿಸ್ಥಿತಿ ಬಂದಿದೆ ಎಂದ ಅವರು ಹೋರಾಟಗಾರರು ಬಗ್ಗೆ ಹಗುರ ಮಾತು ಸಲ್ಲದು ಹೋರಾಟದ ಗಂಧ ಗಾಳಿ ತಿಳಿಯದವರು ಸಹ ಮಾತನಾಡುತ್ತಿದ್ದಾರೆ ಅದಕ್ಕೆ ಕಡಿವಾಣ ಬೀಳಬೇಕು ಎಂದು ಮಾರ್ಮಿಕವಾಗಿ ಮಾತನಾಡಿದರು.

ಪ್ರಾಸ್ತಾವಿಕವಾಗಿ ರಾಯಚೂರು ರಿಪೋರ್ಟ್ರಸ್ ಗಿಲ್ಡ್ ಅಧ್ಯಕ್ಷ ಚೆನ್ನಬಸವಣ್ಣ ಮಾತನಾಡಿ ಪ್ರತಿ ವರ್ಷ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಅಂಗವಾಗಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ ಈ ಬಾರಿ ವಿನೂತನವಾಗಿ ಈ ಒಂದು ಕಾರ್ಯಕ್ರಮ ಹಮ್ಮಿಕೊಂಡಿದ್ದು ಪತ್ರಕರ್ತರು ಅನೇಕ ಹೋರಾಟಗಳಿಗೆ ಸಾಕ್ಷಿ ಬೂತರಾಗಿದ್ದಾರೆ ಎಂದರು. ರಾಯಚೂರು ರಿಪೋರ್ಟ್ರಸ್ ಗಿಲ್ಡ್ ಪ್ರಧಾನ ಕಾರ್ಯದರ್ಶಿ ವಿಜಯ ಜಾಗಟಗಲ್ ಮಾತನಾಡಿ ಸಮಾಜ ಮತ್ತು ಹೋರಾಟಕ್ಕೆ ಮಾಧ್ಯಮ ಪೂರಕವಾಗಿರುತ್ತದೆ ಎಂದ ಅವರು ಕಾರ್ಯಕ್ರಮಕ್ಕೆ ಆಗಮಿಸಿದ ಸರ್ವರಿಗೂ ಅಭಿನಂದಿಸಿ ವಂದನಾರ್ಪಣೆ ಗೈದರು. ವೇದಿಕೆ ಮೇಲೆ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಶಿವಮೂರ್ತಿ ಹಿರೇಮಠ,ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಪಾಷಾ ಹಟ್ಟಿ ಇದ್ದರು.ವಿಶ್ವನಾಥ ಹೂಗಾರ ಪ್ರಾರ್ಥಿಸಿದರು ,ಸಿದ್ದಯ್ಯ ಸ್ವಾಮಿ ಕುಕನೂರು ಸ್ವಾಗತಿಸಿದರು, ನೀಲಕಂಠ ಸ್ವಾಮಿ ಕಾರ್ಯಕ್ರಮ ನಿರೂಪಿಸಿದರು. ಹಿರಿಯ, ಕಿರಿಯ ಪತ್ರಕರ್ತರು ಪಾಲ್ಗೊಂಡಿದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್