ಮಧ್ಯಂತರ ಬಜೆಟ್ ನಲ್ಲಿ ರಾಯಚೂರಿಗೆ ಏಮ್ಸ್ ಘೋಷಿಸಲು ಹಣಕಾಸು ಸಚಿವರಿಗೆ ಸಂಸದ ರಾಜಾ ಅಮರೇಶ್ವರ ನಾಯಕ ಪತ್ರ
ಮಧ್ಯಂತರ ಬಜೆಟ್ ನಲ್ಲಿ ರಾಯಚೂರಿಗೆ ಏಮ್ಸ್ ಘೋಷಿಸಲು ಹಣಕಾಸು ಸಚಿವರಿಗೆ ಸಂಸದ ರಾಜಾ ಅಮರೇಶ್ವರ ನಾಯಕ ಪತ್ರ
ರಾಯಚೂರು,ಜ.31- ಲೋಕಸಭಾ ಸದಸ್ಯರಾದ ರಾಜಾ ಅಮರೇಶ್ವರ ನಾಯಕ್ ರವರು ಜ. 19 ರಂದು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ರವರಿಗೆ ರಾಯಚೂರಿಗೆ ಏಮ್ಸ್ ಮಂಜೂರು ಮಾಡಲು ವಿನಂತಿಸಿ ಪತ್ರ ಬರೆದಿದ್ದಾರೆ. ಈ ಕುರಿತು ಅವರು ತಮ್ಮ ಸುಧೀರ್ಘ ಪತ್ರದಲ್ಲಿ ತಾವು ಸಂಸದರಾಗಿ ಆಯ್ಕೆಯಾದ ನಂತರ ನಿರಂತರವಾಗಿ 2019 ರಿಂದ ಸನ್ಮಾನ್ಯ ಪ್ರಧಾನ ಮಂತ್ರಿಗಳವರಿಗೆ , ಶ್ರೀ ಮನಸುಕ್ ಮಾoಡವಿಯಾ ಮಾನ್ಯ ಕೇಂದ್ರ ಆರೋಗ್ಯ ಸಚಿವರಿಗೆ ಹಾಗೂ ಕರ್ನಾಟಕ ಸರ್ಕಾರದಿಂದ ಪ್ರಸ್ತಾವನೆಯನ್ನು ಕಳಿಸಲು ಸನ್ಮಾನ್ಯ ಮುಖ್ಯಮಂತ್ರಿಗಳವರಿಗೆ ಸುಮಾರು ಮೂರು ಸಾರಿ ಹಾಗೂ ಪಾರ್ಲಿಮೆಂಟಿನಲ್ಲಿ ಪ್ರಶ್ನೋತ್ತರಗಳ ವೇಳೆ ರೂಲ್ 377ರ ಅಡಿಯಲ್ಲಿ ರಾಯಚೂರಿಗೆ ಏಮ್ಸ್ ಮಂಜೂರು ಮಾಡಲು ವಿನಂತಿಸಲಾಗಿದೆ. ರಾಯಚೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ಜನಾಂಗದವರು ವಾಸಿಸುತಿದ್ದು ಇವರುಗಳು ತಮ್ಮ ದೈನಂದಿನ ಜೀವನ ಸಾಗಿಸಲು ಕಷ್ಟಪಡುವ ಇವರುಗಳು ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಹಾಗೂ ಉತ್ತಮ ಆರೋಗ್ಯ ನೀಡಲು ವಿಫಲರಾಗಿದ್ದಾರೆ. ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳು ಕರ್ನಾಟಕದಲ್ಲಿಯೇ ಅತ್ಯಂತ ಹಿಂದುಳಿದ ಜಿಲ್ಲೆಗಳಾಗಿದ್ದು ಇವು ಕೇಂದ್ರ ಸರ್ಕಾರದ 371ನೇ ವಿದಿ ಅಡಿಯಲ್ಲಿ ಬರುತ್ತಿದ್ದು ಹಾಗೂ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಜಿಲ್ಲೆಗಳಡಿ ಆಯ್ಕೆಯಾಗಿರುತ್ತವೆ. ಈ ಭಾಗದ ಜನರು ತುರ್ತು ಹಾಗೂ ಉನ್ನತ ಆರೋಗ್ಯ ಸೇವೆಗಾಗಿ ದೂರದ ಬೆಂಗಳೂರು ಮುಂಬೈ ಹಾಗೂ ಹೈದರಾಬಾದ್ ಪ್ರದೇಶಗಳಿಗೆ ಹೋಗಬೇಕಾಗಿರುತ್ತದೆ. ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಶೇಕಡaವಾರು56 ರಿಂದ 73%ಹೆಣ್ಣು ಮಕ್ಕಳು ಮತ್ತು ಚಿಕ್ಕಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದು , ಈ ಭಾಗದಲ್ಲಿ ಏಮ್ಸ್ ಸ್ಥಾಪನೆಯಿಂದ ಉತ್ತಮ ಆರೋಗ್ಯ ಸೌಲಭ್ಯ ಸಿಗುವುದಲ್ಲದೆ, ಅನೇಕ ಯುವಕರಿಗೆ ಉದ್ಯೋಗ ಅವಕಾಶಗಳು ದೊರೆಯುತ್ತವೆ. 2002ರ ಡಾಕ್ಟರ್ ಡಿ ಎಂ ನಂಜುಂಡಪ್ಪ ಅಧ್ಯಕ್ಷತೆಯ ಪ್ರಾದೇಶಿಕ ಅಸಮತೋಲನ ನಿವಾರಣೆ ವರದಿಯ ಅಡಿಯಲ್ಲಿ ಗುಲ್ಬರ್ಗಕ್ಕೆ ವಿಶ್ವವಿದ್ಯಾಲಯ ಮಂಜೂರಾಗಿದ್ದು ಆದರೆ ಐಐಟಿ ರಾಯಚೂರಿನಲ್ಲಿ ಸ್ಥಾಪನೆ ಆಗಬೇಕಾಗಿದ್ದು ಕೈತಪ್ಪಿ ಧಾರವಾಡಕ್ಕೆ ಹೋಗಿರುತ್ತದೆ.
ರಾಯಚೂರಿಗೆ ಏಮ್ಸ್ ತಪ್ಪದೇ ಸ್ಥಾಪನೆ ಮಾಡಬೇಕೆಂದು ಸುಮಾರು 625 ದಿನಗಳ ಮೇಲ್ಪಟ್ಟು ನಿರಂತರವಾಗಿ ಏಮ್ಸ್ ಹೋರಾಟ ಸಮಿತಿಯು ಹೋರಾಟ ನಡೆಸುತ್ತಿದೆ. ಈ ಭಾಗದ ಸಾರ್ವಜನಿಕ ಬೇಡಿಕೆಯಂತೆ ಸರ್ಕಾರದಿಂದ ರಾಯಚೂರಿನಲ್ಲಿಯೇ ಏಮ್ಸ್ ಸ್ಥಾಪನೆ ಮಾಡಲು ರಾಯಚೂರು ಹೆಸರನ್ನು ಮಾತ್ರ ಪ್ರಸ್ತಾಪಿಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲಾಗಿದ್ದು ಹಾಗೂ ಇದಕ್ಕಾಗಿ ಬೇಕಾಗುವ ಮೂಲ ಸೌಕರ್ಯಗಳಾದ ಜಮೀನು, ನೀರು , ವಿದ್ಯುತ್ ಸೌಲಭ್ಯ ನೀಡುವುದಾಗಿ ಸರ್ಕಾರ ಭರವಸೆ ಪತ್ರ ನೀಡಲಾಗಿರುತ್ತದೆ. ಅದ್ದರಿಂದ ಈ ಎಲ್ಲಾ ಮೇಲಿನ ಅಂಶಗಳನ್ನು ತಾವು ಪರಿಗಣಿಸಿ 2024ರ ಮಧ್ಯಂತರ ಬಜೆಟ್ ನಲ್ಲಿ ತಪ್ಪದೇ ರಾಯಚೂರಿಗೆ ಏಮ್ಸ್ ಘೋಷಣೆ ಮಾಡಬೇಕೆoದು ಮಾನ್ಯ ಸಂಸದರು ಕೋರಿಕೊಂಡಿರುತ್ತಾರೆ.
Comments
Post a Comment