ಭಕ್ತಿ ಪಂಥದ ಮುಖ್ಯ ಹರಿದಾಸರು ಶ್ರೀ ಕನಕದಾಸರು.

 


ಭಕ್ತಿ ಪಂಥದ ಮುಖ್ಯ ಹರಿದಾಸರು ಶ್ರೀ ಕನಕದಾಸರು.                                                      ನ್ನಡ ನಾಡು ಅನೇಕ ದಾಸರು ಶರಣರು ನೆಲೆಸಿದ ನೆಲವಾಗಿದೆ ಈ ಪುಣ್ಯ ನೆಲದಲ್ಲಿ 15 ಮತ್ತು 16 ನೇ ಶತಮಾನದಲ್ಲಿ ಭಕ್ತಿ ಪರಂಪರೆಯ ಮುಖ್ಯವಾದ ಜನಪ್ರಿಯ ದಾಸರಲ್ಲಿ ಒಬ್ಬರು ಶ್ರೀ ಕನಕದಾಸರು.                                      ಪುರಂದರ ದಾಸರ ಸಮಕಾಲೀನ ಶ್ರೇಷ್ಠ ಕೀರ್ತನಕಾರರು  ಸಹ ಆಗಿದ್ದರು ಕನಕದಾಸರು. ಕನಕದಾಸರು ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಾಡ ಗ್ರಾಮದವರು, ಅವರು 1509ರಲ್ಲಿ ಬೀರಪ್ಪ ದಂಪತಿಗಳ ಮಗನಾಗಿ ಜನಸಿದರು .                                           ಅಂದಿನ ಕಾಲದಲ್ಲಿ ಜಾತಿ ತಾರತಮ್ಯದ ಬಗ್ಗೆ ವೈಚಾರಿಕ ಸಮರ ಸಾರಿದರು ವಿಜಯನಗರ ಸಾಮ್ರಾಜ್ಯಕ್ಕೆ ಒಳಪಟ್ಟ ಬಂಕಾಪುರ ಪ್ರಾಂತದಲ್ಲಿ  ಸೇನಾ  ದಂಡನಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದರು.     ಕನಕದಾಸರು ಶ್ರೀ ವ್ಯಾಸರಾಯರ ಮೆಚ್ಚಿನ ಶಿಷ್ಯರು, ವ್ಯಾಸರಾಯರಿಂದ ಮಧ್ವ ಶಾಸ್ತ್ರವನ್ನು ಕಲಿತು ಉಡುಪಿಯ ಶ್ರೀಕೃಷ್ಣನ ಅನನ್ಯ ಭಕ್ತರೆನ್ನಿಸಿಕೊಂಡರು.                                   ಕನಕ ದಾಸರ ಕಾವ್ಯಗಳು, ನಳ ಚರಿತ್ರೆ, ಹರಿಭಕ್ತಿ ಸಾರ, ಮೋಹನ್ ತರಂಗಿಣಿ, ರಾಮಧ್ಯಾನ ಚರಿತ್ರೆ ಇವುಗಳು ಅಲ್ಲದೆ ಇನ್ನು ಅನೇಕ ಪದಗಳನ್ನು ಇವರು ರಚಿಸಿದ್ದಾರೆ.   

                               ಅವರು ತಮ್ಮ ಕೀರ್ತನೆಗಳು, ಸಣ್ಣ ಹಾಡುಗಳಿಗೆ ಪ್ರಸಿದ್ಧರಾಗಿದ್ದರು.                                     ಅವರು ವಿಶೇಷವಾಗಿ ಮುಂಡಿಗೆಗಳು ಎಂಬ ಒಗಟಿನರೂಪದಲ್ಲಿಯ ಪದ್ಯಗಳನ್ನು ರಚಿಸಿದ್ದಾರೆ. ಅದಕ್ಕೆ ಅವರಿಗೆ ಕನಕನ ಕೆಣಕಬೇಡ  ಕೆಣಕಿ ತಿಣುಕಬೇಡ  ಎಂಬ ನಾನ್ನುಡಿ ಪ್ರಸಿದ್ಧವಾಗಿದೆ.     ಕನಕ ದಾಸರು ತಮ್ಮ ಕೊನೆಯ ದಿನಗಳನ್ನು ಕಾಗಿನೆಲೆಯಲ್ಲಿ ತಾವೆ ಕಟ್ಟಿಸಿದ ಆರಾಧ್ಯದೈವ ಕೇಶವನ ಸನ್ನಿಧಾನದಲ್ಲಿ ಸೇವೆಯನ್ನುಗೈಯುತ್ತಾ 1606ಇಸ್ವಿಯಲ್ಲಿ ಕೇಶವನಲ್ಲಿ ಲೀನರಾದರು.  ಇಂದು ಅವರ ಜಯಂತಿ ನಿಮಿತ್ಯ ಈ ಲೇಖನ.                                           

                                    ಲೇಖಕರು-                                ಶ್ರೀಮತಿ ಪರಿಮಳಾ ಕರಣಂ,ಶಿಕ್ಷಕರು, ರಾಯಚೂರು 

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ