35 ವರ್ಷಗಳಿಂದ ಸತತವಾಗಿ ಗುರುಗಳ ಸಂಗೀತ ಸಮ್ಮೇಳನ ಮಾಡುತ್ತಿರುವುದು ಗುರು ಭಕ್ತಿಯನ್ನು ತೋರಿಸುತ್ತದೆ- ಸಂಸದ ರಾಜಾಅಮರೇಶ್ವರ ನಾಯಕ
35 ವರ್ಷಗಳಿಂದ ಸತತವಾಗಿ ಗುರುಗಳ ಸಂಗೀತ ಸಮ್ಮೇಳನ ಮಾಡುತ್ತಿರುವುದು ಗುರು ಭಕ್ತಿಯನ್ನು ತೋರಿಸುತ್ತದೆ- ಸಂಸದ ರಾಜಾಅಮರೇಶ್ವರ ನಾಯಕ
ರಾಯಚೂರು,ಡಿ.31-ಸಿದ್ದರಾಮ ಜಂಬಲದಿನ್ನಿಯವರ ಶಿಷ್ಯರಾಗಿ ಸಂಗೀತ ಸಾಧನೆಯ ಮೂಲಕ ಡಾ. ಪಂಡಿತ್ ನರಸಿಂಹಲು ವಡವಾಟಿಯವರು ಪ್ರಪಂಚಕ್ಕೆ ಮುಟ್ಟಿದ್ದಾರೆ ಎಂದು ಲೋಕಸಭೆಯ ಸಂಸದರಾದ ರಾಜ ಅಮರೇಶ್ವರ ನಾಯಕ ಅಭಿಪ್ರಾಯ ಪಟ್ಟರು.
ಉದಯನಗರದ ಸ್ವರ ಸಂಗಮ ಸಂಗೀತ ವಿದ್ಯಾಲಯದಲ್ಲಿ ಏರ್ಪಡಿಸಿದ್ದ ಪಂಡಿತ್ ಸಿದ್ದರಾಮ ಜಂಬಲದಿನ್ನಿಯವರ ಸ್ಮರಣಾರ್ಥ ಏರ್ಪಡಿಸಿದ್ದ 35ನೇ ಸಂಗೀತ ಸಮ್ಮೇಳನದಲ್ಲಿ ಸಾಧನೆಯನ್ನು ಏಕಾಗ್ರ ಚಿತ್ತದಿಂದ ಮಾಡಬೇಕಾಗುತ್ತದೆ. ನಮ್ಮ ಮಕ್ಕಳು, ಯುವಕರು ಪಾಶ್ಚ್ಯಾತ್ಯ ಸಂಗೀತಕ್ಕೆ ಆಕರ್ಷಿತರಾಗತಿದ್ದರೆ, ಪಾಶ್ಚ್ಯಾತ್ಯರು ನಮ್ಮ ಸಂಗೀತಕ್ಕೆ ಮಾರುಹೋಗುತ್ತಿದ್ದಾರೆ. ನಮ್ಮ ಸಂಸ್ಕೃತಿ ಅಭಿವೃದ್ಧಿಯಾಗಬೇಕು. ವಿದೇಶದಿಂದ ಬಂದು ವಡವಾಟಿಯವರ ಬಳಿ ಕಲಿಯುತ್ತಿದ್ದಾರೆ ನಾವು ಅವರನ್ನು ಬಳಸಿಕೊಳ್ಳಬೇಕು. 35 ವರ್ಷಗಳಿಂದ ಸತತವಾಗಿ ಗುರುಗಳ ಸಂಗೀತ ಸಮ್ಮೇಳನ ಮಾಡುತ್ತಿರುವುದು ಗುರು ಭಕ್ತಿಯನ್ನು ತೋರಿಸುತ್ತದೆ, ಎಂದು ಅಭಿನಂದಿಸಿದರು.
ವಡವಾಟಿಯವರು ಸಿದ್ದರಾಮ ಜಂಬಲದಿನ್ನಿಯವರ ಹೆಸರನ್ನು ರಂಗಮಂದಿರಕ್ಕೆ ನಾಮಕರಣ ಮಾಡಿಸುವುದರ ಮೂಲಕ ಗುರುಗಳ ಹೆಸರನ್ನು ಚಿರಸ್ತಾಯಿಯಾಗಿಸಿದ್ದಾರೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಮಣ್ಣ ಹವಳೇ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಆಧ್ಯಾತ್ಮಿಕ ದಾರಿಯಲ್ಲಿ ಸಂಗೀತವನ್ನು ಬಳಸಲಾಗುತ್ತಿತ್ತು ಆದರೆ ಇಂದು, ಕೆಲವೆಡೆ ಸಾಮಾಜಿಕವಾಗಿ ಸ್ವ ಇಚ್ಛೆಗೆ ಬಳಸಲಾಗುತ್ತಿದೆ.
ಗುರುವನ್ನು ಮೀರಿಸಿದಾಗ ಮಾತ್ರ ಗುರು, ಶ್ರೇಷ್ಠ ನಾಗುತ್ತಾನೆ ಅದನ್ನು ವಡವಾಟಿ ಹಾಗೂ ಗುರು ಶಿಷ್ಯ ಪರಂಪರೆಯಲ್ಲಿ ಕಾಣಬಹುದು ಎಂದು ವೈದ್ಯರಾದ ಡಾಕ್ಟರ್ ರಮೇಶ ಸಾಗರ್ ಅಭಿಪ್ರಾಯಪಟ್ಟರು.
ಸಿದ್ದರಾಮ ಜಂಬಲದಿನ್ನಿ ಅವರಷ್ಟು ಸ್ಪಷ್ಟವಾಗಿ ಸಂಗೀತ ಜನರಿಗೆ ಮುಟ್ಟಿಸುವುದರಲ್ಲಿ ಶಿಷ್ಯ ವಡವಾಟಿ ಶಾಸ್ತ್ರೀಯ ಸಂಗೀತದ ಗಾಯನ ಕ್ಲಾರಿನೆಟ್ ವಾದನದ ಮೂಲಕ ವಚನ ಪರಂಪರೆ ಮುಂದುವರಿಸಿದ್ದಾರೆ ಎಂದು ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ತಿಳಿಸಿದರು.
ಡಾಕ್ಟರ್ ಪಂಡಿತ್ ನರಸಿಂಹಲು ವಡವಾಟಿ ಅವರು ಮಾತನಾಡಿ ಗುರುಗಳಿಂದ ಆಶೀರ್ವಾದ ಪಡೆದು ಸ್ವರ ಸಂಗಮ ಸಂಗೀತ ವಿದ್ಯಾ ಸಂಸ್ಥೆ ಪ್ರಾರಂಭಿಸಿ ಅವರ ಆಶೀರ್ವಾದಗಳೊಂದಿಗೆ ಶಿಷ್ಯರಿಗೆ ಸಂಗೀತದ ದೀಕ್ಷೆ ನೀಡಲಾಗುತ್ತಿದೆ ಎಂದು ಗುರು ಶಿಷ್ಯ ಪರಂಪರೆಯ ಬಗ್ಗೆ ತಿಳಿಸಿದರು.
ದಿವ್ಯ ಸಾನಿಧ್ಯ ವಹಿಸಿದ್ದ ಬೃಹನ್ ಮಠದ ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ಜಂಬಲದಿನ್ನಿಯವರು ಕಟುಕನು ಬದಲಾಗುವಂತೆ, ವಚನಗಳನ್ನು ಹಾಡುತ್ತಿದ್ದರು. ಅವರಿಗೆ" ಶೀಘ್ರ ರಾಗರಚನಾ ಚತುರ " ಎಂದು ಮಠದಿಂದ ಬಿರುದಿ ನೀಡಿ ಗೌರವಿಸಲಾಗಿತ್ತು ಎಂದು ನೆನಪಿಸಿಕೊಂಡರು.
ಖ್ಯಾತ ಗಾಯಕಿ ವಡವಾಟಿ ಶಾರದಾ ಭರತ್ ದೂರದರ್ಶನದ ನಿರೂಪಕ ಕೆ.ಯೋಗ ರವೀಶ್ ಭಾರತ್ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಬೆಳಗಾವಿಯ ಸೀಮಾ ಕುಲಕರ್ಣಿ, ಶಾಸ್ತ್ರೀಯ ಗಾಯನ ಬೆಂಗಳೂರಿನ ಸರ್ವಮಂಗಳ ಸಿತಾರ್ ವಡವಾಟಿ ಶಾರದಾ ಭರತ್ ಗಾಯನ ನರಹರಿರಾವ್ ವಡವಾಟಿ ತೇಜಶ್ರೀ ಭರತ್ ಕ್ಲಾರಿನೆಟ್ ವಾದನ ಕೊಲ್ಕತ್ತಾದ ಕೃಷ್ಣ ಮುಖೇಡ್ಕರ್, ಆಸ್ಟ್ರೇಲಿಯಾದ ಜೀವನ್ ಅಹೋರಾತ್ರಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಅಹೋರಾತ್ರಿ ನಡೆದ ಸಂಗೀತ ಕಾರ್ಯಕ್ರಮ ಸಭಿಕರ ಮನ ಸೆಳೆಯಿತು.
Comments
Post a Comment