ಮೋದಿ ಹೆಸರಿನಿಂದ ಓಟು ಬರುತ್ತಿರುವುದರಿಂದ ಕಾಂಗ್ರೆಸ್ ಗೆ ಆತಂಕ: ಸಿದ್ದು, ಡಿಕೆಶಿಗೆ ರಾಮ, ಹನುಮ, ಕೇಸರಿ ಕಂಡರೆ ಭಯವೇಕೆ- ಈಶ್ವರಪ್ಪ.

                                           

ಮೋದಿ ಹೆಸರಿನಿಂದ ಓಟು ಬರುತ್ತಿರುವುದರಿಂದ ಕಾಂಗ್ರೆಸ್ ಗೆ ಆತಂಕ:                                                ಸಿದ್ದು, ಡಿಕೆಶಿಗೆ ರಾಮ, ಹನುಮ, ಕೇಸರಿ ಕಂಡರೆ ಭಯವೇಕೆ- ಈಶ್ವರಪ್ಪ.         
                  ರಾಯಚೂರು,ಜ.31- ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ್ ಗೆ ರಾಮ, ಹನುಮ ಮತ್ತು ಕೇಸರಿ ಕಂಡರೆ ಅಷ್ಟೊಂದು ಭಯವೇಕೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದರು .                                      ಅವರಿಂದು ನಗರದಲ್ಲಿ ಸುದ್ಜಿಗಾರರೊಂದಿಗೆ ಮಾತನಾಡಿ ಮಂಡ್ಯ ಜಿಲ್ಲೆಯ ಕೆರೆಗೋಡು ಧ್ವಜ ಸ್ತಂಭ ವಿವಾದ ಕುರಿತು ಕಾಂಗ್ರೆಸ್ ಕ್ಷುಲ್ಲಕ ರಾಜಕಾರಣ ಮಾಡುತ್ತಿದೆ  ಕೆರೆಗೋಡು
ಗ್ರಾ.ಪಂ ಸಭೆಯಲ್ಲಿ ಹನುಮ ಧ್ವಜ   ಹಾರಿಸಲು ನಿರ್ಣಯ ಕೈಗೊಳ್ಳಲಾಗಿದೆ ಈಗ ನಡಾವಳಿ ಪುಸ್ತಕವೇ ನಾಪತ್ತೆಯಾಗಿದೆ ಎಂದರು.                                                       ಅಯೋಧ್ಯೆ ಶ್ರೀ ರಾಮಮಂದಿರ ಬಗ್ಗೆ ಹಗುರವಾಗಿ ಮಾತನಾಡಿ  ಕಾಂಗ್ರೆಸ್ ಮೂರು ರಾಜ್ಯಗಳಲ್ಲಿ ನೆಲೆ ಕಳೆದುಕೊಂಡಿದೆ ಮುಂದಿನ ದಿನಗಳಲ್ಲಿ ದೇಶದಲ್ಲೂ ನೆಲಕ್ಕಚ್ಚುತ್ತದೆ ಎಂದರು. ಕಾಶಿ ವಿಶ್ವನಾಥ ಮಂದಿರದ ಮೇಲೆ ಮಸೀದಿ ಕಟ್ಟಿರುವ ಬಗ್ಗೆ ಪುರಾತತ್ವ ಇಲಾಖೆ ವರದಿ ಅನ್ವಯ ಜಿಲ್ಲಾ ನ್ಯಾಯಾಲಯ ಹಿಂದೂಗಳು ಪೂಜೆ ಮಾಡಲು ಅನುಮತಿಸಿ ತೀರ್ಪು ನೀಡಿದ್ದು ಸ್ವಾಗತಾರ್ಹವೆಂದ ಅವರು ಇನ್ನಾದರೂ ಇತಿಹಾಸ ತಿರುಚುವ ಕಾರ್ಯ ನಿಲ್ಲಬೇಕು ಎಂದರು. ಇಂದಿರಾ ಎಂದರೆ ಕಾಂಗ್ರೆಸ್ ಎಂದು ಹೇಳಿದ ಕಾಂಗ್ರೆಸ್ ಇದೀಗ ಮೋದಿ ಬಗ್ಗೆ ವ್ಯಕ್ತಿ ಪೂಜೆ ನಿಲ್ಲಬೇಕೆಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಹೇಳುತ್ತಿದ್ದಾರೆ. ಇದಕ್ಕೆ ಕಾರಣ ಮೋದಿ ಹೆಸರಿಂದ ದೇಶದಲ್ಲಿ ಬಿಜೆಪಿಗೆ ಓಟು ಬೀಳುತ್ತಿರುವುದರಿಂದ ಕಾಂಗ್ರೆಸ್ ಗೆ ಭಯ ಶುರುವಾಗಿದೆ ಎಂದರು.
 ಮಾತೆತ್ತಿದರೆ ಅಲ್ಪಸಂಖ್ಯಾತರ ಬಗ್ಗೆ ಮಾತನಾಡುವ ಕಾಂಗ್ರೆಸ್ ಅವರ ಏಳಿಗೆಗೆ ಏನು ಮಾಡಿದೆ ಎಂದು ಪ್ರಶ್ನಿಸಿದರು. ಮಾಗಡಿ ಶಾಸಕ ಬಾಲಕೃಷ್ಣ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಬೆಂಬಲಿಸದಿದ್ದರೆ ಗ್ಯಾರಂಟಿ ಬಂದಾಗುತ್ತದೆ ಎಂದು ಹೇಳಿದ್ದನ್ನು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅದು ಅವರ ವೈಯಕ್ತಿಕ ಅಭಿಪ್ರಾಯವೆಂದು ಜಾರಿಕೊಂಡಿದ್ದಾರೆ ಅದೇ ರೀತಿ ಶಾಮನೂರು ಶಿವಶಂಕರಪ್ಪ ಇನ್ನಿತರರು ಹೇಳಿದಾಗಲೂ ಹೀಗೆ ಹೇಳಿದ್ದರು ಅವರ ಆಡಳಿತ ಹಳಿ ತಪ್ಪಿದೆ ಎಂದರು.   

 ಕಾಂಗ್ರೆಸ್ ಪಕ್ಷದ ಮುಖಂಡರ ಮನೆಗಳಲ್ಲಿಯೂ ಮೋದಿಗೆ ಓಟು ಬೀಳುವುದು ಎಂದು ಅವರು ಕಾಂಗ್ರೆಸ್ಸಿಗರಿಗೆ ಉದ್ಯೋಗವಿಲ್ಲ ವೆಂದರು. ಸ್ವಾಮಿಗಳು ಲೋಕಸಭಾ ಚುನಾವಣೆಗೆ ನಿಲ್ಲಬಾರದು ಎಂದು ನಾನು ಹೇಳುವುದಿಲ್ಲ ಟಿಕೆಟ್ ಬಗ್ಗೆ ಕೇಂದ್ರ ಚುನಾವಣಾ ಸಮಿತಿ ತೀರ್ಮಾನಿಸಲಿದೆ ಎಂದರು. ಸಿರವಾರ ಪಟ್ಟಣದಲ್ಲಿ ಟಿಪ್ಪು ಭಾವಚಿತ್ರಕ್ಕೆ ಅವಮಾನ ಪ್ರಕರಣದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ,ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯಿಸಬೇಕು ನಾನು ಹೇಳುವುದು ಏನಿದೆ ಎಂದು ಅವರು ಅನೇಕ ಕಡೆಗಳಲ್ಲಿ ಹಿಂದೂಗಳ ಭಾವನೆಗೂ ಧಕ್ಕೆಯಾಗಿದೆ ಯಾರೆ ತಪ್ಪು ಮಾಡಿದರು ತಪ್ಪು ತಪ್ಪೆ ಎಂದರು. ಶಿವಮೊಗ್ಗದಲ್ಲಿ ಕೋಮು ಗಲಭೆ ಪ್ರಚೋದನೆ ಮಾಡಲು ದೊಡ್ಡ ಖಡ್ಗ ಹಾಕಲಾಗಿತ್ತು ಅದರ ಬಗ್ಗೆ ಮಾಧ್ಯಮದವರು ಕೇಳಿದಾಗ ಅದೊಂದು ಸಣ್ಣ ಘಟನೆಯೊಂದು ನುಣುಚಿಕೊಂಡಿದ್ದರು ಎಂದರು. ನನಗೆ ಪಕ್ಷ ಡಿಸಿಎಂ ಸ್ಥಾನ ಮಾನ ನೀಡಿದೆ   ಅಟಲ್ ಬಿಹಾರಿ ವಾಜಪೇಯಿಯವರು ತಮ್ಮ‌ಭಾಷಣದಲ್ಲಿ ಹೇಳಿದ್ದರು ನನ್ನ ಪ್ರಧಾನಿ ಹುದ್ದೆ ಹೋಗಬಹುದು ಆದರೆ ನನ್ನ ಕಾರ್ಯಕರ್ತ ಸ್ಥಾನ ಶಾಶ್ವತವಾಗಿರುತ್ತದೆ ಎಂದು ಅವರೆ ನನ್ನ ಆದರ್ಶ  ಎಂದರು.
 ಈ ಸಂದರ್ಭದಲ್ಲಿ ಮುಖಂಡರಾದ ಗಿರೀಶ್ ಕನಕವೀಡು, ಬಂಡೇಶ ವಲ್ಕಂದಿನ್ನಿ, ರಾಮಚಂದ್ರ ಕಡಗೋಲ್ ಇನ್ನಿತರರು ಇದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್