ಭಗವದ್ಗೀತಾ ಸಮರ್ಪಣ ಕಾರ್ಯಕ್ರಮ : ಶ್ರೀ ಭಗವದ್ಗೀತೆ ಬಹು ಅಮೂಲ್ಯ ಗ್ರಂಥವಾಗಿದೆ-ಶ್ರೀ ನಿಜಾನಂದ ಮಹಾಸ್ವಾಮಿಗಳು
ಭಗವದ್ಗೀತಾ ಸಮರ್ಪಣ ಕಾರ್ಯಕ್ರಮ : ಶ್ರೀ ಭಗವದ್ಗೀತೆ ಬಹು ಅಮೂಲ್ಯ ಗ್ರಂಥವಾಗಿದೆ- ಶ್ರೀ ನಿಜಾನಂದ ಮಹಾಸ್ವಾಮಿಗಳು
ರಾಯಚೂರು, ಡಿ.24-ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ಸ್ವರ್ಣವಲ್ಲಿ ಮಠ ಸೋಂದ ಶಿರಸಿ ಇವರ ಮಾರ್ಗದರ್ಶನದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಭಗವದ್ಗೀತಾ ಸಮರ್ಪಣ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಶ್ರೀ ಶಂಕರ ಮಠ ರಾಯಚೂರಿನಲ್ಲಿ ಸಂಪನ್ನಗೊಂಡಿತು.
ದಿವ್ಯ ಸಾನಿಧ್ಯ ವನ್ನು ಮಿಟ್ಟಿ ಮಲ್ಕಾಪುರ ಶಾಂತಾಶ್ರಮದ ಪರಮಪೂಜ್ಯ ಶ್ರೀ ಶ್ರೋ. ಬ್ರ.ಶ್ರೀ ನಿಜಾನಂದ ಮಹಾಸ್ವಾಮಿಗಳು ಶ್ರೀ ಭಗವದ್ಗೀತೆ ಬಹು ಅಮೂಲ್ಯ ಗ್ರಂಥವಾಗಿದೆ ಈ ಗ್ರಂಥದ ಪಠಣ ಮನನ ಬಾಲ್ಯದಿಂದಲೇ ಆರಂಭವಾಗಬೇಕಾಗಿದೆ.
ಜೀವನದಲ್ಲಿ ಬರುವ ಎಲ್ಲ ಸಮಸ್ಯೆಗಳಿಗೆ ಪರಿಹಾರ ಈ ಗೀತೆಯಲ್ಲಿದೆ. ಜೀವನ ಆನಂದಮಯವಾಗಿ ಇರಬೇಕಾದರೆ ಭಗವದ್ಗೀತೆ ಅತ್ಯಂತ ಸಹಕಾರಿಯಾಗಿದೆ. ಶ್ರೀ ಕೃಷ್ಣ ಅರ್ಜುನನ ನಿಮಿತ್ತ ಮಾಡಿ ನಮ್ಮೆಲ್ಲರಿಗೂ ಸಂದೇಶವನ್ನು ನೀಡಿದ್ದಾರೆ ಎಂದು ಹೇಳಿದರು. ಗೀತಾ ಭಕ್ತರು ಅತ್ಯಂತ ಶ್ರದ್ಧೆಯಿಂದ ಸುಶ್ರಾವ್ಯವಾಗಿ ಭಗವದ್ಗೀತೆಯ ಹತ್ತನೇ ಅಧ್ಯಾಯ ವಿಭೂತಿ ಯೋಗವನ್ನು ಸಮರ್ಪಣೆ ಮಾಡಿದರು. ಮುಂಚಿತವಾಗಿ ನಡೆದ ಭಗವದ್ಗೀತೆ ಕುರಿ ತಾ ದ ಕಂಠ ಪಾಠ ಸ್ಪರ್ಧೆ ಭಾಷ ನ ಸ್ಪರ್ಧೆ ರಸಪ್ರಶ್ನೆ ರಂಗೋಲಿ ಸ್ಪರ್ಧೆ ಮತ್ತು ಭಗವದ್ಗೀತೆಯಲ್ಲಿ ಬರುವ ಪಾತ್ರಗಳ ಚಿತ್ರಗಳ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಮಕ್ಕಳಿಂದ ಮಹಾಭಾರತ ಪಾತ್ರಗಳ ಚದ್ಮ ವೇಶ ಪ್ರದರ್ಶನ ನಡೆಯಿತು.
ವೇದಿಕೆಯ ಮೇಲೆ ಉಪಸ್ಥಿತ ವಿಪ್ರ ಶ್ರೀ ಸದಾನಂದ ಪ್ರಭು ಅವರು ಸನಾತನ ಧರ್ಮಕ್ಕೆ ಜಯವಾಗಿದೆ ಪ್ರಭು ಶ್ರೀರಾಮಚಂದ್ರನ ಭವ್ಯ ಮಂದಿರ ನಿರ್ಮಾಣವಾಗಿದ್ದು ಉದ್ಘಾಟನಾ ಕಾರ್ಯಕ್ರಮ ಜನವರಿ 22ರಂದು ನಡೆಯಲಿದೆ. ಆ ದಿನ ನಾವೆಲ್ಲ ಅತ್ಯಂತ ಸಂಭ್ರಮದಿಂದ ಶ್ರೀರಾಮಚಂದ್ರನನ್ನು ಸ್ವಾಗತಿಸಬೇಕೆಂದು ಕೋರಿದರು. ಶ್ರೀ ಬಿ ಗೋವಿಂದ ಮತ್ತು ಶ್ರೀ ಶಶಿ ರಾಜ್ ಅವರು ಕೂಡ ಭಗವದ್ಗೀತೆಯ ಮಹತ್ವವನ್ನ ಕೊಂಡಾಡಿ ದರು. ಕಾರ್ಯಕ್ರಮದ ಸ್ವಾಗತವನ್ನು ಡಾ. ಆನಂದತೀರ್ಥ ಫಡ್ನಿಸ್ ಮಾಡಿದರೆ ವಂದನಾರ್ಪಣೆಯನ್ನು ಶ್ರೀ ಈಶ್ವರ್ ಹೆಗಡೆಯವರು ಮಾಡಿದರು. ಶ್ರೀಮತಿ ಗಾಯತ್ರಿ ಶೆಲ್ವಾಡೆ ಪ್ರಾರ್ಥಿಸಿದರೆ ಶ್ರೀಮತಿ ಪರಿಮಳ ದೀಕ್ಷಿತ್ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ನಿರೂಪಿಸಿದರು. ಕೊನೆಯಲ್ಲಿ ಭಗವದ್ಗೀತೆ ಆರತಿಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
Comments
Post a Comment