ಬೆಂಗಳೂರಿನಲ್ಲಿ ಬಾಬುರಾವ್ ಅವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರಧಾನ

 


ಬೆಂಗಳೂರಿನಲ್ಲಿ ಬಾಬುರಾವ್ ಅವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರಧಾನ

ರಾಯಚೂರು,ಡಿ.28-   ನಗರದ ಸಮಾಜ ಸೇವಕರು, ರಾಜಕೀಯ ಧುರೀಣರು, ರೈಲ್ವೆ ಬೋರ್ಡಿನ ಸಲಹಾಗಾರರಾದ   ಬಾಬುರಾವ್ ಇವರಿಗೆ ಆಸ್ಟ್ರೇಲಿಯಾದ ಮೆಲ್ಬೋರ್ನ್ ಮದರ್ ತೆರೇಸಾ ವಿಶ್ವವಿದ್ಯಾಲಯದಿಂದ ಸಮಾಜ ಸೇವೆಗಾಗಿ ಗೌರವ ಡಾಕ್ಟರೇಟ್ ಪದವಿಯನ್ನು ಬೆಂಗಳೂರಿನ ಹೋಟೆಲ್ ಪರಾಗದಲ್ಲಿ ನಿನ್ನೆ ನಡೆದ ಸಮಾರಂಭದಲ್ಲಿ ನೀಡಿ ಗೌರವಿಸಲಾಯಿತು.

      ಯಶಸ್ವಿ ಚಂದ್ರಯಾನದ ರೂವಾರಿಯಾಗಿರುವ ಭಾರತ ಸರ್ಕಾರದ ಡಿ ಆರ್ ಡಿ ಯು ಹಾಗೂ ವಿಜ್ಞಾನಿಗಳಾದ ಡಾಕ್ಟರ್ ಎನ್ ಪ್ರಭಾಕರ್ ಅವರು ಸಮಾರಂಭದಲ್ಲಿ ಭಾಗವಹಿಸಿ ಗೌರವ ಡಾಕ್ಟರೇಟ್ ಪದವಿಯನ್ನು ಪ್ರಧಾನ ಮಾಡಿದರು.

    ಈ ಸಂದರ್ಭದಲ್ಲಿ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ರಾಯಭಾರಿಗಳಾದ ಡಾ. ಜಿ ರಾಬರ್ಟ್ ಡೊನಾಲ್ಡ್ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಪದವಿ ಸ್ವೀಕರಿಸುತ್ತಿರುವವರಿಗೆ ಶುಭ ಹಾರೈಸಿದರು.

  ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ಜಸ್ಟಿಸ್ ಶಿವರಾಜ್ ಪಾಟೀಲ್ ಇವರು ಗೌರವ ಡಾಕ್ಟರೇಟ್ ಪದವಿಯನ್ನು ಸ್ವೀಕರಿಸಿದ ಶ್ರೀ ಬಾಬುರಾವ್ ಅವರ ಸಮಾಜ ಸೇವೆಯು ಶ್ಲಾಘನೀಯವಾಗಿದೆ ಎಂದು ಶುಭ ಹಾರೈಸಿದರು.

    ಅದೇ ರೀತಿ ಸಣ್ಣ ನೀರಾವರಿ, ವಿಜ್ಞಾನ ತಂತ್ರಜ್ಞಾನ ಸಚಿವರಾದ

ಶ್ರೀ ಎನ್ ಎಸ್ ಬೋಸ್ ರಾಜ್ ಅವರು ಶ್ರೀ ಬಾಬುರಾವ್ ಅವರ ಸಾಮಾಜಿಕ ಸೇವೆ ಯನ್ನು ಮಾಡಿದ ಪ್ರಯುಕ್ತ ಅವರಿಗೆ ಸಂದ ಗೌರವವಾಗಿದೆ ಎಂದು ಅಭಿನಂದಿಸಿದ್ದಾರೆ.

     ಬೆಂಗಳೂರಿನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ  ವಿಜಯ ಸರಸ್ವತಿ, ಹಲವಾರು ವಿಜ್ಞಾನಿಗಳು ಮತ್ತು ಗಣ್ಯರು ಪಾಲ್ಗೊಂಡಿದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್