ಜ.5ರಂದು ಮಂಗಳೂರಿನಲ್ಲಿ ಕೆಯುಡಬ್ಲ್ಯೂಜೆ ಸರ್ವ ಸದಸ್ಯರ ಮಹಾಸಭೆ:ಜಿಲ್ಲೆಯ ಸರ್ವ ಸದಸ್ಯರು ಪಾಲ್ಗೊಳ್ಳಲು ಮನವಿ

 


ಜ.5ರಂದು ಮಂಗಳೂರಿನಲ್ಲಿ ಕೆಯುಡಬ್ಲ್ಯೂಜೆ ಸರ್ವ ಸದಸ್ಯರ ಮಹಾಸಭೆ-ಜಿಲ್ಲೆಯ ಸರ್ವ ಸದಸ್ಯರು ಪಾಲ್ಗೊಳ್ಳಲು ಮನವಿ

ರಾಯಚೂರು,ಡಿ.25-ಮಂಗಳೂರಿನ ಸಹ್ಯಾದ್ರಿ ಕಾಲೇಜ್  ಇಂಜಿನಿಯರಿಂಗ್ ಸಭಾಂಗಣದಲ್ಲಿ ಜ.5ರಂದು ಬೆಳಗ್ಗೆ 11ಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2022-23ನೇ ಸಾಲಿನ 90ನೇ ಸರ್ವಸದಸ್ಯರ ಮಹಾಸಭೆ ಜರುಗಲಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಆರ್.ಗುರುನಾಥ ತಿಳಿಸಿದ್ದಾರೆ.

ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ಹಿಂದಿನ ಸಭೆಯ ನಡಾವಳಿಗಳನ್ನು ಓದಿ ಅನುಮೋದಿಸಲಾಗುವುದು. 2022-23ನೇ ಸಾಲಿನ ವಾರ್ಷಿಕ ವರದಿ ಮಂಡನೆ ಹಾಗೂ ಅನುಮೋದನೆ ನೀಡಲಾಗುವುದು.


2022-23ನೇ ಸಾಲಿನ ವಾರ್ಷಿಕ ಲೆಕ್ಕ ಪರಿಶೋಧನಾ ವರದಿ ಮಂಡನೆ ಮಾಡಿ ಅನುಮೋದನೆ ನಡೆಯಲಾಗುತ್ತಿದೆ. ಕರ್ನಾಟಕ ಯುನಿಯನ್ ವರ್ಕಿಂಗ್ ಜರ್ನಲಿಸ್ಟ್ ಎಂಬ ಹೆಸರನ್ನು ಆಡಳಿತ ಭಾಷೆಯಾದ ಕನ್ನಡದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘ ಎಂದು ಬೈಲಾದ ಶಿರೋನಾಮೆಯಲ್ಲಿ ತಿದ್ದುಪಡಿ ಮಾಡುವ ಬಗ್ಗೆ ಸಭೆಯಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧ್ಯಕ್ಷ ಆರ್.ಗುರುನಾಥ ಹಾಗೂ ಪ್ರಧಾನ ಕಾರ್ಯದರ್ಶಿ ಎಂ.ಪಾಷಾ ಹಟ್ಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.            


Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ