ರಾಜ್ಯ ಸರ್ಕಾರ ಗ್ಯಾರಂಟಿಗಳ ಈಡೇರಿಕೆಯಲ್ಲಿ ವಿಫಲ: ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸಲು ಜಗದೀಶ್ ಶೆಟ್ಟರ್ ಮರಳಿ ಬಂದಿದ್ದಾರೆ -ಬಿ.ವೈ. ವಿಜಯೇಂದ್ರ


 ರಾಜ್ಯ  ಸರ್ಕಾರ ಗ್ಯಾರಂಟಿಗಳ ಈಡೇರಿಕೆಯಲ್ಲಿ ವಿಫಲ:  ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸಲು ಜಗದೀಶ್ ಶೆಟ್ಟರ್ ಮರಳಿ ಬಂದಿದ್ದಾರೆ -ಬಿ.ವೈ. ವಿಜಯೇಂದ್ರ                          ರಾಯಚೂರು,ಜ.28-ರಾಜ್ಯ ಸರ್ಕಾರದಿಂದ 5 ಗ್ಯಾರಂಟಿಗಳು ಸಮರ್ಪಕ ಜಾರಿಯಾಗಿಲ್ಲ ರಾಜ್ಯ  ಸರ್ಕಾರ ಗ್ಯಾರಂಟಿಗಳ ಈಡೇರಿಕೆಯಲ್ಲಿ ವಿಫಲವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.                           ಅವರಿಂದು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ  ಮಾತನಾಡಿ ಕೇಂದ್ರ ಸರ್ಕಾರ ಅನೇಕ ರಾಜ್ಯ ಸರ್ಕಾರಗಳಿಗೆ ನೈಸರ್ಗಿಕ ವಿಕೋಪ ಬೆಳೆ ನಷ್ಟದ  ಪರಿಹಾರ ನೀಡಬೇಕಿದೆ ಸ್ವಲ್ಪ  ವಿಳಂಬ ಮಾಡಬಹುದು ಆದರೂ ಪರಿಹಾರ ನೀಡುತ್ತದೆ ಎಂದು ಅವರು ರಾಜ್ಯ ಸರ್ಕಾರ ಎಲ್ಲದಕ್ಕೂ ಕೇಂದ್ರದ ಮೇಲೆ ಗೊಬೆ ಕೂರಿಸುತ್ತ ಕಾಲಹರಣ ಮಾಡುತ್ತಿದೆ ಸರ್ಕಾರದಲ್ಲಿರುವ ಕಂದಾಯ ಸಚಿವರು ಎಸಿ ರೂಂ ನಲ್ಲಿ ಕುಳಿತು ಕೇವಲ ಸಭೆ ಮಾಡುತ್ತಾರೆ ಎಂದು ಆರೋಪಿಸಿದ ಅವರು ಅನೇಕ ಸಚಿವರು ತಮ್ಮ ಉಸ್ತುವಾರಿ ಜಿಲ್ಲೆಗೆ ಹೋಗದೆ ನಿಷ್ಕ್ರಿಯರಾಗಿದ್ದಾರೆಂದರು. ಸರ್ಕಾರ  7 ತಾಸು ವಿದ್ಯುತ್ ನೀಡದೆ  ಬರೆ ಎಳೆದಿದ್ದು ರೈತರು ಕಂಗಾಲಾಗಿದ್ದಾರೆ ಎಂದರು.

ಎಸ್ ಸಿಪಿಟಿಎಸ್ಪಿ ಹಣವನ್ನು ಸರ್ಕಾರ ಬೇರೆಡೆ ವಿನಿಯೋಗ ಮಾಡಿದೆ ಯುವನಿಧಿ ನೋಂದಣಿ ಕೇವಲ 60 ಸಾವಿರ ನೋಂದಣೆಯಾಗಿದೆ ಲಕ್ಷಾಂತರ ನಿರುದ್ಯೋಗಿಗಳಿದ್ದಾರೆ ಪ್ರತಿಯೊಂದು ಗ್ಯಾರಂಟಿ ಯಲ್ಲಿ ಕಾಂಗ್ರೆಸ್ ಸರ್ಕಾರ   ಮೋಸ ಮಾಡಿದೆ ಗ್ರಾಮಗಳಲ್ಲಿ ಬೆರಳೆಣಿಕೆ ಫಲಾನುಭವಿಗಳಿಗೆ ಯೋಜನೆಗಳು ತಲುಪುತ್ತಿದ್ದು ಪಂಚ ಗ್ಯಾರಂಟಿ ವಿಫಲವಾಗಿದೆ ಎಂದರು.


ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಇಂದು ರಾಮಮಂದಿರದ ಹಲವಾರು ದಶಕಗಳ ಹೋರಾಟಕ್ಕೆ ಜಯಸಿಕ್ಕೆದೆ ಎಂದ ಅವರು ಮೊಗಲರ ಅಟ್ಟಹಾಸಕ್ಕೆ ರಾಮಮಂದಿರ ಸರ್ವನಾಶವಾಗಿ ರಾಮಮಂದಿರ ನೆಲಸಮವಾಗಿತ್ತು ಇದೀಗ ಮತ್ತೊಮ್ಮೆ ತಲೆಯೆತ್ತಿದೆ ಕೋಟ್ಯಾಂತರ ಹಿಂದುಗಳಲ್ಲಿ ಸಂತೋಷ ಮನೆ ಮಾಡಿದೆ ಎಂದರು. ರಾಜ್ಯ ಕಾಂಗ್ರೆಸ್ ನಾಯಕರು ಹಿಂದುಗಳ ಭಾವನೆಗೆ ಧಕ್ಕೆ ತರುತ್ತಿದ್ದಾರೆ. ಮಂಡ್ಯದ ಕೆರೆಗೋಡು ಗ್ರಾ.ಪಂ ನಲ್ಲಿ 100 ಅಡಿ ಎತ್ತರ ಧ್ವಜ ಸ್ಥಂಬಕ್ಕೆ ರಾಜ್ಯ ಸರ್ಕಾರ ಪೊಲೀಸರ ಮೂಲಕ ಧ್ವಜ ಇಳಿಸಿದ್ದಾರೆ ಇದು ಓಲೈಕೆ ಸರ್ಕಾರವೆಂದ ಅವರು ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರದ ದರ್ಪ ಏರಿದೆ ಕಾನೂನು ಸುವ್ಯವಸ್ಥೆ ಹದಗೆಡುವ ಕೆಲಸ ಮಾಡುತ್ತಿದೆ ಎಂದು ದೂರಿದರು.

ರಾಜ್ಯದ ಸಂಕಷ್ಟದ ರೈತರಿಗೆ ಬರ ಪರಿಹಾರ ನೀಡದೇ 2ಸಾವಿರ ನೀಡುತ್ತಿದೆ ಯಡಿಯೂರಪ್ಪ ಸಿಎಂ ಆಗಿದ್ದಾಗ ನೆರೆ, ಬರ ಪರಿಹಾರ ರಾಜ್ಯ ಸರ್ಕಾರದಿಂದ ಸಮರ್ಪಕ ಪರಿಹಾರ ನೀಡಿದ್ದರು ಕೇಂದ್ರದ ಮೇಲೆ ಅವಲಂಬನೆಯಾಗಿರಲಿಲ್ಲ. ಬಿಜೆಪಿ ವಿಳಂಬಮಾಡಿದೇ ರೈತರ ಸಂಕಷ್ಟಕ್ಕೆ ಸ್ಪಂದಿಸಿದ್ದರು ಎಂದರು.

ರಾಜ್ಯ ಸರ್ಕಾರ ತನ್ನ ಜವಾಬ್ದಾರಿ ನಿರ್ವಹಿಸಲಿ ಹುಡುಗಾಟ ಮಾಡದೇ ರೈತರಿಗೆ ಪರಿಹಾರ ನೀಡಲಿ ಎಂದ ಅವರು ರಾಜ್ಯ ಸರ್ಕಾರ ರೈತ, ದಲಿತ ವಿರೋಧಿ ರಾಜ್ಯ ಸರ್ಕಾರವಾಗಿದೆ ಎಂದರು.

 ಕೇಂದ್ರ ಸರ್ಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಂಡಿಲ್ಲ ಎನ್ ಡಿಆರ್ ಎಫ್ ಮಾನದಂಡಗಳಡಿ ಪರಿಹಾರ ನೀಡಲಿದ್ದಾರೆ ಎಂದರು. 

  ಏಮ್ಸ್ ಸ್ಥಾಪನೆಗೆ   ಪ್ರಾಮಾಣಿಕ ಪ್ರಯತ್ನ ಮಾಡಿ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುತ್ತೇವೆ ಕಲ್ಯಾಣ ಕರ್ನಾಟಕದಲ್ಲಿ ಶೈಕ್ಷಣಿಕ, ಆರೋಗ್ಯ ಕ್ಷೇತ್ರದ ಸುಧಾರಣೆ ಆಗಬೇಕು ಎಂದರು.

ಪ್ರಧಾನಿ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸಲು ಜಗದೀಶ ಶೆಟ್ಟರ್  ಮರಳಿ ಬಿಜೆಪಿಗೆ ಬಂದಿದ್ದಾರೆ ಎಂದರು.                        ಈ ಸಂದರ್ಭದಲ್ಲಿ  ಸಂಸದರಾದ ರಾಜಾ ಅಮರೇಶ್ವರ ನಾಯಕ, ಕರಡಿ ಸಂಗಣ್ಣ, ಶಾಸಕ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ಶಿವರಾಜ ಪಾಟೀಲ್, ಮಾಜಿ ಸಂಸದ ಬಿ.ವಿ.ನಾಯಕ, ಕೆ.ಕರಿಯಪ್ಪ , ಪಿ.ರಾಜೀವ್ ಇನ್ನಿತರರು ಇದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್