ಧರ್ಮಾಚರಣೆಯಿಂದ ನುಣಿಚಿಕೊಳ್ಳಬೇಡಿ-ಶ್ರೀ ಸತ್ಯಾತ್ಮತೀರ್ಥ ಶ್ರೀ ಪಾದಂಗಳವರು.

 


ಧರ್ಮಾಚರಣೆಯಿಂದ ನುಣಿಚಿಕೊಳ್ಳಬೇಡಿ-ಶ್ರೀ ಸತ್ಯಾತ್ಮತೀರ್ಥ ಶ್ರೀ ಪಾದಂಗಳವರು.  ರಾಯಚೂರು,ಜ.29- ಧರ್ಮಾಚರಣೆಯಿಂದ ನುಣಿಚಿಕೊಳ್ಳಬೇಡಿ ಎಂದು  ಶ್ರೀ ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥ ಶ್ರೀ ಪಾದಂಗಳವರು ನುಡಿದರು.                 ಅವರಿಂದು ನಗರದ ಕೋಟೆಯ ಶ್ರೀ ಮುಂಗ್ಲಿ ಪ್ರಾಣದೇವರ ದೇವಸ್ಥಾನದಲ್ಲಿ ಶ್ರೀ ಗೋಪಾಲದಾಸರ, ಶ್ರೀ ಪುರಂದರ ದಾಸರ ಹಾಗೂ ಶ್ರೀ ಮಧ್ವ ನವರಾತ್ರಿ ಉತ್ಸವ ಅಂಗವಾಗಿ ನಡೆದ ಜ್ಞಾನಸತ್ರ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.   

                              ಸಂಧ್ಯಾವಂದನೆ,  ದೇವರ ಪೂಜೆ  ಮಾಡುವುದು ಕರ್ತವ್ಯ ದೀಕ್ಷೆ ಬಗ್ಗೆ ನಮ್ಮ ಸಂಕಲ್ಪ ವಿರಬೇಕು ಮಂತ್ರ ಪಠಿಸಿ ಭಗವಂತನಲ್ಲಿ ಜ್ಞಾನ ಭಕ್ತಿ ವೈರಾಗ್ಯ ಕರುಣಿಸೆಂದು ಕೋರಬೇಕು ಕಾಮ್ಯ ಕರ್ಮ ಬಿಡಬೇಕು ನಿಷ್ಕಾಮ ಭಕ್ತಿ ಬೇಕೆಂದರು.      ಮೋಕ್ಷ ಸಾಧನೆಗೆ ಏನು ಬೇಕು ಅದನ್ನು ಮಾಡಬೇಕೆಂದರು. ಅನ್ಯರಿಗೆ ಕೆಡಕಾಗಲಿ , ಮುಖಭಂಗವಾಗಲಿ ಎಂದು ದೇವರನ್ನು ಪೂಜಿಸಿದರೆ ಅದು ಸಫಲವಾಗುವುದಿಲ್ಲ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದರು.                      ಶ್ರೀ ಮಧ್ವಾಚಾರ್ಯರ ಆದರ್ಶ ಪಾಲಿಸೋಣ ದಿನದಿಂದ ದಿನಕ್ಕೆ ನಮ್ಮಲ್ಲಿ ಪರಿವರ್ತನೆಯಾಗಬೇಕೆಂದರು.                ದಾಸರು ದಕ್ಷಿಣೆಯ ದಾಕ್ಷಿಣ್ಯಕ್ಕೆ ಬೀಳದೆ  ಅಧರ್ಮಿಗಳನ್ನು ಜರೆದು ಸತ್ಯ ಧರ್ಮ ಪಾಲಿಸುವವರನ್ನು ಅನುಗ್ರಹಿಸಿದರು ಎಂದರು. ಆಯೋಜಕರು ಮತ್ತು ದೇವಸ್ಥಾನ ಸಮಿತಿಯಿಂದ ಶ್ರೀ ಪಾದಂಗಳವರಿಗೆ ಭಕ್ತಿ ಪೂರ್ವಕ ಗೌರವ ಸಲ್ಲಿಸಲಾಯಿತು. ಸಕಲರಿಗೂ ಫಲ ಮಂತ್ರಾಕ್ಷತೆಯನ್ನು ಶ್ರೀ ಪಾದಂಗಳವರು ವಿತರಿಸಿದರು. 

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ