ಭಗವದ್ಭಕ್ತಿ ಯನ್ನು ಜನಸಾಮಾನ್ಯರಲ್ಲಿ ಬಿತ್ತಿದ ಹರಿದಾಸ ಶ್ರೇಷ್ಠರು ಶ್ರೀ ವಿಜಯದಾಸರು -ಮುರಳಿಧರ ಕುಲಕರ್ಣಿ


 ಭಗವದ್ಭಕ್ತಿ ಯನ್ನು ಜನಸಾಮಾನ್ಯರಲ್ಲಿ ಬಿತ್ತಿದ ಹರಿದಾಸ ಶ್ರೇಷ್ಠರು ಶ್ರೀ ವಿಜಯದಾಸರು -ಮುರಳಿಧರ ಕುಲಕರ್ಣಿ

 ರಾಯಚೂರು,ನ.22- ದಾಸ ಶ್ರೇಷ್ಠರಾದ ಶ್ರೀ ವಿಜಯದಾಸರು ‌ ದೇಶ ಸುತ್ತಿದರು, ಸಮಾಜಮುಖಿಯಾಗಿ ಸರ್ವಕಾಲಿಕ ಮೌಲ್ಯದ ಸಾಮಾಜಿಕ ಚಿಂತನೆಯನ್ನು ಜನಸಾಮಾನ್ಯರಲ್ಲಿ ಬಿತ್ತುವುದರ ಜೊತೆಗೆ ಭಗವದ್ ಭಕ್ತಿ ಎನ್ನುವ ಶಿಖರದತ್ತ ಜನಸಾಮಾನ್ಯರನ್ನು ಕರೆದುಕೊಂಡು ಹೋದ ಮಹಾನ್ ಹರಿದಾಸ ಶ್ರೇಷ್ಠರು ಶ್ರೀ ವಿಜಯದಾಸರು ಎಂದು ಶ್ರುತಿ ಸಾಹಿತ್ಯ ಮೇಳದ ಅಧ್ಯಕ್ಷ ಮುರಳಿಧರ ಕುಲಕರ್ಣಿ ಅವರು ಹೇಳಿದರು .

ಅವರಿಂದು ಸಂಜೆ    ನಗರದ ಬಯಲು ಆಂಜನೇಯ ದೇವಸ್ಥಾನದಲ್ಲಿ ಹರಿದಾಸ ಬೌದ್ಧಿಕ ಮಂಟಪ ಏರ್ಪಡಿಸಿದ  263ನೇ ಶ್ರೀ ವಿಜಯ ದಾಸರ ಆರಾಧನೆಯಲ್ಲಿ  ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

  ಶ್ರೀ ವಿಜಯದಾಸರನ್ನು ಸುಳಾದಿ ದಾಸರೆಂದು ಕರೆಯುತ್ತಾರೆ . ಅವರು ಹಲವಾರು ಸಂಕೀರ್ತನೆಗಳನ್ನು,ಉಗಾ-ಭೋಗಗಳನ್ನು, ಗೀಗಿ ಪದಗಳನ್ನು, ಕೋಲಾಟ, ಜೋಗುಳ, ಲಾಲಿ, ಸುವ್ವಾಲಿ, ಶಾಸ್ತ್ರ,ದಂಡಕ ಗದ್ಯ,ಪದಗಳನ್ನು  ರಚಿಸಿ ದಾಸ ಸಾಹಿತ್ಯವನ್ನು ಶ್ರೀಮಂತ ಗೊಳಿಸಿದ್ದಾರೆ. ಶ್ರೀ ಪುರಂದರ ದಾಸರು, ಶ್ರೀ ಕನಕದಾಸರು ಪ್ರಾರಂಭಿಸಿದ ಹರಿದಾಸಸಾಹಿತ್ಯವನ್ನು  ಮುಂದುವರಿಸಿಕೊಂಡು ಬಂದು,ಶ್ರೀ ಗೋಪಾಲ ದಾಸರು ಶ್ರೀ ಜಗನ್ನಾಥಸರ ಮಹನೀಯರನ್ನು ಒಳಗೊಂಡಂತೆ 60ಕ್ಕೂ ಹೆಚ್ಚು ಹರಿದಾಸರಿಗೆ ದೀಕ್ಷೆ ನೀಡಿ , ದಾಸ ಸಾಹಿತ್ಯದ ಪರಂಪರೆಯನ್ನು ಮುಂದುವರಿಸಿದ ಹರಿದಾಸ ಶ್ರೇಷ್ಠರೇ ಶ್ರೀ ವಿಜಯದಾಸರು ಎಂದು ಹೇಳಿದರು.

     ಕಾರ್ಯಕ್ರಮವನ್ನು ಶ್ರೀಧರಾಚಾರ್ಯ ಮುಂಗಲಿ ಇವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು,

   ಕಾರ್ಯಕ್ರಮವನ್ನು ಹರಿದಾಸ ಬೌದ್ಧಿಕ ಮಂಟಪದ ಸಂಚಾಲಕರಾದ ಶ್ರೀ ಸುರೇಶ್ ಕುಲಕರ್ಣಿ ಅವರ ಆಯೋಜಿಸಿದ್ದರು.

     ಕಾರ್ಯಕ್ರಮದಲ್ಲಿ ಶ್ರೀ ಸುರೇಶ್ ಕಲ್ಲೂರ್, ವೇಣುಗೋಪಾಲ್ ವರಪ್ಪ, ರಾಕೇಶ್ ಕುಲಕರ್ಣಿ ಇವರಿಂದ ದಾಸವಾಣಿ ಜರುಗಿತು.

   ಈ ಸಂದರ್ಭದಲ್ಲಿ ಕೊಪ್ಪರೇಶ್ ದೇಸಾಯಿ, ಸುರೇಶ್ ಕುಲಕರ್ಣಿ,ಸುರೇಶ್ ಕಲ್ಲೂರ ,ರಾಕೇಶ್ ಕುಲಕರ್ಣಿ ಶರತ ಕುಮಾರ್, ಮುಂತಾದವರು ಉಪಸ್ಥಿತರಿದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್