ಸಮಪಾಲು ಪಡೆಯಲು ಎಲ್ಲ ಹಿಂದುಳಿದ, ಶೋಷಿತ ಸಮಾಜದವರ ಒಗ್ಗಟ್ಟು ಪ್ರದರ್ಶನ ಅಗತ್ಯ- ರಾಮಚಂದ್ರಪ್ಪ

 


ಸಮಪಾಲು ಪಡೆಯಲು ಎಲ್ಲ ಹಿಂದುಳಿದ, ಶೋಷಿತ ಸಮಾಜದವರ ಒಗ್ಗಟ್ಟು ಪ್ರದರ್ಶನ ಅಗತ್ಯ- ರಾಮಚಂದ್ರಪ್ಪ  ರಾಯಚೂರು,ಡಿ.31-ರಾಜಕೀಯವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಸಮಪಾಲು ಪಡೆಯಲು ಎಲ್ಲ ಹಿಂದುಳಿದ, ಶೋಷಿತ ಸಮಾಜದವರು ಒಗ್ಗಟ್ಟು ಪ್ರದರ್ಶನ ಮಾಡುವ ಅಗತ್ಯ ಇದೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪ ಹೇಳಿದರು.

ಇಂದು ರಾಯಚೂರಿನ ಮಡಿವಾಳ ಸಮಾಜದ ಸಮುದಾಯ ಭವನದಲ್ಲಿ ಜನವರಿ 28 ರಂದು ಚಿತ್ರದುರ್ಗದಲ್ಲಿ ನಡೆಯುವ ಶೋಷಿತರ ಜಾಗೃತಿ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸ್ವತಂತ್ರ ದೊರೆತ ನಂತರ ಹಿಂದುಳಿದ ವರ್ಗಗಳ ಸ್ಥಿಿತಿಗತಿ ಅಧ್ಯಯನಕ್ಕೆೆ ರವನೆಯಾದ ಆಯೋಗದಿಂದ ನೀಡಿದ ಎಲ್ಲ ವರದಿಗಳಿಗೂ ಮುಂದುವರಿದ ಜನಾಂಗದವರು ವಿರೋಧ ಮಾಡಿಕೊಂಡು ಬಂದಿದ್ದು ಈಗಲೂ ಸಹ ಕಾಂತರಾಜ ವರದಿ ಜಾರಿಗೆ ವಿರೋಧಿಸುತ್ತಿದ್ದು ಅದನ್ನು ನಾವು ಪ್ರಬಲವಾಗಿ ಖಂಡಿಸುವ ಮೂಲಕ ಒಗ್ಗಟ್ಟು ಪ್ರದರ್ಶನ ಮಾಡಬೇಕು ಎಂದು ಸಲಹೆ ಮಾಡಿದರು.


ರಾಜಕೀಯವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ನಮ್ಮ ಜನಸಂಖ್ಯೆೆಗನುಗುಣವಾಗಿ ಸಿಗಬೇಕಾದ ಪಾಲು ಸಿಗುತ್ತಿಿಲ್ಲಘಿ. ನಮಗೆ ಸಿಗಬೇಕಾದ ಸೌಲಭ್ಯಗಳು ಮುಂದುವರಿದ ಜಾತಿಗಳು ಕಬಳಿಸುತ್ತಿಿದ್ದರೂ ನಾವು ವೌನ ವಹಿಸಿದ್ದೇವೆ. ಶೇ.56ರಷ್ಟಿಿರುವ ಹಿಂದುಳಿದ ಸಮಾಜದವರಿಗೆ ಕೇವಲ ಶೇ.27ರಷ್ಟು ಮಾತ್ರ ಇದೆ. ಇಂತಹ ಅನ್ಯಾಾಯ ಕಳೆದ ಏಳು ದಶಕದಿಂದಲೂ ಸಹಿಸುತ್ತ ಬಂದಿದ್ದೇವೆ. ಆದರೆ, ಈಗ ಅದನ್ನು ಮೆಟ್ಟಿ ನಿಂತು ಕಾಂತರಾಜ್ ವರದಿ ಜಾರಿ ಮಾಡಲು ಒಗ್ಗಟ್ಟು ಪ್ರದರ್ಶನ ಮಾಡುವ ಮೂಲಕ ನಮ್ಮ ಹಕ್ಕು ಪಡೆಯಬೇಕಾಗಿದೆ. ಅದಕ್ಕಾಾಗಿ ಜನವರಿ 28ರಂದು ಚಿತ್ರದುರ್ಗದಲ್ಲಿ ನಡೆಯುವ ಶೋಷಿತರ ಜಾಗೃತಿ ಸಮಾವೇಶದಲ್ಲಿ ಭಾಗವಹಿಸಿ ಯಶ್ವಿಗೊಳಿಸಬೇಕು ಎಂದರು.

ಡಾ.ರಝಾಕ್ ಉಸ್ತಾಾದ್, ಮಾಡಗಿರಿ ನರಸಿಂಹಲು, ದೇವಣ್ಣ ನಾಯಕ, ಶ್ರೀಕಾಂತ ವಕೀಲ, ಮಹ್ಮದ್ ಶಾಲಂ, ಎಂ.ಈರಣ್, ಬಿ.ವೆಂಕಟಸಿಂಗ್, ವೆಂಕಟರಾಮಯ್ಯ ಮಾತನಾಡಿ, ಹಿಂದುಳಿದವರಿಗೆ ರಾಜಕೀಯ ಪ್ರಾಾತಿನಿಧ್ಯ ದೊರೆಯದಿದ್ದರೆ ಯಾವುದರಲ್ಲೀ ಅಭಿವೃದ್ದಿ ಹೊಂದಲು ಸಾಧ್ಯವಿಲ್ಲ. ಶಾಸನ ಸಭೆಯಲ್ಲಿ ಕಡಿಮೆ ಜನಸಂಖ್ಯೆ ಇರುವ ಪ್ರಬಲ ಕೋಮಿನವರು ಹೆಚ್ಚಿಿನ ಪ್ರಾತಿನಿಧ್ಯ ಪಡೆದಿದ್ದಾಾರೆ. ಶೇ.80ರಷ್ಟಿರುವ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ಮತ್ತು ಅಲ್ಪಸಂಖ್ಯಾತರು ಕೇವಲ ಶೇ.20ರಷ್ಟು ಪ್ರಾತಿನಿಧ್ಯ ಹೊಂದಿದ್ದರೂ ನಾವು ಇನ್ನೂ ಎಚ್ಚೆೆತ್ತುಕೊಳ್ಳದಿದ್ದರೆ ಭವಿಷ್ಯದಲ್ಲಿ ನಮ್ಮ ಪೀಳಿಗೆ ಎಲ್ಲ ಸೌಲಭ್ಯಗಳಿಂದ ವಂಚಿತವಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಪ್ರತಿ ಜಿಲ್ಲೆಯಲ್ಲೂ ಶೋಷಿತ ವರ್ಗಗಳ ಸಮಿತಿಗಳ ರಚಿಸಿ, ನಮಗೆ ಆಗುತ್ತಿರುವ ಅನ್ಯಾಾಯಗಳ ಮನವರಿಕೆ ಮಾಡಿಕೊಡುವ ಮೂಲಕ ಮುಂಬರುವ ದಿನಗಳಲ್ಲಿ ರಾಜಕೀಯ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ನಮಗೆ ದಕ್ಕಬೇಕಾದ ಪಾಲು ಪಡೆಯಲೇಬೇಕು ಎಂದು ಪ್ರತಿಪಾದಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಯಚೂರು ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ.ಶಾಂತಪ್ಪ ಮಾತನಾಡಿ, ಈಗಾಗಲೇ ಶೇ.10ರಷ್ಟು ಮೀಸಲಾತಿ ನಮಗೆ ತಪ್ಪಿ ಹೋಗಿದೆ. ಬರುವ ದಿನಗಳಲ್ಲಿ ನಮಗೆ ಸಿಗಬೇಕಾದ ಸಂಪೂರ್ಣ ಮೀಸಲಾತಿ ತೆಗೆದು ಹಾಕಬಹುದು. ಈಗಿನಿಂದಲೇ ನಾವು ಎಚ್ಚರ ವಹಿಸದೆ ಹೋದರೆ ಸಂವಿಧಾನ ಬದ್ದ ನಮಗೆ ಸಿಗಬೇಕಾದ ಎಲ್ಲ ಸೌಲಭ್ಯ ರದ್ದು ಆಗುತ್ತವೆ. ಅದಕ್ಕಾಗಿ ಎಚ್ಚೆತ್ತುಕೊಳ್ಳಬೇಕು ಎಂದರು.

ಜಿಲ್ಲಾ, ತಾಲೂಕು ಪಂಚಾಯಿತಿಗಳಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕೈ ತಪ್ಪಿಿದ್ದು ಇದನ್ನು ನ್ಯಾಾಯಾಲಯದಲ್ಲಿ ಪ್ರಶ್ನಿಿಸಬೇಕಾಗಿದೆ ಹಾಗೂ ಹಿಂದುಳಿದ ವರ್ಗಗಳಿಗೆ ಆಗುತ್ತಿರುವ ಅನ್ಯಾಾಯ ಸರಿಪಡಿಸಲು ಹೋರಾಟ ಮಾಡಬೇಕು. ಈ ದಿಶೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ಹಿತ ಕಾಪಾಡಲು ಬದ್ದರಾಗಿದ್ದು ಅವರ ಕೈ ಬಲಪಡಿಸಲು ನಾವೆಲ್ಲರೂ ಅವರಿಗೆ ಬೆಂಬಲ ನೀಡುವ ಮೂಲಕ ಕಾಂತರಾಜ್ ವರದಿ ಜಾರಿಗೆ ಹಕ್ಕೋತ್ತಾಾಯ ಮಂಡಿಸಲು ಹೇಳಿದರು.

ಚಿತ್ರದುರ್ಗದ ಸಮ್ಮೇಳನಕ್ಕೆ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊೊಂಡು ನಮ್ಮ ಹಕ್ಕು ಪಡೆಯಲು ಮುಮದಾಗೋಣ ಎಂದು ಸಲಹೆ ಮಾಡಿದರು.

ಸಭೆಯಲ್ಲಿ ಜಯವಂತರಾವ್ ಪತಂಗೆ, ಖಾಜನಗೌಡ, ಅಬ್ದುಲ್ ಕರೀಂ, ಮಲ್ಲೇಶ ಕೊಲ್ಮಿ ಸೇರಿದಂತೆ ಮತ್ತಿತರ ಪದಾಧಿಕಾರಿಗಳು ಭಾಗವಹಿಸಿದ್ದರು.

ಆರಂಭದಲ್ಲಿ ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ ಯಾದವ್ ಪ್ರಾಾಸ್ತವಿಕವಾಗಿ ಮಾತನಾಡಿದರೆ, ವಿಜಯಭಾಸ್ಕರ್ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ