ಕಲ್ಯಾಣ- ಕರ್ನಾಟಕದಲ್ಲಿ ಕೌಶಲ್ಯ ಹೊಂದಿದ ಪ್ಯಾರಾಮೆಡಿಕಲ್ ವೃತ್ತಿಪರ ಸೇವೆ ಶ್ಲಾಘನೀಯ – ಜಿ.ಕುಮಾರ ನಾಯಕ
ಕಲ್ಯಾಣ- ಕರ್ನಾಟಕದಲ್ಲಿ ಕೌಶಲ್ಯ ಹೊಂದಿದ ಪ್ಯಾರಾಮೆಡಿಕಲ್ ವೃತ್ತಿಪರ ಸೇವೆ ಶ್ಲಾಘನೀಯ – ಜಿ.ಕುಮಾರ ನಾಯಕ
ರಾಯಚೂರು,ಜ .28- ಕಲ್ಯಾಣ ಕರ್ನಾಟಕದ ರಾಯಚೂರು ಜಿಲ್ಲೆಯ ಯುವಕ-ಯುವತಿಯರಿಗೆ ಪ್ಯಾರಾಮೆಡಿಕಲ್ ಶಿಕ್ಷಣವನ್ನು ಕೌಶಲ್ಯದೊಂದಿಗೆ ನೀಡಿ ಅವರಿಗೆ ಸ್ವಾವಲಂಬಿ ಬದುಕು ನೀಡುತ್ತಿರುವ ಎಸ್.ಕೆ.ಇ.ಎಸ್. ಪ್ಯಾರಾಮೆಡಿಕಲ್ ಕಾಲೇಜಿನ ಕಾರ್ಯ ಅತ್ಯಂತ ಶ್ಲಾಘನೀಯ ಹಾಗೂ ತೃಪ್ತಿ ತಂದಿದೆ ಎಂದು ಹಿರಿಯ ಐಎಎಸ್ ಅಧಿಕಾರಿ ಹಾಗೂ ನಿವೃತ್ತ ಅಪರ ಪ್ರದಾನ ಕಾರ್ಯದರ್ಶಿ ಕರ್ನಾಟಕ ಸರಕಾರದ ಜಿ.ಕುಮಾರ ನಾಯಕ ಹೇಳಿದರು.
ಪಂ.ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಎಸ್‌ಕೆ ಇ ಪ್ಯಾರಾಮೆಡಿಕಲ್ ಕಾಲೇಜಿನ ೧೭ನೇ ವರ್ಷಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದು ರಾಯಚೂರು ಭೌತಿಕ ಬದಲಾಗಿದೆ ಆದರೆ, ಶಿಕ್ಷಣ, ಆರೋಗ್ಯ, ಬಡ-ಜನರ, ರೈತರ, ಕೂಲಿ ಕಾರ್ಮಿಕರ ಯುವಕರಿಗೆ ಹೊಸ-ಹೊಸ ಯೋಜನೆ ಪ್ರಯತ್ನದ ಮುಖಂತರ ನಾವು ಮುಂದೆ ಬರಬೇಕಾಗಿದೆ, ಕೇರಳ ಹೇಗೆ ನರ್ಸಿಂಗ್ ಕ್ಷೇತ್ರದಲ್ಲಿ ಶ್ರೇಷ್ಠವಾಗಿದೆಯೋ ಹಾಗೆ ರಾಯಚೂರು ಜಿಲ್ಲೆ ಕರ್ನಾಟಕದಲ್ಲಿ ಪ್ಯಾರಾಮೆಡಿಕಲ್ ಹೆಸರು ಮಾಡಲಿ ಎಂದು ಶುಭ ಹಾರೈಸಿದರು.
ತಾವು ೨೫ ವರ್ಷ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸದಾಗಿನಿಂದ ಸತತ ಪ್ರಯತ್ನದಿಂದ ರಾಯಚೂರು ಜಿಲ್ಲೆಗೆ ಅಭಿವೃದ್ಧಿಗೆ ಶ್ರಮಿಸಿದ್ದೇನೆ, ಸದ್ಯ ನಿವೃತ್ತಿಯಾದರೂ ಕೂಡ ಜಿಲ್ಲೆಯ ಜನರ ಪ್ರೀತಿ, ಅಭಿಮಾನ ಹಾಗೂ ಪ್ರೋತ್ಸಾಹಕ್ಕೆ ಚಿರಋಣಿಯಾಗಿ, ಮುಂದಿನ ದಿನಗಳ ರಾಯಚೂರು ಜಿಲ್ಲೆ ದೇಶದಲ್ಲಿ ಶ್ರೇಷ್ಠ ಜಿಲ್ಲೆಯಾಗುವ ದಿಶೆಯಲ್ಲಿ ಕಾರ್ಯಪ್ರವೃತ್ತರಾಗಿವುದಾಗಿ ಹೇಳಿದರು.
ಏಮ್ಸ್ ಹೋರಾಟ ಸಮಿತಿ ಅಧ್ಯಕ್ಷ ಡಾ.ಬಸವರಾಜ ಕಳಸ ಮಾತನಾಡಿ, ರಾಯಚೂರಿನಲ್ಲಿ ಅನೇಕ ಸಾಂಕ್ರಾಮಿಕ ರೋಗಗಳಿಂದ ಬಡವರು ಚಿಕಿತ್ಸೆ ಪಡೆಯಲು ಆಗುತ್ತಿಲ್ಲ. ಖಾಸಗಿ ಆಸ್ಪತ್ರೆಗಳ ಸುಲಿಗೆಯಿಂದಾಗಿ ಬಡವರು ಸೂಪರ್ ಸ್ಪೆಷಾಲಿಟಿ ಸೌಲಭ್ಯ ಪಡೆಯಲಾಗುತ್ತಿಲ್ಲ. ಇಂತಹ ಸಮಸ್ಯೆಗಳ ನಿವಾರಣೆಗಾಗಿ ಏಮ್ಸ್ ಮಂಜೂರು ಮಾಡಿದರೆ ಬಡವರಿಗೆ ಗುಣಮಟ್ಟದ ಚಿಕಿತ್ಸೆ ದೊರೆಯಲು ಅನುಕೂಲ ಆಗುತ್ತದೆ ಎಂದು ಅಭಿಪ್ರಾಯ ಪಟ್ಟರು.
ಜಿಲ್ಲೆಯಲ್ಲಿ ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಅಭಿವೃದ್ಧಿ ಕೆಲಸ ನಡೆಯುತ್ತಿಲ್ಲ. ಇಲ್ಲೇನಾದರೂ ಅಭಿವೃದ್ಧಿಯಾಗಿದ್ದರೆ ಅಧಿ ಕಾರಿಗಳ ಇಚ್ಛಾಶಕ್ತಿಯೇ ಪ್ರಮುಖ ಕಾರಣವಾಗಿದೆ ಎಂದು ಅಭಿಪ್ರಾಯ ಪಟ್ಟ ಅವರು, ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಮುಂದಾಗಿರುವೆ ನರ್ಸಿಂಗ್ ವಿದ್ಯಾರ್ಥಿಗಳು ಅಂತಃಕರಣದಿAದ ಸೇವೆ ಸಲ್ಲಿಸಲು ಸಲಹೆ ನೀಡಿದರು.
ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಬಾಬುಮಾತನಾಡಿದರು. ಆರ್.ಎಸ್.ಹಿರೇಮಠ ಸ್ವಾಗತಿಸಿದರು. ಇದೇ ವೇಳೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ಹಾಗೂ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಪ್ರಾಸ್ತವನೆಯನ್ನು ಪ್ರೋ. ಚಂದ್ರಶೇಖರ್, ನಿರೂಪಣೆ ಶ್ರೀಮತಿ ರಶ್ಮಿ ನಾಗೋಲಿ, ವಂದನಾರ್ಪಣೆ ಶ್ರೀಮತಿ ಸ್ವಪ್ನ, ಸ್ವಾಗತ ಭಾಷಣ ಶ್ರೀ ರೇವಯ್ಯ ಹಿರೇಮಠ, ಸ್ವಾಗತ ಶ್ರೀ ಬಾಬುರಾವ್ ಎಂ. ಶೇಗುಣಸಿ ನಡೆಸಿಕೊಟ್ಟರು.
ಈ ಕಾರ್ಯಕ್ರಮದಲ್ಲಿ ಶ್ರೀಕಾಂತ ದಾಸ್ ಗುಜ್ಜಾರ್, ಪತ್ರಕರ್ತರಾದ ವೆಂಕಟ್‌ಸಿಂಗ್, ಸತ್ಯನಾರಾಯಣ, ವೀರೇಶ್, ಮಲ್ಲಕಾರ್ಜುನಸ್ವಾಮಿ, ಸಿಬ್ಬಂದಿಗಳಾದ ಮಂಜುನಾಥ ಎಂ, ಲಾಲುಪ್ರಸಾದ್, ಜಗದೇವಪ್ಪ, ಸುರೇಶ ಸಿರೇಕಿ, ನಾಗರಾಜ, ಪಂಪಾಪತಿ ಅನ್ವರಿ, ಮಂಜುಳಾ, ರತ್ನಮ್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Comments
Post a Comment