ಕಾಡ್ಲೂರಲ್ಲಿ ಶ್ರೀ ಹನುಮದವ್ರತ ಅಂಗವಾಗಿ ಲಕ್ಷ ಪುಷ್ಪಾರ್ಚನೆ.


 

ಕಾಡ್ಲೂರಲ್ಲಿ ಶ್ರೀ ಹನುಮದವ್ರತ ಅಂಗವಾಗಿ ಲಕ್ಷ ಪುಷ್ಪಾರ್ಚನೆ.                 ರಾಯಚೂರು,ಡಿ.24- ತಾಲೂಕಿನ ಕಾಡ್ಲೂರು ಗ್ರಾಮದ ಕೃಷ್ಣಾ ನದಿ ತೀರದ ಶ್ರೀ ವನವಾಸಿ ರಾಮದೇವರ ಹಾಗೂ ಶ್ರೀ ಉಪೇಂದ್ರ ತೀರ್ಥ ಕರಾರ್ಚಿತ ಪ್ರಾಣದೇವರ ಸನ್ನಿದಾನದಲ್ಲಿ ಶ್ರೀ ಹನುಮದವ್ರತ ಅಂಗವಾಗಿ ಪ್ರಾಣದೇವರಿಗೆ ಲಕ್ಷ ಪುಷ್ಪಾರ್ಚನೆ ನೆರವೇರಿತು.     ಬೆಳಿಗ್ಗೆ ನೀರ್ಮಾಲ್ಯ, ಸುಪ್ರಭಾತ, ಪಂಚಾಮೃತ ಅಭಿಷೇಕ, ಶ್ರೀ ಹನುಮದವ್ರತ ಕಥೆ, ನೈವೇದ್ಯ,ಮಹಾ ಮಂಗಳಾರತಿ , ತೀರ್ಥ ಪ್ರಸಾದ ವಿನಿಯೋಗ ನಡೆಯಿತು.             

                                   ಸಾಯಂಕಾಲ ಚೀಕಲಪರವಿ ಶ್ರೀ ವಿಜಯದಾಸರ ವಂಶಸ್ಥರಿಂದ ನಾಮಸಂಕೀರ್ತನೆ, ಭಜನೆ, ಪಲ್ಲಕ್ಕಿ ಉತ್ಸವ, ಮಂಗಳಾರತಿ, ದೀಪೋತ್ಸವ,ಕೃಷ್ಣಾ ನದಿ ಆರತಿ (ಕೃಷ್ಣಾರತಿ), ತೆಪ್ಪೋತ್ಸವ, ಬಾಣ ಬಿರುಸು ನಡೆಯಿತು.   

  
ಈ ಸಂದರ್ಭದಲ್ಲಿ ಜಗನ್ನಾಥ ದಾಸ, ಪ್ರಶಾಂತ್ ದಾಸ, ವೆಂಕೋಬಾಚಾರ್ ಪುರೋಹಿತ, ದಾಮೋದರಾಚಾರ್ ಪುರೋಹಿತ, ಅನಂತಆಚಾರ್ ಕೊಪ್ಪರ, ಯಂಕೋಬಾಚಾರ್  ಮಾಳಗಿ, ಪ್ರಹಲ್ಲಾದ ಆಚಾರ್ಯ ಜೋಷಿ, ನಾರಾಯಣರಾವ್ ಕುಲಕರ್ಣಿ, ರಂಗರಾವ ದೇಸಾಯಿ, ಜಯಕುಮಾರ ದೇಸಾಯಿ,

ವಿಜಯಕುಮಾರ್ ದೇಸಾಯಿ,ಡಾ. ವಾಸುದೇವ ಜಹಾಗೀರದಾರ್, ಕೃಷ್ಣಮೂರ್ತಿ ಹೆಬಸೂರು,ಅಭಿಷೇಕ ದೇಸಾಯಿ,ತಾರಾನಾಥ್ ಜೇಗರಕಲ್, ಭೀಮಸೇನ ಕುಲಕರ್ಣಿ, ಗುರುಪ್ರಸಾದ್ ಕುಲಕರ್ಣಿ, ಸುಧನ್ವ, ಅನಿಲ್, ಆನಂದ ಆಲೂರು, ವೆಂಕಟೇಶ, ರಘುಮಾನ್ಯ, ಸುವರ್ಣಾ ಬಾಯಿ ದೇಸಾಯಿ, ಅಶ್ವಿನಿ ದೇಸಾಯಿ, ಭೀಮೇಶ್ವರಿ ಕುಲಕರ್ಣಿ, ಅನಿತಾ ಕೊಪ್ಪರ,ಹೇಮಾ ಪುರೋಹಿತ ,ಶ್ವೇತಾ ಕುಲಕರ್ಣಿ,ಲತಾ ಜೇಗರಕಲ್, ಸುಮಾ ಜಹಾಗೀರದಾರ್, ಲಕ್ಷ್ಮೀಬಾಯಿ, ಲಕ್ಷ್ಮೀ, ಲಹರಿ ಇನ್ನಿತರರು ಇದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ