ಪಂಡಿತ ಸಿದ್ದರಾಮ ಜಂಬಲದಿನ್ನಿ ಪುಣ್ಯ ಸ್ಮರಣೆ:ಡಿ.30 ರಂದು ಸಂಗೀತ ಸಮ್ಮೇಳನ-ಡಾ.ನರಸಿಂಹಲು ವಡವಾಟಿ
ಪಂಡಿತ ಸಿದ್ದರಾಮ ಜಂಬಲದಿನ್ನಿ ಪುಣ್ಯ ಸ್ಮರಣೆ: ಡಿ.30 ರಂದು ಸಂಗೀತ ಸಮ್ಮೇಳನ- ಡಾ.ನರಸಿಂಹಲು ವಡವಾಟಿ. ರಾಯಚೂರು,ಡಿ.28-ಸ್ವರ ಸಂಗಮ ಸಂಗೀತ ವಿದ್ಯಾ ಸಂಸ್ಥೆಯಿಂದ ಸಿದ್ಧರಾಮ ಜಂಬಲದಿನ್ನಿಯವರ ಪುಣ್ಯಸ್ಮರಣೆ ಅಂಗವಾಗಿ ಡಿ.30 ರಂದು 35ನೇ ವರ್ಷದ ಸಂಗೀತ ಸಮ್ಮೇಳನ ಆಯೋಜಿಸಲಾಗಿದೆ ಎಂದು ಖ್ಯಾತ ಕ್ಲಾರಿಯೋನೆಟ್ ವಾದಕ ಡಾ.ಪಂಡಿತ ನರಸಿಂಹಲು ವಡವಾಟಿ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅಂದು ಸಂಜೆ 6 ಕ್ಕೆ ನಗರದ ಉದಯ ನಗರದ ಸ್ವರ ಸಂಗಮ ಸಂಗೀತ ವಿದ್ಯಾಲಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮಿಗಳು, ಸೋಮವಾರಪೇಟೆ ಹಿರೇಮಠದ ಅಭಿನವ ರಾಚೋಟಿ ವೀರ ಶಿವಾಚಾರ್ಯ ಸ್ವಾಮಿಗಳು ವಹಿಸಲಿದ್ದಾರೆ. ಉದ್ಘಾಟನೆಯನ್ನು ಸಂಸದ ಅಮರೇಶ್ವರ ನಾಯಕ ನೆರವೇರಿಸಲಿದ್ದು, ಅಧ್ಯಕ್ಷತೆಯನ್ಞು ಜಿಲ್ಲಾ ಎಸ್ಪಿ ನಿಖಿಲ್.ಬಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಾ.ರಮೇಶ ಸಾಗರ,ಡಾ.ಶಿವಪ್ರಸಾದ ಜಂಬಲದಿನ್ನಿ,ಅಲ್ಲಮಪ್ರಭು ಬೆಟ್ಟದೂರು ಆಗಮಿಸಲಿದ್ದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಮಣ್ಣ ಹವಳೆ ಯವರಿಗೆ ಸನ್ಮಾನ ನಡೆಯಲಿದೆ.
ದೇಶದ ಖ್ಯಾತ ಸಂಗೀತಗಾರರು, ಕಲಾವಿದರು, ವಾದಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು ಗುರುವಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಅಂದು ಬೆಳಿಗ್ಗೆ ಮೊದಲಿಗೆ ಕುಷ್ಠರೋಗ ಕಾಲೋನಿಯಲ್ಲಿ ಅನ್ನ ಪ್ರಸಾದ ವಿನಿಯೋಗ ಮಾಡಿಲಾಗುತ್ತದೆ ಎಂದರು. ಪರ ಸ್ಥಳದಿಂದ ಬಂದ ಕಲಾವಿದರಿಗೆ ಶ್ರೋತೃಗಳಿಗೆ ಭೋಜನ ವ್ಯವಸ್ಥೆ,ತಂಗುವ ವ್ಯವಸ್ಥೆ ಮಾಡಲಾಗಿದೆ ಎಂದರು. ಬಡ ಹಾಗೂ ವಿಕಲಚೇತನ ವಿದ್ಯಾರ್ಥಿಗಳಿಗೆ ಉಚಿತ ಸಂಗೀತ ಹೇಳಿಕೊಡಲಾಗುತ್ತದೆ ಎಂದ ಅವರು ಸುಮಾರು 50 ವಿದ್ಯಾರ್ಥಿಗಳು ಸಂಗೀತ ಅಭ್ಯಾಸ ಮಾಡುತ್ತಿದ್ದಾರೆ ಎಂದರು. ಸಿವಿಲ್ ಕನ್ಸಲ್ಟೆಂಟ್ ಶಂಕರ್ ನಾರಾಯಣ್ ಮಾತನಾಡಿ ಜಂಬಲದಿನ್ನಿ ಯುವರಿಗೆ ವಡವಾಟಿಯವರು ಕೋಟಿಗೊಬ್ಬ ಶಿಷ್ಯರಾಗಿದ್ದಾರೆ ಈಗಿನ ಕಾಲದಲ್ಲಿ ಗುರುಗಳು ಶಿಕ್ಷಣ ನೀಡಿದ ಬಳಿಕ ಶಿಷ್ಯ ಆತನನ್ನು ಮರೆತುಬಿಡುತ್ತಾನೆ ಆದರೆ ವಡವಾಟಿಯವರು ಶ್ರೇಷ್ಠ ಶಿಷ್ಯರು ಎಂದರು.
Comments
Post a Comment