ಕೇಂದ್ರ ಬಜೆಟ್ ನಲ್ಲಿ ಏಮ್ಸ್ ಮಂಜೂರುಗಾಗಿ ಹಣಕಾಸು ಸಚಿವೆ ಸಿರ್ಮಲಾ ಸೀತಾರಾಮನ್ ಗೆ ಒತ್ತಡ ಮಾಡಲು ಸಿಎಂರಿಗೆ ರವಿ ಬೋಸರಾಜು ಮನವಿ.
ಕೇಂದ್ರ ಬಜೆಟ್ ನಲ್ಲಿ ಏಮ್ಸ್ ಮಂಜೂರುಗಾಗಿ - ಹಣಕಾಸು ಸಚಿವೆ ಸಿರ್ಮಲಾ ಸೀತಾರಾಮನ್ ಗೆ ಒತ್ತಡ ಮಾಡಲು ಸಿಎಂರಿಗೆ ರವಿ ಬೋಸರಾಜು ಮನವಿ.
ರಾಯಚೂರು,ಜ.27-ಮುಂಬರುವ ಕೇಂದ್ರ ಬಜೆಟ್ ನಲ್ಲಿ ರಾಯಚೂರಿಗೆ ಏಮ್ಸ್ ಘೋಷಿಸಲು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತರಾಮನ್ ಅವರಿಗೆ ಒತ್ತಡ ಮಾಡುವಂತೆ ಕಾಂಗ್ರೆಸ್ ರಾಜ್ಯ ಯುವ ಮುಖಂಡರಾದ ರವಿ ಬೋಸರಾಜು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಮಾಡಿದರು.
ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತನಾಡಿ, ಜಿಲ್ಲೆಯಲ್ಲಿ ಏಮ್ಸ್ ಹೋರಾಟ ಸಮಿತಿ ಸುಮಾರು 625 ದಿನಗಳಿಂದ ಅಮರಣಾಂತರ ಸತ್ಯಾಗ್ರಹವನ್ನು ನಡೆಸುತ್ತಿದೆ. ಅಲ್ಲದೆ ಜಿಲ್ಲೆಯಲ್ಲಿ ಏಮ್ಸ್ ಸ್ಥಾಪಿಸುವಂತೆ ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರಾದ ಮನಸುಖ್ ಎಲ್ ಮಂಡವೀಯ ಅವರನ್ನು ಭೇಟಿ ಮಾಡಿ ಮಾತನಾಡಲಾಗಿತ್ತು. ಈ ಕುರಿತು ಹಣದ ಕೊರತೆಯಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಬಾರಿಯ ಬಜೆಟ್ ನಲ್ಲಿ ಜಿಲ್ಲೆಗೆ ಏಮ್ಸ್ ಘೋಷಿಸಬೇಕೆಂದು ಒತ್ತಡ ಹೇರುವಂತೆ ಆಗ್ರಹಿಸಿದ್ದಾರೆ.
ರಾಯಚೂರು ಜಿಲ್ಲೆ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಜಿಲ್ಲೆಯಾಗಿದೆ ಅಲ್ಲದೆ ಭಾರತೀಯ ಸಂವಿಧಾನದ 371 (ಜೆ) ವಿಶೇಷ ನಿಬಂಧನೆಯ ಅಡಿಯಲ್ಲಿಯೂ ಸಹ ಒಳಗೊಂಡಿದೆ.
ಹಿಂದುಳಿದ ಜಿಲ್ಲೆಯಾಗಿರುವ ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸುವ ಮೂಲಕ ಆರೋಗ್ಯ, ಉದ್ಯೋಗ, ವೈದ್ಯಕೀಯ ಶಿಕ್ಷಣದ ಬಲವರ್ಧನೆಗಾಗಿ ಹಾಗೂ ಹಿಂದುಳಿದ ಹಣೆಪಟ್ಟಿ ಕಳಚಲು ಮಂಜೂರು ಮಾಡಬೇಕಾಗಿದೆ ಎಂದು ಮನವಿ ಮಾಡಿದ್ದಾರೆ.
Comments
Post a Comment