ಕೇಂದ್ರ ಮಧ್ಯಂತರ ಬಜೆಟ್- ಗರಿಗೆದರಿದ ಏಮ್ಸ್ ಬೇಡಿಕೆ: 629 ದಿನಗಳ‌ ಹೋರಾಟಕ್ಕೆ ನ್ಯಾಯ ದೊರಕಿಸುವರೇ ನಿರ್ಮಲಾ ಸೀತಾರಾಮನ್ ?

 


ಕೇಂದ್ರ ಮಧ್ಯಂತರ  ಬಜೆಟ್- ಗರಿಗೆದರಿದ ಏಮ್ಸ್ ಬೇಡಿಕೆ:                                                      629 ದಿನಗಳ‌ ಹೋರಾಟಕ್ಕೆ ನ್ಯಾಯ    ದೊರಕಿಸುವರೇ ನಿರ್ಮಲಾ ಸೀತಾರಾಮನ್  ?           ರಾಯಚೂರು,ಜ.31- ರಾಜ್ಯದ ಇತಿಹಾಸದಲ್ಲೆ ಸುಧೀರ್ಘ ಹೋರಾಟಗಳ ಸಾಲಿನಲ್ಲಿ ಸೇರ್ಪಡೆಯಾದ 629 ದಿನಗಳ ಏಮ್ಸ್ ಹೋರಾಟಕ್ಕೆ ಕೇಂದ್ರ ಮಧ್ಯಂತರ ಬಜೆಟ್ ನಲ್ಲಿ ನ್ಯಾಯ ದೊರಕುವುದೇ ಎಂಬ ಕುತೂಹಲ ಗರಿಗೆದರಿದೆ.   

                                           ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಏಮ್ಸ್) ಸ್ಥಾಪಿಸುವಂತೆ ನಗರದ ಜಿಲ್ಲಾ ಕ್ರೀಡಾಂಗಣ ಬಳಿ ಮಹಾತ್ಮ ಗಾಂಧಿಜಿ ಪುತ್ಥಳಿ ಮುಂಭಾಗದಲ್ಲಿ ನಡೆಸುತ್ತಿರುವ ಧರಣಿ ಎರೆಡು ವರ್ಷ ಸಮಿಪಿಸುತ್ತಿದ್ದು ಹೋರಾಟಗಾರರ ಸಹನೆಯ ಕಟ್ಟೆ ಒಡೆಯುವ ಮುನ್ನವೆ ನಾಳೆಯ ಕೇಂದ್ರ ಮಧ್ಯಂತರ ಬಜೆಟ್ ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜಿಲ್ಲೆಗೆ ಸಿಹಿ ಸುದ್ದಿ ನೀಡುವರೆ ಎಂಬ ಕುತೂಹಲ ಮನೆ ಮಾಡಿದೆ. ಈ ಹಿಂದೆ ಐಐಟಿ ಮಂಜೂರು ಮಾಡುವಂತೆ ಸುಧೀರ್ಘ ಹೋರಾಟ ನಡೆದಿತ್ತು ಆದರೆ ಅದನ್ನು ಧಾರವಾಡಕ್ಕೆ ಕೊಂಡೊಯ್ಯಲಾಯಿತು ಐಐಟಿ ವಂಚಿತ ಜಿಲ್ಲೆ ಏಮ್ಸ್ ನೀಡುವ ಮುಖಾಂತರ ಜಿಲ್ಲೆಗೆ ಆದ ಅನ್ಯಾಯವನ್ನು ಕೇಂದ್ರ ಸರ್ಕಾರ ಸರಿಪಡಿಸಬೇಕು ಎಂಬ ಬೇಡಿಕೆ ಏಮ್ಸ್ ಹೋರಾಟಗಾರರು ಮತ್ತು ಜಿಲ್ಲೆಯ ಜನರಿದ್ದಾಗಿದೆ. ಏಮ್ಸ್ ಹೋರಾಟಕ್ಕೆ ಪಕ್ಷಾತೀತವಾಗಿ ಬೆಂಬಲ ವ್ಯಕ್ತವಾಗಿದೆ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ಸೇರಿದಂತೆ ಅನೇಕ ಮಠಾಧೀಶರು,ವಿವಿಧ ಧಾರ್ಮಿಕ ಮುಖಂಡರು ಸಹ ಏಮ್ಸ್ ಹೋರಾಟ ವೇದಿಕೆಗೆ ಆಗಮಿಸಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.   

     ಶಾಲಾ , ಕಾಲೇಜು ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳು, ವಿವಿಧ ಸಮಾಜಗಳು ,ನಾಗರೀಕರು ಸೇರಿದಂತೆ ಅನೇಕರು ಹೋರಾಟಕ್ಕೆ ಬೆಂಬಲಿಸಿದ್ದಾರೆ ಜಿಲ್ಲೆ ನೀತಿ ಆಯೋಗದ ಮಹತ್ವಾಕಾಂಕ್ಷೆ ಜಿಲ್ಲೆಗಳ್ಳಲ್ಲಿ ಒಂದಾಗಿದೆ ಡಾ. ನಂಜುಂಡಪ್ಪ ವರದಿಯನ್ವಯ ಅತಿ ಹಿಂದುಳಿದ ಜಿಲ್ಲೆಯ ಪಟ್ಟಿಯಲ್ಲಿದೆ ಈ ಭಾಗದ ಶೈಕ್ಷಣಿಕ, ಆರೋಗ್ಯ, ಸಾಮಾಜಿಕ, ಆರ್ಥಿಕ ಬೆಳವಣಿಗೆಗೆ ಏಮ್ಸ್ ಅತ್ಯಗತ್ಯವಾಗಿ ಬೇಕಾಗಿದೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ಸೂಚಿಸಿರುವ ಜಿಲ್ಲೆಯ ಏಕೈಕ ಹೆಸರಾದ ರಾಯಚೂರನ್ನು ಪರಿಗಣಿಸಿ ಏಮ್ಸ್ ಮಂಜೂರು ಮಾಡಬೇಕೆನ್ನುವುದು ಜಿಲ್ಲೆಯ ನಾಗರಿಕರ ಒತ್ತಾಯವಾಗಿದೆ.                                                                                 
          " ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಮಂಡಿಸುವ ನಿರ್ಮಲಾ ಸೀತಾರಾಮನ್ ಜಿಲ್ಲೆಗೆ ಏಮ್ಸ್ ನೀಡಲೇಬೇಕು ಇದರ  ಬಗ್ಗೆ ಈ ಹಿಂದೆಯೆ ಸಿಎಂ ಸಿದ್ದರಾಮಯ್ಯ ಕೇಂದ್ರ ಆರೋಗ್ಯ ಸಚಿವರಿಗೂ ಮತ್ತು ನಿನ್ನೆ ಹಣಕಾಸು ಸಚಿವರಿಗೆ ಪತ್ರ ಬರೆದಿದ್ದು ನಮ್ಮ ಬೇಡಿಕೆ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ರೂಪುರೇಷೆ ಬಗ್ಗೆ ತೀರ್ಮಾನಿಸುತ್ತೇವೆ."                                     - ಬಸವರಾಜ ಕಳಸ, ಪ್ರಧಾನ ಸಂಚಾಲಕರು, ಏಮ್ಸ್ ಹೋರಾಟ ಸಮಿತಿ, ರಾಯಚೂರು 

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್