ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್ ಅಧಿಕಾರ ಸ್ವೀಕಾರ
ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್ ಅಧಿಕಾರ ಸ್ವೀಕಾರ ರಾಯಚೂರು,ಜ.31- ಕರ್ನಾಟಕ ರಾಜ್ಯ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್ ಅಧಿಕಾರ ಸ್ವೀಕರಿಸಿದರು.
ಇಂದು ಬೆಂಗಳೂರಿನ ಕರ್ನಾಟಕ ರಾಜ್ಯ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಶಾಸಕರು ಪರಿಶಿಷ್ಟ ಪಂಗಡಗಳ ನಿಗಮದ ವತಿಯಿಂದ ದೊರೆಯುವ ಸೌಲಭ್ಯಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿತ್ತೇನೆ, ಇಲಾಖೆಯ ಪ್ರತಿಯೊಂದು ಯೋಜನೆಗಳನ್ನು ಸಮರ್ಪಕವಾಗಿ ಜನರಿಗೆ ತಲುಪುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತದೆ ಎಂದರು.
ನನಗೆ ಹುದ್ದೆ ದೊರೆಯಲು ಮುಖ್ಯ ಕಾರಣೀಭೂತರಾದ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆರವರಿಗೆ, ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರಿಗೆ ಮತ್ತು ರಾಜ್ಯದ ಉಪ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಡಿ ಕೆ ಶಿವಕುಮಾರ್ ರವರಿಗೆ ಮತ್ತು ಸಚಿವರಾದ ಪ್ರಿಯಾಂಕ ಖರ್ಗೆ ರವರಿಗೆ ಮತ್ತು ಸಚಿವರಾದ ಸತೀಶ ಜಾರಕಿಹೊಳಿ ರವರಿಗೆ ಮತ್ತು ಇಲಾಖೆಯ ಸಚಿವರಾದ ಬಿ ನಾಗೇಂದ್ರ ರವರಿಗೆ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣ ಪ್ರಕಾಶ್ ಪಾಟೀಲ್ ರವರಿಗೆ ತುಂಬು ಹೃದಯದ ಅಭಿನಂದನೆಗಳನ್ಞು ಸಲ್ಲಿಸುತ್ತೇನೆ ಎಂದರು.
ವಿಶೇಷವಾಗಿ ನನ್ನ ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ನನ್ನ ಪ್ರತಿಯೊಬ್ಬ ಮತದಾರರಿಗೂ ನಾನು ಋಣಿಯಾಗಿದ್ದೇನೆ ರಾಯಚೂರು ಗ್ರಾಮೀಣ ಕ್ಷೇತ್ರದ ಜನರು ಸೇವೆ, ಮತ್ತು ಕರ್ನಾಟಕ ಮಹರ್ಷಿ ಪರಿಶಿಷ್ಟ ಪಂಗಡದ ನಿಗಮದ ಅಧ್ಯಕ್ಷರಾಗಿ ನನ್ನ ಕರ್ತವ್ಯವನ್ನು ಯಾವುದೇ ಒತ್ತಡಗಳಿಗೆ ಒಳಗಾಗದೇ ಕೆಲಸ ಮಾಡುತ್ತೇನೆ ಎಂದರು.
ಪರಿಶಿಷ್ಟ ಪಂಗಡದ ನಿಗಮಕ್ಕೆ ಅಗತ್ಯವಾದ ಅನುದಾನ ಈ ಬಜೆಟ್ ಮೀಸಲಿಡಬೇಕು ಎಂದು ರಾಜ್ಯದ ಮುಖ್ಯಮಂತ್ರಿಗಳಿಗೆ ಮತ್ತು ಉಪ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ, ಅದರಂತೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.
ನಾನು ಈ ಹಿಂದೆ ಶಾಸಕರಾದಂತಹ ಸಂದರ್ಭದಲ್ಲಿ ಸೇವೆ ಮಾಡಲು ಅವಕಾಶ ಒದಗೀತ್ತು ಈಗ ಎರಡನೇ ಅವಧಿ ಸೇವೆ ಮಾಡುವ ಅವಕಾಶ ಸಿಕ್ಕಿದೆ, ಈ ಹುದ್ದೆಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದರು.
ಯಾವ ಯಾವ ಯೋಜನೆಗಳು ಲಭ್ಯವಿವೆ ಅವುಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ನಿಗಮದ ವತಿಯಿಂದ ಜನರಿಗೆ ಬಹಳಷ್ಟು ನಿರೀಕ್ಷೆಗಳಿವೆ ಬೋರ್ ವೆಲ್ , ಉದ್ಯಮಶೀಲತೆ ಟ್ಯಾಕ್ಸಿ, ಭೂಮಿ ಇಲ್ಲದವರಿಗೆ ಭೂಮಿ ಒದಗಿಸುವ ಯೋಜನೆ ಕೂಡ ಇವೆ ಈ ಬಜೆಟ್ ನಲ್ಲಿ ಹೆಚ್ಚಿನ ಅನುದಾನ ಸಿಗುವ ವಿಶ್ವಾಸವಿದೆ, ಇಲಾಖೆಯಲ್ಲಿ ಪಾರದರ್ಶಕವಾಗಿ ಫಲಾನುಭವಿಗಳನ್ನು ಆಯ್ಕೆ ಮಾಡಿ ಯೋಜನೆ ಉಪಯೋಗ ನೇರವಾಗಿ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತದೆ, ಇಲಾಖೆಯಲ್ಲಿ ಪಾರದರ್ಶಕವಾಗಿ ಅಗತ್ಯ ಸೌಲಭ್ಯ ದೊರೆಯುವಂತೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಇಲಾಖೆಯ ಸಚಿವರಾದ ಬಿ ನಾಗೇಂದ್ರ , ಮಾಜಿ ಸಚಿವರಾದ ಎಚ್ ಆಂಜನೇಯ ರವರು, ಮಾಜಿ ಸಚಿವರಾದ ಅಮರೇಗೌಡ ಬಯ್ಯಾಪುರ ರವರು, ಸಿಂಧನೂರು ಕ್ಷೇತ್ರದ ಶಾಸಕರಾದ ಹಂಪನಗೌಡ ಬಾದರ್ಲಿ ರವರು, ವಿಧಾನಪರಿಷತ್ ಸದಸ್ಯರಾದ ಬಸವರಾಜ ಪಾಟೀಲ ಇಟಗಿ,ಎ ವಸಂತಕುಮಾರ್,ಶರಣಪ್ಪ ಮಟ್ಟೂರು, ಅಸ್ಲಾಂ ಪಾಷ, ಕರಿಂಸಾಬ್ , ಹಿರಿಯ ಮುಖಂಡರುಗಳು ನೂತನವಾಗಿ ಆಯ್ಕೆಯಾದ ನಾಮನಿರ್ದೇಶನ ಸದಸ್ಯರುಗಳು ರಾಯಚೂರು ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ನಾಗವೇಣಿ ಪಾಟೀಲ್, ಶಶಿಕಲಾ ಭೀಮರಾಯ ನಿಗಮದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು, ಪಕ್ಷದ ಮುಖಂಡರುಗಳು, ರಾಯಚೂರು ಜಿಲ್ಲೆಯ ಮುಖಂಡರುಗಳು ಮತ್ತು ಗ್ರಾಮೀಣ ಕ್ಷೇತ್ರದ ಪಕ್ಷದ ಮುಖಂಡರುಗಳು ಉಪಸ್ಥಿತರಿದ್ದರು.
Comments
Post a Comment