ಕಾಡ್ಲೂರಲ್ಲಿ ಡಿ.24 ರಿಂದ 26 ರವರೆಗೆ ಶ್ರೀ ಹನುಮದ ವ್ರತ ಕಾರ್ಯಕ್ರಮ : ನಾಳೆ ಶ್ರೀ ಉಪೇಂದ್ರ ತೀರ್ಥ ಕರಾರ್ಚಿತ ಪ್ರಾಣದೇವರಿಗೆ ಲಕ್ಷ ಪುಷ್ಪಾರ್ಚನೆ
ಕಾಡ್ಲೂರಲ್ಲಿ ಡಿ.24 ರಿಂದ 26 ರವರೆಗೆ ಶ್ರೀ ಹನುಮದ ವ್ರತ ಕಾರ್ಯಕ್ರಮ: ನಾಳೆ ಶ್ರೀ ಉಪೇಂದ್ರ ತೀರ್ಥ ಕರಾರ್ಚಿತ ಪ್ರಾಣದೇವರಿಗೆ ಲಕ್ಷ ಪುಷ್ಪಾರ್ಚನೆ ರಾಯಚೂರು,ಡಿ. 23-ಶ್ರೀ ವನವಾಸಿ ರಾಮ ದೇವರ, ಶ್ರೀ ಉಪೇಂದ್ರತೀರ್ಥ ಕರಾರ್ಚಿತ ಮುಖ್ಯಪ್ರಾಣ ದೇವರ ಹಾಗೂ ಶ್ರೀ ಸ್ವಯಂಭೂ ರುದ್ರ ದೇವರ ಸನ್ನಿಧಾನ, ಕೃಷ್ಣ ನದಿ ತೀರ, ಕಾಡ್ಲೂರಲ್ಲಿ ಡಿ.24 ರಿಂದ 26ರವರೆಗೆ ಶ್ರೀ ಹನುಮದ್ ವ್ರತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಪ್ರತಿ ವರ್ಷದಂತೆ ಈ ವರ್ಷವೂ ಸಹ ಅಂದರೆ ಶ್ರೀ ಶೋಭನಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಹೇಮಂತ ಋತು, ಮಾರ್ಗಶಿರ ಮಾಸ, ದ್ವಾದಶಿ/ತ್ರಯೋದಶಿ ರವಿವಾರ, ದಿ.24, ದಿ.25 ಚತುರ್ದಶಿ ಸೋಮವಾರ ದಂದು ಹಾಗೂ ದಿನ.26 ಹುಣ್ಣಿಮೆ ಮಂಗಳವಾರ ದಂದು ಕಾಡ್ಲೂರು ಸಂಸ್ಥಾನ ದ ವತಿಯಿಂದ ಶ್ರೀ ಹನುಮದ್ ವ್ರತ ಕಾರ್ಯಕ್ರಮನ್ನು ಆಚರಿಸಲಾಗುತ್ತಿದೆ.
ಕಾರ್ಯಕ್ರಮಗಳ ವಿವರ :
ದ್ವಾದಶಿ/ತ್ರಯೋದಶಿ (ರವಿವಾರ, ದಿ. 24.12.2023), ಶ್ರೀ ಹನುಮದ್ ವ್ರತ
ಬೆಳಿಗ್ಗೆ 5:30 ಕ್ಕೆ ಧ್ವಜಾರೋಹಣ
5:45 ಕ್ಕೆ ನಿರ್ಮಾಲ್ಯ
6 ಕ್ಕೆ ಪಂಚಾಮೃತ ಅಭಿಷೇಕ, ವಾಯುಸ್ತುತಿ, ಅಷ್ಟೋತ್ತರ
7 ಕ್ಕೆ ಶ್ರೀ ಮುಖ್ಯಪ್ರಾಣ ದೇವರಿಗೆ ಲಕ್ಷ ಪುಷ್ಪಾರ್ಚನೆ
8 ಕ್ಕೆ ಹನುಮದ್ ವ್ರತ ಪೂಜೆ, ಕಥೆ
8:30 ಕ್ಕೆ ರಜತ ಕವಚ ಅಲಂಕಾರ, ಮಹಾಮಂಗಳಾರತಿ
9 ಕ್ಕೆ ತೀರ್ಥಪ್ರಸಾದ ನಂತರ
ಸಾಯಂಕಾಲ 5:30 ಕ್ಕೆ ಶ್ರೀ ವಿಜಯದಾಸರ ವಂಶಸ್ಥರಿಂದ ಹರಿನಾಮ ಸಂಕೀರ್ತನೆ
7 ಕ್ಕೆ ಪಲ್ಲಕ್ಕಿ ಉತ್ಸವ
7:30 ಕ್ಕೆ ದೀಪೋತ್ಸವ, ತೆಪ್ಪೋತ್ಸವ, ಕೃಷ್ಣಾರತಿ - ಕೃಷ್ಣ ನದಿಗೆ ಆರತಿ
ಚತುರ್ದಶಿ (ಸೋಮವಾರ, ದಿ. 25.12.2023)
6 ಕ್ಕೆ ನೀರ್ಮಾಲ್ಯ
7 ಕ್ಕೆ ಪಂಚಾಮೃತ ಅಭಿಷೇಕ, ವಾಯುಸ್ತುತಿ, ಅಷ್ಟೋತ್ತರ
8 ಕ್ಕೆ ಶ್ರೀ ಸ್ವಯಂಭೂ ರುದ್ರ ದೇವರಿಗೆ ಸಹಸ್ರ ಬಿಲ್ವಪತ್ರಿಕೆ ಸಮರ್ಪಣೆ
9 ಕ್ಕೆ ಕಾಡ್ಲೂರು ಸಂಸ್ಥಾನದ ವತಿಯಿಂದ ನೂತನವಾಗಿ ನಿರ್ಮಿಸಿದ ಶ್ರೀ ರಾಘವೇಂದ್ರ ಮಕ್ಕಳ ಕೂಟದ (Play Area) ಉದ್ಘಾಟನೆ
10 ಕ್ಕೆ ವೇ॥ಮೂ॥ ಶ್ರೀ ಗುರಾಚಾರ್ಯ ಜೋಶಿ ಅವರಿಂದ ಕಾಡ್ಲೂರು ಸಂಸ್ಥಾನದ ಪುರಾತನ ಪ್ರತಿಮೆಗಳ ಪೂಜೆ - ಪ್ರತಿಮಾರ್ಚನೆ ನಡೆಯಲಿದೆ.
11 ಕ್ಕೆ ರಜತ ಕವಚ ಅಲಂಕಾರ, ಮಹಾಮಂಗಳಾರತಿ ಮಧ್ಯಾಹ್ನ 12 ಕ್ಕೆ ಕಾಡ್ಲೂರು ಸಂಸ್ಥಾನ ಗೌರವ ಪುರಸ್ಕಾರ ಪ್ರದಾನ ಕಾರ್ಯಕ್ರಮ
1 ಕ್ಕೆ ತೀರ್ಥಪ್ರಸಾದ
ಸಾಯಂಕಾಲ 5:30 ಕ್ಕೆ ಕು. ವೈಷ್ಣವಿ ದೇಶಪಾಂಡೆ ಅವರಿಂದ ಸಂಗೀತ ಕಾರ್ಯಕ್ರಮ
7 ಕ್ಕೆ ಪಲ್ಲಕಿ ಉತ್ಸವ
7:30 ಕ್ಕೆ ದೀಪೋತ್ಸವ, ತೆಪ್ಪೋತ್ಸವ, ಕೃಷ್ಣಾರತಿ - ಕೃಷ್ಣ ನದಿಗೆ ಆರತಿ
ಹುಣ್ಣಿಮೆ (ಮಂಗಳವಾರ, ದಿ. 26.12.2023)
6 ಕ್ಕೆ ನಿರ್ಮಾಲ್ಯ
7 ಕ್ಕೆ ಪಂಚಾಮೃತ ಅಭಿಷೇಕ, ವಾಯುಸ್ತುತಿ, ಅಷ್ಟೋತ್ತರ
10 ಕ್ಕೆ ವೇ॥ ಮೂ॥ ಶ್ರೀ ದಾಮೋಧರಾಚಾರ್ಯ ಪುರೋಹಿತ ಅವರಿಂದ ಶ್ರೀ ಸತ್ಯನಾರಾಯಣ ಪೂಜೆ, ಕಥೆ*
11 ಕ್ಕೆ ರಜತ ಕವಚ ಅಲಂಕಾರ, ಮಹಾಮಂಗಳಾರತಿ ಮಧ್ಯಾಹ್ನ 12 ಕ್ಕೆ ತೀರ್ಥಪ್ರಸಾದ ಸಾಯಂಕಾಲ 5:30 ಕ್ಕೆ ಪಲ್ಲಕಿ ಉತ್ಸವ
6:30 ಕ್ಕೆ ದೀಪೋತ್ಸವ, ತೆಪ್ಪೋತ್ಸವ, ಕೃಷ್ಣಾರತಿ - ಕೃಷ್ಣ ನದಿಗೆ ಆರತಿ ಎಲ್ಲ ಸದ್ಭಕ್ತರು ಈ ಮೂರು ದಿನದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ, ದೇವರ ಕೃಪೆಗೆ ಪಾತ್ರರಾಗಬೇಕೆಂದು ಕಾಡ್ಲೂರು ಸಂಸ್ಥಾನದ ರಂಗರಾವ ದೇಸಾಯಿ, ಜಯಕುಮಾರ ದೇಸಾಯಿ,ವಿಜಯ ಕುಮಾರ್ ದೇಸಾಯಿ ಹಾಗೂ ಕಾಡ್ಲೂರು ಗ್ರಾಮಸ್ಥರು ವಿನಂತಿಸಿಕೊಳ್ಳುತ್ತಾರೆ.
Comments
Post a Comment