ಪರ್ಯಾವರಣ ಸಂರಕ್ಷಣಾ ಗತಿವಿಧಿ ಅಭ್ಯಾಸವರ್ಗ ಉಧ್ಘಾಟನೆ.
ಪರ್ಯಾವರಣ ಸಂರಕ್ಷಣಾ ಗತಿವಿಧಿ ಅಭ್ಯಾಸವರ್ಗ ಉಧ್ಘಾಟನೆ. ರಾಯಚೂರು,ಡಿ.31- ಪರಿಸರ ಸಂರಕ್ಷಿಸದಿದ್ದರೆ ಮುಂದಿನ ಪೀಳಿಗೆಗೆ ಆಪತ್ತು ಕಾದಿದೆ ಎಂದು ಯುವ ಕೃಷಿಕ, ಪರಿಸರ ಪ್ರೇಮಿ ಅಶೋಕ್ ಮಾಲಿಪಾಟೀಲ್ ಹೇಳಿದರು. ಅವರಿಂದು ನಗರದ ಆರ್ ಟಿ ಓ ವೃತ್ತದ ಬಳಿಯ ಸಾಲುಮರದ ತಿಮ್ಮಕ್ಕ ಉದ್ಯಾನದಲ್ಲಿ ಪರ್ಯಾವರಣ ಗತಿವಿಧಿ ಕರ್ನಾಟಕ ಉತ್ತರ ಬಳ್ಳಾರಿ ವಿಭಾಗದ ಅಭ್ಯಾಸ ವರ್ಗದಲ್ಲಿ ವಿಷಯಮಂಡನೆ ಮಾಡಿದರು.
ನಾನು ವಿವಿಧ ಕಾಲೇಜುಗಳಲ್ಲಿ ಪ್ರಾಧ್ಯಾಪಕನಾಗಿ ಕಾರ್ಯ ನಿರ್ವಹಿಸಿದ್ದು ಸದ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದು ನಮ್ಮ ಪರಿಸರ ನಾಶವಾಗಿದೆ ಶೇ.0.35ಅರಣ್ಯ ಉಳಿದಿದೆ ಕಾಂಕ್ರೀಟೀಕರಣ, ಕೈಗಾರಿಕೆ, ಉಷ್ಣ ವಿದ್ಯುತ್ ಘಟಕಗಳಿಂದ ಪರಿಸರಕ್ಕೆ ಮಾರಕವಾಗಿದೆ ನಮ್ಮ ಜಿಲ್ಲೆಯಲ್ಲಿಯೇ ಉಷ್ಣವಿದ್ಯುತ್ ಘಟಕದಿಂದ ಮಳೆ ಬೆಳೆ ಕುಂಠಿತವಾಗಿದೆ ಇದಕ್ಕೆ ಪರ್ಯಾಯ ಮಾರ್ಗವೆಂದರೆ ಪ್ರತಿಯೊಬ್ಬರು ಒಂದು ಗಿಡ ನೆಡಬೇಕು ಎಂದರು. ಗ್ರೀನ್ ರಾಯಚೂರು ಸಂಸ್ಥೆಯ ರಾಜೇಂದ್ರ ಶಿವಾಳೆ ಮಾತನಾಡಿ ಜ.22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯಾಗಲಿದ್ದು ಅಂದು ನಾವೆಲ್ಲರು ರಾಮನ ಹೆಸರಲ್ಲಿ ಒಂದು ಗಿಡ ನೆಡುವ ಸಂಕಲ್ಪ ಮಾಡೋಣವೆಂದರು.
ವೇದಿಕೆ ಮೇಲೆ ಸಾಗರ್ ಇದ್ದರು. ಈ ಸಂದರ್ಭದಲ್ಲಿ ಲಾಲಾಜಿ ಪಟೇಲ್ ಇನ್ನಿತರರು ಇದ್ದರು. ಕಾರ್ಯಕ್ರಮದಲ್ಲಿ ಪರಿಸರ ಪ್ರೇಮಿಗಳು, ಮಕ್ಕಳು ಭಾಗವಹಿಸಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
Comments
Post a Comment