ನಾಳೆ ಶ್ರುತಿ ಸಾಹಿತ್ಯ ಮೇಳ ವತಿಯಿಂದ ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನಾಚರಣೆ
ನಾಳೆ ಶ್ರುತಿ ಸಾಹಿತ್ಯ ಮೇಳ ವತಿಯಿಂದ ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನಾಚರಣೆ
ರಾಯಚೂರು,ಡಿ.28- ನಗರದ ಸಾಂಸ್ಕೃತಿಕ, ಸಾಹಿತಿಕ ಸಂಘಟನೆಯಾದ ಶ್ರುತಿ ಸಾಹಿತ್ಯ ಮೇಳ ರಾಯಚೂರು ವತಿಯಿಂದ ನಾಡಿನ ರಾಷ್ಟ್ರಕವಿ, ಯುಗದ ಕವಿ, ಜಗದ ಕವಿ ಕುವೆಂಪು ಅವರ 119 ನೇ ಜನ್ಮದಿನಾಚರಣೆಯನ್ನು ನಾಳೆ ಡಿ.29 ಸಂಜೆ 5:00ಗೆ ಜವಾಹರ ನಗರ ಪ್ರೌಢಶಾಲೆಯಲ್ಲಿ ಆಚರಿಸಲಾಗುತ್ತಿದೆ.
ಈ ಕಾರ್ಯಕ್ರಮದಲ್ಲಿ ದಾಸ ಸಾಹಿತ್ಯದ ವಿದ್ವಾಂಸರು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹಾಗೂ ಶ್ರುತಿ ಸಾಹಿತ್ಯ ಮೇಳದ ಗೌರವಾಧ್ಯಕ್ಷರಾದ ಡಾಕ್ಟರ್ ಜಯಲಕ್ಷ್ಮಿ ಮಂಗಳಮೂರ್ತಿಯವರು ಭಾಗವಹಿಸಲಿದ್ದಾರೆ. ಇದರಲ್ಲಿ ಸಾಹಿತ್ಯಾಸಕ್ತರು ಭಾಗವಹಿಸಬೇಕಾಗಿ ಶ್ರುತಿ ಸಾಹಿತ್ಯ ಮೇಳದ ಅಧ್ಯಕ್ಷರಾದ ಮುರಳಿಧರ ಕುಲಕರ್ಣಿ ಅವರು ವಿನಂತಿಸಿದ್ದಾರೆ.
Comments
Post a Comment