ಶ್ರೀ ಗೋಪಾಲದಾಸರ ಮತ್ತು ಶ್ರೀ ಪುರಂದರ ದಾಸರ ಪುಣ್ಯತಿಥಿ ಹಾಗೂ ಶ್ರೀಮನ್‌ ಮಧ್ವನವರಾತ್ರಿ ಉತ್ಸವ ಜ್ಞಾನಸತ್ರ ಉದ್ಘಾಟನೆ : ಭವಬಂಧನವನ್ನು ಕಳೆದು ಮೋಕ್ಷವನ್ನೀಯುವುದೇ ಭಾಗವತ- ರಾಮವಿಠ್ಠಲಾಚಾರ್ಯ

 


ಶ್ರೀ ಗೋಪಾಲದಾಸರ ಮತ್ತು ಶ್ರೀ  ಪುರಂದರ ದಾಸರ ಪುಣ್ಯತಿಥಿ ಹಾಗೂ ಶ್ರೀಮನ್‌ ಮಧ್ವನವರಾತ್ರಿ ಉತ್ಸವ ಜ್ಞಾನಸತ್ರ  ಉದ್ಘಾಟನೆ :                     ಭವಬಂಧನವನ್ನು ಕಳೆದು  ಮೋಕ್ಷವನ್ನೀಯುವುದೇ ಭಾಗವತ- ರಾಮವಿಠ್ಠಲಾಚಾರ್ಯ


ರಾಯಚೂರು,ಜ.28- ನಗರದ ಕೋಟೆ ಬಡಾವಣೆಯ ಶ್ರೀ ಮುಂಗ್ಲಿ ಮುಖ್ಯಪ್ರಾಣ ಸೇವಾ ಸಮಿತಿ ಹಾಗೂ ಸಮಸ್ತ ಯುವಕ ಮಂಡಳಿ ಕೋಟೆ ಇವರ ಸಂಯುಕ್ತಾಶ್ರಯದಲ್ಲಿ ರಾಯಚೂರಿನ ಶ್ರೀ ಮುಂಗಲಿ ಮುಖ್ಯಪ್ರಾಣದೇವರ ದೇವಸ್ಥಾನದಲ್ಲಿ   ಜ.27 ರಿಂದ ಫೆ. 25 ರವರೆಗೆ ಮೂವತ್ತು ದಿನಗಳ ಕಾಲ ನಡೆಯುವ 56 ನೇ ವಷ೯ದ ಸುವಣ೯ಮಹೋತ್ಸವದ ಮಹಾನ್‌ ಜ್ಞಾನಸತ್ರ ಕಾಯ೯ಕ್ರಮವನ್ನು ಬೆಂಗಳೂರಿನ ಪೂಣ೯ಪ್ರಜ್ಞ ವಿದ್ಯಾಪೀಠದ ಹಿರಿಯ ಅಧ್ಯಾಪಕರಾದ ಪಂಡಿತ  ಶ್ರೀ ರಾಮವಿಠ್ಠಲಾಚಾಯ೯ರು ಶನಿವಾರ ಸಂಜೆ ಉದ್ಘಾಟಿಸಿದರು .                                                ನಂತರ ಶ್ರೀಮದ್‌ ಭಾಗವತ ವಿಷಯದ ಪ್ರಥಮ ಸ್ಕಂದದ ಕುರಿತು ಪ್ರವಚನ ನೀಡಿದ ಅವರು”ಪಿಭತಂ ಭಾಗವತಂ ರಸಮಾಲಯಂ” ಎನ್ನುವಂತೆ ಭಗವಂತನ ಮಹಿಮೆ ತಿಳಿಸುವುದೇ ಭಾಗವತ. ಬ್ರಹ್ಮದೇವರಿಂದ ನಾರದರಿಗೆ ಉಪದೇಶವಾದ,ಬದರಿಯ ಅಲಕನಂದಾ ತೀರದ ಶಮ್ಯಾಪ್ರಾಸ ಎಂಬ ಆಶ್ರಮದಲ್ಲಿ ನಾರದರು ತಮ್ಮ ತಂದೆಯಾದ  ಬ್ರಹ್ಮದೇವರಿಂದ ಪಡೆದ ಸಂಕ್ಷಿಪ್ತ ನಾಲ್ಕು ಶ್ಲೋಕಗಳನ್ನು ವೇದವ್ಯಾಸರಿಗೆ ಒಪ್ಪಿಸಿ ಲೋಕದ ಎಲ್ಲಾ ಸಜ್ಜನರಿಗೆ ವಿಸ್ತಾರವಾಗಿ ತಿಳಿಸುವಂತೆ ಕೋರಿದಾಗ ಶ್ರೀ ವೇದವ್ಯಾಸರು ಮೂಲದಲ್ಲಿ ಸಂಕ್ಷಿಪ್ತವಾದ ನಾಲ್ಕು ಶ್ಲೋಕದ ಭಾಗವತವನ್ನು ಹನ್ನೆರಡು ಸ್ಕಂದಗಳಲ್ಲಿ,ಹದಿನೆಂಟು ಸಾವಿರ ಶ್ಲೋಕಗಳಲ್ಲಿ ವಿಸ್ತಾರಗೊಳಿಸಿ ನೀಡಿದ್ದಾರೆ ಎಂದರು.ಭಾಗವತವು ಮಹಾತ್ಮಜ್ಞಾನ ರೂಪವಾದ ಸವ೯ತೋಮುಖವಾದ ಸ್ನೇಹವನ್ನು ಭಕ್ತ ಮತ್ತು ಭಗವಂತನಲ್ಲಿ ತೋರಿಸುತ್ತದೆ.ಸವ೯ತ್ರದಲ್ಲಿ ಲಕ್ಷ್ಮೀಪತಿಯಾದ ಶ್ರೀಮನ್ನಾರಯಣನೇ ಸವೋ೯ತ್ತಮ ಎಂಬ ತತ್ವವನ್ನು ತಿಳಿಸುವ ಭಕ್ತಿ, ಮಾನವನಿಗೆ ಭವಿಷ್ಯವನ್ನು ರೂಪಿಸಿ ಭವಬಂಧನವನ್ನು ಕಳೆದು ಪರಮಪದ ಅಂದರೆ ಮೋಕ್ಷವನ್ನೀಯುವುದೇ ಭಾಗವತ.ಶ್ರೀಕೃಷ್ನ ಪರಮಾತ್ಮನ ಬೋಧನೆಗಳು ಸವ೯ತ್ರಕಾಲಕ್ಕೂ ಸವ೯ವಿದಿತವಾಗಿ ಪ್ರಭಾವಿಸುತ್ತವೆ.ಕುಂತಿಯ ವ್ಯಕ್ತಿತ್ವದ ವಿವಿಧ ಮುಖಗಳ ಪೂಣ೯ಪ್ರಮಾಣದ ಪರಿಚಯ,ಪರೀಕ್ಷಿತ ಮಹಾರಾಜರ ದೃಷ್ಠಾಂತವನ್ನೇ ನಿತ್ಯಜೀವನಕ್ಕೆ ಸೋದಾಹರಣವಾಗಿ ಸಮೀಕರಿಸಿ ಅತ್ಯಂತ ಸರಳವಾಗಿ ಮನಮುಟ್ಟುವಂತೆ ವ್ಯಾಖ್ಯಾನಿಸಿದರು.ಮಾನವ ಅರಿಷಡ್ವಗ೯ಗಳನ್ನು ಜಯಿಸಲು ಭಾಗವತದ ಅನುಸರಣೆಯಿಂದ ಸತ್ಯ ಧಮ೯-ಅಧಮ೯,ನ್ಯಾಯ- ಅನ್ಯಾಯ,ಸ್ವಗ೯-ನರಕ ಗಳ ಕುರಿತು ಮಾಡಬೇಕಾದ-ಮಾಡಲೇಬಾರದ ಕಮ೯ಗಳ ಕುರಿತು ನೈಜವಾದ ದೃಷ್ಟಾಂತಗಳೊಂದಿಗೆ ಬೆಸೆದು,ಧಮ೯ಮಾಗ೯ದಲ್ಲಿ ನಡೆಯುವ ಪರಿ ಮೋಕ್ಷದ ದಾರಿ ಭಗವಂತನ ಉಪಾಸನೆ ಸಾಧನೆ ಭಕ್ತಿಗಳಿಗೆ ಸಾಧನವೇ ಭಾಗವತ ಎಂಬುದನ್ನು ವಿಭಿನ್ನವಾಗಿ ವಿಶಿಷ್ಟವಾಗಿ ತಿಳಸಿಕೊಟ್ಟರು.


  ಪ್ರಾರಂಭದಲ್ಲಿ ಅಚ್ಯುತ ಅವರಿಂದ ವೇದಘೋಷ ,ಅನಂತಲಕ್ಷ್ಮಿ,ನವ್ಯ ಇವರಿಂದ ದೇವಸ್ತುತಿ ಜರುಗಿತು. ತಾರಾನಾಥ ರಾವ್‌ ಜೇಗರಕಲ್‌ ರವರು ಸ್ವಾಗತಿಸಿ,ಪ್ರಾಸ್ತಾವಿಕವಾಗಿ ಮಾತನಾಡಿ ಇಡೀ ಕಾಯ೯ಕ್ರಮವನ್ನು ನಿರೂಪಿಸಿ ನಿವ೯ಹಿಸಿದರು.ಕಾಯ೯ಕ್ರಮದಲ್ಲಿ ಅಚ೯ಕರಾದ ರಘುಕಾಂತಾಚಾರ್‌,ಪಯಾ೯ಯ ಅಚ೯ಕರಾದ ನರಸಿಂಹಾಚಾರ್‌,ಪ್ರಕಾಶಾಚಾರ್ ಜಯಕುಮಾರ ಗಬ್ಬೂರು ,ನರಸಿಂಗರಾವ್‌ ದೇಶಪಾಂಡೆ ಮುದಗಲ್‌, ಬ್ಯಾಂಕ್‌ ನರಸಿಂಗರಾವ್, ರಾಮು ದೇಸಾಯಿ, ಸುಶಿಲೇಂದ್ರಾಚಾರ್‌ ಗಬ್ಬೂರ್,  ವಾಜೇಂದ್ರ ದರೂರ ಮದನ ಮೋಹನ್‌, ಹನುಮಂತರಾವ್‌ ದೇಸಾಯಿ, ವಾಸುದೇವಾಚಾರ್‌,  ವೆಂಕೋಬರಾವ್ ಪಟವಾರಿ, ರವೀಂದ್ರ ಕೋನಾಪೂರ್‌ ,ನಾರಾಯಣ ರಾವ್‌ ಟಕ್ಕಳಕಿ ತಿರುಮಲ ಕುಲಕಣಿ೯ ಗೋವಿಂದದಾಸ್‌ ,ಜಯ ಕುಮಾರ್ ದೇಸಾಯಿ ಕಾಡ್ಲೂರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಉಪಸ್ಥಿತರಿದ್ದರು.


                                                                                     

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್