ಅಲೆಮಾರಿಯ, ಅರೆ ಅಲೆಮಾರಿ ಜನಾಂಗವನ್ನು ಮುಖ್ಯವಾಹಿನಿಗೆ ತರಬೇಕು: ಕಾಂತರಾಜು ವರದಿ ಪಾರದರ್ಶಕವಾಗಿ ಮಂಡನೆಯಾಗಲಿ- ರವೀಂದ್ರಶೆಟ್ಟಿ.

 


ಅಲೆಮಾರಿಯ, ಅರೆ ಅಲೆಮಾರಿ ಜನಾಂಗವನ್ನು ಮುಖ್ಯವಾಹಿನಿಗೆ ತರಬೇಕು:                       ಕಾಂತರಾಜು ವರದಿ ಪಾರದರ್ಶಕವಾಗಿ ಮಂಡನೆಯಾಗಲಿ- ರವೀಂದ್ರಶೆಟ್ಟಿ.    ರಾಯಚೂರು,ನ.28- ಹಿಂದುಳಿದ ವರ್ಗಗಳ ಅಲೆಮಾರಿ, ಅರೆ ಅಲೆಮಾರಿ ಜನಾಂಗದವರಿಗೆ ಸರ್ಕಾರ ಮೂಲಭೂತ ಸೌಕರ್ಯ ಕಲ್ಪಿಸಿ ಮುಖ್ಯವಾಹಿನಿಗೆ ತರಬೇಕೆಂದು ಅಲೆಮಾರಿ, ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಕೆ.ರವೀಂದ್ರಶೆಟ್ಟಿ ಹೇಳಿದರು .                ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ  ನಾನು ಯಡಿಯೂರಪ್ಪ ಸಿಎಂ  ಆಗಿದ್ದಾಗ ಸುಮಾರು 18 ತಿಂಗಳು ಅಭಿವೃದ್ಧಿ ನಿಗಮದ ಅಧ್ಯಕ್ಷನಾಗಿದ್ದೆ ಆಗ ವಂಚಿತ ಜನಾಂಗಕ್ಕೆ ಅವರಿಗೆ ಸಿಗಬೇಕಾದ ಸರ್ಕಾರಿ ಸೌಲಭ್ಯ ಒದಗಿಸುವ ಪ್ರಾಮಾಣಿಕತೆ ಮೆರೆದಿದ್ದೆ ಇದೀಗ ಮಾಜಿ ಅಧ್ಯಕ್ಷನಾಗಿ ಅವರ ಸೌಲಭ್ಯಕ್ಕಾಗಿ ಶ್ರಮಿಸುತ್ತಿದ್ದೆನೆಂದ ಅವರು ಈ ಜನಾಂಗದವರು ಡೇರೆ , ಟೆಂಟ್ ಹಾಕಿಕೊಂಡು ಜೀವನ ಮಾಡುತ್ತಾರೆ ಅವರಿಗೆ ಸೂರು ಮತ್ತು ಸ್ಮಶಾನ ಭೂಮಿ ಸೇರಿದಂತೆ ಇನ್ನಿತರ ನಾಗರೀಕ ಸೌಲಭ್ಯ ಸರ್ಕಾರ ವದಗಿಸಬೇಕೆಂದರು. 

           ಕಾಂತರಾಜು ನೀಡಿರುವ ಸಾಮಾಜಿಕ , ಆರ್ಥಿಕ ಜನಗಣತಿ ವರದಿಯನ್ನು ಸರ್ಕಾರ ಪಾರದರ್ಶಕವಾಗಿ ಮಂಡಿಸಬೇಕೆಂದರು.             ಈ ಸಂದರ್ಭದಲ್ಲಿ ಈರಣ್ಣ ಯಾದವ್, ವಿರುಪಾಕ್ಷಪ್ಪ,ಕರಿಯಪ್ಪ,ತುಕಾರಾಂ,ರಹೀಂ ಖಾನ್, ಭೀಮಣ್ಣ ಇತರರು ಇದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ