ಕೃಷ್ಣ ನದಿಯಿಂದ ಗಣೇಕಲ್ ಏತ ನೀರಾವರಿ ಯೋಜನೆಯ (ಬಂಗಾರಪ್ಪ ಕೆರೆ) ಕಾಮಗಾರಿ ವೀಕ್ಷಣೆ ಮಾಡಿದ ಶಾಸಕ ಬಸನಗೌಡ ದದ್ದಲ್: ಸಿಎಂ-ಡಿಸಿಎಂ ರಿಂದ ಉದ್ಘಾಟನೆಗೆ ಶೀಘ್ರ ದಿನಾಂಕ ನಿಗದಿ

 


ಕೃಷ್ಣ ನದಿಯಿಂದ ಗಣೇಕಲ್ ಏತ ನೀರಾವರಿ ಯೋಜನೆಯ (ಬಂಗಾರಪ್ಪ ಕೆರೆ) ಕಾಮಗಾರಿ ವೀಕ್ಷಣೆ  ಮಾಡಿದ ಶಾಸಕ ಬಸನಗೌಡ ದದ್ದಲ್:                ಸಿಎಂ-ಡಿಸಿಎಂ ರಿಂದ ಉದ್ಘಾಟನೆಗೆ ಶೀಘ್ರ ದಿನಾಂಕ ನಿಗದಿ


ರಾಯಚೂರು,ಜ.29- ಜಿಲ್ಲೆಯ ಬಹುನಿರೀಕ್ಷಿತ ಕುಡಿಯುವ ನೀರು ಹಾಗೂ ರೈತರಿಗೆ ಜಮೀನುಗಳಿಗೆ,ಯೋಜನೆ ಕೃಷ್ಣ ನದಿಯಿಂದ ಬಂಗಾರಪ್ಪ ಕೆರೆಗೆ ನೀರುಣಿಸುವ ಯೋಜನೆಯ ಕಾಮಗಾರಿಯನ್ನು  ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ  ಶಾಸಕ ಶ್ರೀ ಬಸನಗೌಡ ದದ್ದಲ್ ವೀಕ್ಷಿಸಿದರು ನಂತರ  ಮಾತನಾಡಿದ ಶಾಸಕರು ಗಣೇಕಲ್ (ಬಂಗಾರಪ್ಪ ಕೆರೆ) ತುಂಬುವ ಯೋಜನೆಯೂ ಈ ಹಿಂದೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ 211 ಕೋಟಿ ರೂಪಾಯಿ ಮೊತ್ತದ ಕಾಮಗಾರಿ ಟೆಂಡರ್ ಆಗಿತ್ತು, ಈಗ ಕೆಲಸ ಸಂಪೂರ್ಣವಾಗಿ ಮುಗಿಯುವ ಹಂತದಲ್ಲಿದೆ ಶೀಘ್ರದಲ್ಲೇ ಉದ್ಘಾಟನೆ ಗೊಳ್ಳಲಿದೆ ಎಂದರು.

ನನ್ನ ರೈತರು ಮುಖಂಡರುಗಳು ಜನಪ್ರತಿನಿಧಿಗಳು ಪಕ್ಷದ ಮುಖಂಡರುಗಳು ಅಧಿಕಾರಿಗಳು ಬಂಗಾರಪ್ಪ ಕೆರೆಯನ್ನು ಕೃಷ್ಣಾ ನದಿಯವರೆಗೆ ಸಂಪೂರ್ಣವಾಗಿ ವೀಕ್ಷಣೆ ಮಾಡಿಕೊಂಡು ಬರಲಾಗಿದೆ ಇನ್ನು ಸಣ್ಣ ಪುಟ್ಟ ಕೆಲಸಗಳು ಬಾಕಿವೆ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳ ಮೂಲಕ ಇದನ್ನು ಶೀಘ್ರದಲ್ಲೇ ಉದ್ಘಾಟನೆ ಮಾಡಲಾಗುತ್ತದೆ ಎಂದರು.

ರಾಯಚೂರು ಮತ್ತು ಸುತ್ತಮುತ್ತಲಿನ ಗ್ರಾಮಗಳಿಗೆ ಕುಡಿಯುವ ನೀರು ಮತ್ತು ರೈತರಿಗೆ ಅನುಕೂಲವಾಗುವ ರೀತಿಯಲ್ಲಿ  ಈ ಯೋಜನೆಯನ್ನು ಬಳಸಿಕೊಳ್ಳಲಾಗುತ್ತದೆ ಎಂದರು.


ಈ ಹಿಂದೆ ಶಾಸಕರಾಗಿದ್ದ ಸಂದರ್ಭದಲ್ಲಿ ಈ ಕೆಲಸ ಪ್ರಾರಂಭಿಸಲಾಗಿತ್ತು ಈಗ ಎರಡನೇ ಬಾರಿ ನನ್ನನ್ನು ಕ್ಷೇತ್ರದ ಜನರು ಶಾಸಕರನ್ನಾಗಿ ಆಯ್ಕೆ ಮಾಡಿದ್ದಾರೆ ನನ್ನ ಜನರಿಗಾಗಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ ಎಂದರು.

ಪ್ರತಿ ಬಾರಿ ನೀರಾವರಿ ಇಲಾಖೆ ಮುಖ್ಯ ಕಚೇರಿ ಎಂಡಿ ಆಫೀಸ್ ನಲ್ಲಿ ಇದರ ಕುರಿತು ಸಭೆ ಮಾಡಿ ಕಾಮಗಾರಿಯ ಪ್ರಗತಿಯ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿತ್ತು ಎಂದರು.


ನ್ನು ಉಳಿದಂತಹ ಸಣ್ಣಪುಟ್ಟ ಕೆಲಸವನ್ನು ಸಂಪೂರ್ಣಗೊಳಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಮುಖ್ಯಮಂತ್ರಿಗಳನ್ನು ಮತ್ತು ರಾಜ್ಯದ ಉಪಮುಖ್ಯಮಂತ್ರಿಗಳನ್ನು ಭೇಟಿಯಾಗಿ ಉದ್ಘಾಟನೆಯ ದಿನಾಂಕವನ್ನು ನಿಗದಿಪಡಿಸಿ ಶೀಘ್ರದಲ್ಲೇ ಉದ್ಘಾಟಿಸಲಾಗುತ್ತದೆ ಎಂದರು.


ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರ ನೀರಾವರಿಯಿಂದ ವಂಚಿತವಾದಂತಹ ಪ್ರದೇಶ ಹಾಗಾಗಿ ಅಧಿಕಾರಿಗಳು ಕೂಡ ಕೆಳಭಾಗದ ರೈತರಿಗೆ ನೀರು ಒದಗಿಸಲು ಅರ ಸಾಹಸ ಕೊಡಬೇಕಾಗುತ್ತದೆ, ಇಂತಹ ಕೆರೆ ತುಂಬುವ ಯೋಜನೆ  ಮಾಡಿದಾಗ ಮಾತ್ರ ನಮ್ಮ ಭಾಗಕ್ಕೆ ಅನುಕೂಲವಾಗುತ್ತದೆ  ಎಂದರು.



ಈ ಸಂದರ್ಭದಲ್ಲಿ ಎ.ವಸಂತಕುಮಾರ್, ಬಸವರಾಜ ಪಾಟೀಲ ಇಟಗಿ, ರೈತ ಮುಖಂಡರುಗಳು, ಪಕ್ಷದ ಹಿರಿಯ ಮುಖಂಡರುಗಳು ವಿವಿಧ ಘಟಕಗಳ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರುಗಳು , ನೀರಾವರಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ