ಕಾಡ್ಲೂರಲ್ಲಿ ಶ್ರೀ ರಾಘವೇಂದ್ರ ಮಕ್ಕಳ ಕೂಟ(ಆಟದ ಉದ್ಯಾನ )ಉದ್ಘಾಟನೆ: ಮಕ್ಕಳು ಪಠ್ಯೇತರ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳಬೇಕು - ಸುವರ್ಣಾ ಬಾಯಿ ದೇಸಾಯಿ
ಕಾಡ್ಲೂರಲ್ಲಿ ಶ್ರೀ ರಾಘವೇಂದ್ರ ಮಕ್ಕಳ ಕೂಟ(ಆಟದ ಉದ್ಯಾನ ) ಉದ್ಘಾಟನೆ: ಮಕ್ಕಳು ಪಠ್ಯೇತರ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳಬೇಕು - ಸುವರ್ಣಾ ಬಾಯಿ ದೇಸಾಯಿ. ರಾಯಚೂರು,ಡಿ.26- ಮಕ್ಕಳು ಪಠ್ಯೇತರ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳಬೇಕು ಎಂದು ಕಾಡ್ಲೂರು ಸಂಸ್ಥಾನದ ಸುವರ್ಣಾಬಾಯಿ ದೇಸಾಯಿ ಹೇಳಿದರು. ಅವರು ತಾಲೂಕಿನ ಕಾಡ್ಲೂರು ಗ್ರಾಮದಲ್ಲಿ ಕಾಡ್ಲೂರು ಸಂಸ್ಥಾನ ಹಾಗೂ ರಂಗದೇ ವತಿಯಿಂದ ನಿರ್ಮಿಸಿದ ಶ್ರೀ ರಾಘವೇಂದ್ರ ಮಕ್ಕಳ ಕೂಟ (ಆಟದ ಉದ್ಯಾನ ) ಉದ್ಘಾಟನೆ ನೆರವೇರಿಸಿ ಮಾತನಾಡಿ ಮಕ್ಕಳಿಗೆ ಶಿಕ್ಷಣ ಜೊತೆ ಆಟೋಟಗಳಲ್ಲಿಯೂ ಆಸಕ್ತಿ ಹೊಂದಬೇಕೆಂದರು.
ಆಟದ ಉದ್ಯಾನ ನಾಮಫಲಕ ಅನಾವರಣಗೊಳಿಸಿದ ಶ್ರೀ ವಿಜಯದಾಸರ ವಂಶಸ್ಥರಾದ ಜಗನ್ನಾಥ ದಾಸ ಚೀಕಲಪರ್ವಿ ಮಾತನಾಡಿ ಕಾಡ್ಲೂರು ಸಂಸ್ಥಾನ ಈ ಮೊದಲಿನಿಂದಲು ಪರೋಪಕಾರಿ ಮನೋಭಾವ ಬೆಳೆಸಿಕೊಂಡಿದ್ದು ಮಕ್ಕಳಿಗೆ ಆಟವಾಡಲು ಆಟದ ಉದ್ಯಾನ ನಿರ್ಮಿಸಿದ್ದು ಶ್ಲಾಘನೀಯವಾದುದು.
ಶ್ರೀ ರಾಘವೇಂದ್ರ ಮಕ್ಕಳ ಕೂಟದ ನಿರ್ಮಾಣದ ರೂವಾರಿ ರಂಗರಾವ್ ದೇಸಾಯಿ ಕಾಡ್ಲೂರು ಮಾತನಾಡಿ ತಾವು ಉದ್ಯೋಗ ಮಾಡುವ ಭಾಷ್ ಕಂಪನಿ ನೂರು ವರ್ಷ ಪೂರೈಸಿದ್ದು ಅವರು ಹೊರತಂದ ವಿಶೇಷ ಸಂಚಿಕೆಯಲ್ಲಿ ರಂಗದೇ ಮೂಲಕ ಮಾಡಿದ ಸಾಮಾಜಿಕ ಕಾರ್ಯದ ಬಗ್ಗೆ ಲೇಖನ ಪ್ರಕಟಗೊಂಡಿದ್ದು ಅದನ್ನು ನಮ್ಮ ಕಂಪನಿಯ ವಿದೇಶಿ ನಿರ್ದೇಶಕರೊಬ್ಬರು ಕೊಂಡಾಡಿದ್ದರು ನನ್ನ ನೌಕರಿಯಿಂದ ಬಂದ ವೇತನದಲ್ಲಿ ನಾನು ನನ್ನ ಸ್ವಂತಕ್ಕೆ ಬುಲೆಟ್ ದ್ವಿಚಕ್ರ ವಾಹನ ಖರೀದಿಸಬೇಕು ಎಂಬ ಆಸೆಯಿತ್ತು ತದನಂತರ ನನಗೆ ಅನ್ನಿಸಿತು ನಾನು ಬುಲೆಟ್ ವಾಹನ ಖರೀದಿಸಿದರೆ ನನಗೆ ಮತ್ತು ನನ್ನ ಕುಟುಂಬ ಹಾಗೂ ಸ್ನೇಹಿತರಿಗೆ ಮಾತ್ರ ಸಂತೋಷವಾಗಬಹುದು ಆದರೆ ನಾನು ಸಮಾಜಕ್ಕೆ ಅದರಲ್ಲಿ ಹಳ್ಳಿಯಲ್ಲಿ ಮಕ್ಕಳಿಗೆ ಮನೋರಂಜನೆಗೆ ಒಂದು ಆಟದ ಉದ್ಯಾನ ಏಕೆ ನಿರ್ಮಿಸಬಾರದು ಎಂಬ ಆಲೋಚನೆ ಬಂದಿದ್ದರಿಂದ ಆಟದ ಮೈದಾನ ರೂಪುಗೊಂಡಿದೆ ಇದಕ್ಕೆ ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳನ್ಞು ಸಲ್ಲಿಸಿದರು.
ಕಾರ್ಯಕ್ರಮ ನಿರ್ವಹಣೆ ಮತ್ತು ನಿರೂಪಣೆಯನ್ನು ತಾರಾನಾಥ್ ಜೇಗರಕಲ್ ನೆರವೇರಿಸಿದರು. ಇದೆ ವೇಳೆ ಉದ್ಯಾನದಲ್ಲಿ ಅತಿಥಿಗಳು ಸಸಿಗಳನ್ನು ನೆಟ್ಟರು.
ಈ ಸಂದಂರ್ಭದಲ್ಲಿ ವೆಂಕೋಬಾಚಾರ್ ಪುರೋಹಿತ, ನಾರಾಯಣರಾವ್ ಕುಲಕರ್ಣಿ, ಭೀಮಸೇನ ಕುಲಕರ್ಣಿ , ಗುರುಪ್ರಸಾದ್ ಕುಲಕರ್ಣಿ ,ವೀರೇಶ್ ಸಾಹುಕಾರ, ಜಯಕುಮಾರ ದೇಸಾಯಿ, ವಿಜಯಕುಮಾರ್ ದೇಸಾಯಿ, ಅಭಿಷೇಕ ದೇಸಾಯಿ, ಸುಧನ್ವ ಕುಲಕರ್ಣಿ, ಅಶ್ವಿನಿ ದೇಸಾಯಿ, ಭೀಮೇಶ್ವರಿ ಕುಲಕರ್ಣಿ, ಅನಿತಾ ಕೊಪ್ಪರ, ಲತಾ ಜೇಗರಕಲ್, ಶ್ವೇತಾ ಕುಲಕರ್ಣಿ,ಲಹರಿ, ರಘುಮಾನ್ಯ ಸೇರಿದಂತೆ ಗ್ರಾಮಸ್ಥರು ಇದ್ದರು. ಮಕ್ಕಳಲ್ಲಿ ಸಂತಸ: ಉಚಿತ ಆಟದ ಉದ್ಯಾನ ಉದ್ಘಾಟನೆ ನಂತರ ಮಕ್ಕಳು ಆಟದಲ್ಲಿ ಮಗ್ನರಾಗಿ ಸಂತಸ ಪಟ್ಟರು .
Comments
Post a Comment