ಕಾಡ್ಲೂರಲ್ಲಿ ಅಕ್ರಮ ಮರಳುಗಾರಿಕೆ: ನದಿಯಿಂದ ಮರಳು ಬಗೆದು ಶೇಖರಣೆ.
ಕಾಡ್ಲೂರಲ್ಲಿ ಅಕ್ರಮ ಮರಳುಗಾರಿಕೆ: ನದಿಯಿಂದ ಮರಳು ಬಗೆದು ಶೇಖರಣೆ. ರಾಯಚೂರು,ಜ.30-ತಾಲೂಕಿನ ಕಾಡ್ಲೂರು ಗ್ರಾಮದ ಕೃಷ್ಣಾ ನದಿ ತೀರದಲ್ಲಿ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೆ ಸಾಗುತ್ತಿದೆ .
ನದಿ ತೀರದ ಐತಿಹಾಸಿಕ ಪ್ರಸಿದ್ಧ ಶ್ರೀ ವನವಾಸಿ ರಾಮದೇವರ ಹಾಗೂ ಶ್ರೀ ಉಪೇಂದ್ರ ತೀರ್ಥ ಕರಾರ್ಚಿತ ಪ್ರಾಣದೇವರ ದೇವಸ್ಥಾನ ಸಮೀಪದಲ್ಲೆ ಅಕ್ರಮ ಮರಳು ಶೇಖರಣೆ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜೆಸಿಬಿ ಮೂಲಕ ನದಿಯ ಒಡಲನ್ನು ಬಗೆದು ಟ್ರಾಕ್ಟರ್ ಮತ್ತು ಬೃಹತ್ ಟಿಪ್ಪರ್ ಮೂಲಕ ಮರಳು ಲೂಟಿ ನಡೆದಿದೆ ಈ ಬಗ್ಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಮತ್ತು ಪೊಲೀಸ್ ಇಲಾಖೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯವಾಗಿದೆ.
Comments
Post a Comment