ನಗರಸಭೆಯಿಂದ ವಾರಕ್ಕೊಂದು ವಾರ್ಡ್ ಸ್ವಚ್ಚತಾ ಅಭಿಯಾನ ಕಾರ್ಯಕ್ರಮ: ವಾರ್ಡ್ ನಂ 17ರಲ್ಲಿ ರವಿ ಬೋಸರಾಜುರಿಂದ ಸ್ವಚ್ಚತೆ ಬಗ್ಗೆ ಜಾಗೃತಿ .
ನಗರಸಭೆಯಿಂದ ವಾರಕ್ಕೊಂದು ವಾರ್ಡ್ ಸ್ವಚ್ಚತಾ ಅಭಿಯಾನ ಕಾರ್ಯಕ್ರಮ: ವಾರ್ಡ್ ನಂ 17ರಲ್ಲಿ ರವಿ ಬೋಸರಾಜುರಿಂದ ಸ್ವಚ್ಚತೆ ಬಗ್ಗೆ ಜಾಗೃತಿ .
ರಾಯಚೂರು,ಜ.28-ರಾಯಚೂರಿನ ಸ್ವಚ್ಚತೆ ಮತ್ತು ಸುಂದರಕ್ಕಾಗಿ ನಗರಸಭೆ ವಿಶೇಷ ಪ್ರಯತ್ನವಾದ ವಾರಕ್ಕೆ ಒಂದರಂತೆ ವಾರ್ಡ್ ಸ್ವಚ್ಚತೆಯಲ್ಲಿ ನಾವೆಲ್ಲರು ಸಹಕರಿಸಿ ನಗರಸಭೆಯೊಂದಿಗೆ ಕೈಜೋಡಿಸಬೇಕೆಂದು ಕಾಂಗ್ರೆಸ್ ರಾಜ್ಯ ಯುವ ಮುಖಂಡರಾದ ರವಿ ಬೋಸರಾಜು ಸ್ವಚ್ಚತೆ ಬಗ್ಗೆ ಜಾಗೃತಿ ಮೂಡಿಸಿದರು ಮಾತನಾಡಿ ದರು.
ಅವರಿಂದು ನಗರಸಭೆಯಿಂದ ವಾರಕ್ಕೆ ಒಂದು ವಾರ್ಡನಂತೆ ವಾರ್ಡ್ ನಂ 17 ರಲ್ಲಿ ನಡೆದ ಸ್ವಚ್ಚತಾ ಕಾರ್ಯವನ್ನು ಪರಿಶೀಲಿಸಿದರು.
ಸ್ವಚ್ಚ ಮತ್ತು ಸುಂದರ ನಗರವನ್ನಾಗಿ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ ಅದಕ್ಕಾಗಿ ಎಲ್ಲಂದರಲ್ಲಿ ಕಸವನ್ನು ಬಿಸಾಕಬಾರದು ನಗರಸಭೆಯಿಂದ ಬರುವ ಕಸ ವಿಲೇವಾರಿ ವಾಹನಗಳಿಗೆ ಮನೆಯಲ್ಲಿ ಶೇಖರಿಸಿದ ಹಸಿ-ಒಣ ಕಸಗಳನ್ನು ನೀಡಬೇಕೆಂದು ಸಾರ್ವಜನಿಕರಿಗೆ ಮನವಿ ಮಾಡಿ ಸ್ವಚ್ಚತೆ ಬಗ್ಗೆ ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಮೊಹ್ಮದ್ ಶಾಲಂ, ನಗರಸಭೆ ಸದಸ್ಯರಾದ ಜಿಂದಪ್ಪ, ತಿಮ್ಮಾರಡ್ಡಿ, ನರಸಿಂಹಲು ಮಾಡಗಿರಿ, , ಪ್ರತಾಪ ರಡ್ಡಿ, ಅಬ್ದುಲ್ ವಾಹಿದ್, ಅರುಣ ದೋತರಬಂಡಿ, ವಸಂತ ಅರೋಲಿ, ವಿನೋದ್ ಕುಮಾರ್, ಮೊಹ್ಮದ್ ಶೈಭಾಜ್, ಚೇತನ್ ಕಡಗೋಲ್, ಗೋಪಾಲ್ ಸೇರಿದಂತೆ, ನಗರಸಭೆ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
Comments
Post a Comment