ಶೀಘ್ರದಲ್ಲೆ ಜಿಲ್ಲಾ ಕಾಂಗ್ರೆಸ್ ಗೆ ನೂತನ ಸಾರಥಿ: ಬಿ.ವೈ.ವಿಜಯೇಂದ್ರ ಬುದ್ಧಿ ಹೀನ ರಾಜ್ಯಾಧ್ಯಕ್ಷ -ವಸಂತ ಕುಮಾರ್.
ಶೀಘ್ರದಲ್ಲೆ ಜಿಲ್ಲಾ ಕಾಂಗ್ರೆಸ್ ಗೆ ನೂತನ ಸಾರಥಿ: ಬಿ.ವೈ.ವಿಜಯೇಂದ್ರ ಬುದ್ಧಿ ಹೀನ ರಾಜ್ಯಾಧ್ಯಕ್ಷ -ವಸಂತ ಕುಮಾರ್. ರಾಯಚೂರು,ಜ.30- ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳ ಬಗ್ಗೆ ಸುಳ್ಳು ಮಾಹಿತಿ ನೀಡಿದ ಬಿ.ವೈ.ವಿಜಯೇಂದ್ರ ಬುದ್ಧಿ ಹೀನ ರಾಜ್ಯಾಧ್ಯಕ್ಷರೆಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ವಸಂತಕುಮಾರ್ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ರಾಜ್ಯ ಸರ್ಕಾರದ 5 ಗ್ಯಾರಂಟಿಗಳ ಜಿಲ್ಲಾ ಮಟ್ಟದ ಅಂಕಿ ಅಂಶಗಳ ಮಾಹಿತಿನೀಡಿ ಮಾತನಾಡಿ ಇತ್ತೀಚೆಗೆ ನಗರಕ್ಕೆ ಆಗಮಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಜನರಿಗೆ ಸರ್ಕಾರದ ಬಗ್ಗೆ ತಪ್ಪು ಮಾಹಿತಿ ನೀಡಿ ಗೊಂದಲ ಮತ್ತು ಕ್ಷುಲ್ಲಕ ರಾಜಕೀಯ ಮಾಡುತ್ತಿದ್ದಾರೆಂದ ಅವರು ಐದು ಗ್ಯಾರಂಟಿಗಳ ಜಿಲ್ಲಾ ಮಟ್ಟದ ಅಂಕಿ ಅಂಶಗಳನ್ನು ತಾಲೂಕು ವಾರು ಸಾಧನೆ ಬಿಡಿಸಿಟ್ಟರು.
ಬಿ.ವೈ.ವಿಜಯೇಂದ್ರ ತಮ್ಮ ಕಾರಿನ ಚಾಲಕರಿಗೆ,ಮನೆಯ ಭಧ್ರತಾ ಸಿಬ್ಬಂದಿಗಳಿಗೆ , ಪಕ್ಷದ ಬಡ ಕಾರ್ಯಕರ್ತರಿಗೆ ಕೇಳಿ ತಿಳಿದುಕೊಂಡರೆ ಗ್ಯಾರಂಟಿ ಜಾರಿ ಬಗ್ಗೆ ವಾಸ್ತವಾಂಶ ತಿಳಿಯುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು. ಶಕ್ತಿ , ಗೃಹ ಜ್ಯೋತಿ, ಗೃಹ ಲಕ್ಷ್ಮೀ, ಅನ್ನ ಭಾಗ್ಯ ಉತ್ತಮ ಪ್ರಗತಿಕಂಡಿವೆ ಕಳೆದು ತಿಂಗಳು ಜಾರಿಗೆ ಬಂದ ಯುವ ನಿಧಿ ಕೊಂಚ ನ್ಯೂನ್ಯತೆಯಿಂದ ಕೂಡಿದೆ ಸರ್ಕಾರ ಅದನ್ನು ಪರಿಶೀಲಿಸಿ ಸರಿಪಡಿಸಿ ಅರ್ಹ ನಿರುದ್ಯೋಗಿಗಳಿಗೆ ಧನ ಸಹಾಯ ನೀಡಲಿದೆ ಎಂದರು. ಮೋದಿಯವರ 10 ವರ್ಷದ ಸಾಧನೆ ಶೂನ್ಯವಾಗಿದೆ ಕೇವಲ ಮತೀಯ ಭಾವನೆ ಕೆರಳಿಸಿ ಜಾತಿ ಧರ್ಮಗಳನ್ನು ರಾಜಕಾರಣದಲ್ಲಿ ಎಳೆದು ತಂದು ಜನರನ್ನು ತಪ್ಪು ದಾರಿಗೆಳೆಯುತ್ತಿದೆ ಎಂದು ಆರೋಪಿಸಿದರು. ಜಿಲ್ಲಾ ಕಾಂಗ್ರೆಸ್ ನಲ್ಲಿ ಭಿನ್ನ ವಿಚಾರಗಳು ಇರಬಹುದೆ ವಿನ: ಭಿನ್ನಮತ, ಪ್ರತ್ಯೇಕ ಬಣಗಳಿಲ್ಲ ಎಲ್ಲರು ಒಗ್ಗಟ್ಟಾಗಿ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಕಾರ್ಯ ಮಾಡುತ್ತೇವೆ ಎಂದ ಅವರು ಶೀಘ್ರದಲ್ಲೇ ಜಿಲ್ಲಾ ಕಾಂಗ್ರೆಸ್ ಗೆ ಹೊಸ ಅಧ್ಯಕ್ಷರು ನೇಮಕವಾಗಲಿದ್ದಾರೆ ಎಂದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಬಸವರಾಜ ಪಾಟೀಲ ಇಟಗಿ, ಅಬ್ದುಲ್ ಕರೀಂ,ಎಂ.ಕೆ ಬಾಬರ್,ಅಸ್ಲಾಂ ಪಾಶಾ ,ರಜಾಕ್ ಉಸ್ತಾದ್,ಈಶಪ್ಪ, ಡಿ.ಕೆ.ಮುರಳಿಯಾದವ ,ವಿ.ಲಕ್ಷ್ಮಿ ರೆಡ್ಡಿ ಇದ್ದರು.
Comments
Post a Comment