ಮಾರ್ಚ್ 1ರಿಂದ ಕೃಷ್ಣ ಸೇತುವೆ ಮೇಲೆ ವಾಹನಗಳ ಸಂಚಾರಕ್ಕೆ ಅವಕಾಶ- ಸಂಸದ
ಮಾರ್ಚ್ 1ರಿಂದ ಕೃಷ್ಣ ಸೇತುವೆ ಮೇಲೆ ವಾಹನಗಳ ಸಂಚಾರಕ್ಕೆ ಅವಕಾಶ- ಸಂಸದ
ರಾಯಚೂರು ,ಫೆ.27- ಶಕ್ತಿನಗರದಿoದ ತೆಲಂಗಾಣ ರಾಜ್ಯಕ್ಕೆ ಸಂಪರ್ಕಿಸುವ ಕೃಷ್ಣ ನದಿಗೆ ನಿಜಾಮರ ಕಾಲ 1943ರಲ್ಲಿ ಒಟ್ಟು 750 ಮೀಟರ್ ಉದ್ದ ನಿರ್ಮಿಸಲಾದ 80 ವರ್ಷಗಳ ಹಳೆಯದಾದ ಸೇತುವೆ ಮೇಲಿನ ರಾಷ್ಟ್ರೀಯ ಹೆದ್ದಾರಿ-167 ರಸ್ತೆಯನ್ನು ಈ ಹಿಂದೆ ಹಾಕಲಾದ ವೇರಿಂಗ್ ಕೋಟ್ ಹಾಳಾಗಿರುವ ಪ್ರಯುಕ್ತ ದುರಸ್ತಿಗಾಗಿ ಸುಮಾರು 45 ದಿನಗಳಿಂದ ವಾಹನಗಳ ಸಂಚಾರಕ್ಕೆ ಜಿಲ್ಲಾಡಳಿತದ ನಿರ್ದೇಶನದಂತೆ ಸಂಪೂರ್ಣ ನಿಷೇಧ ಮಾಡಲಾಗಿತ್ತು.
ಸದರಿ ಸೇತುವೆ ಮೇಲಿನ ಹಿಂದೆ ಹಾಕಲಾದ ಹಳೆಯ ಕಾಂಕ್ರೀಟ್ ವೇರಿಂಗ್ ಕೋಟ್ ನ್ನು ಸಂಪೂರ್ಣವಾಗಿ ತೆಗೆದುಹಾಕಿ ಹೊಸ ಕಾಂಕ್ರೀಟ್ ವೇರಿಂಗ್ ಕೋಟನ್ನು ಸೇತುವೆಯ ಉದ್ದ ಮತ್ತು ಅಗಲ ರಸ್ತೆ ಕಾಮಗಾರಿಯನ್ನು ಹೊಸ ಸೇತುವೆ ನಿರ್ಮಾಣದ ಗುತ್ತಿಗೆದಾರರಿoದ ನಿರ್ಮಿಸಲಾಗಿದ್ದು, ದುರಸ್ತಿ ಕಾರ್ಯವು ಸಂಪೂರ್ಣವಾಗಿ ಮುಗಿದಿರುತ್ತದೆ. ಈ ರಸ್ತೆಯನ್ನು ಮಾ.1 ರಂದು ಬೆಳಿಗ್ಗೆಯಿಂದ ವಾಹನಗಳ ಸಂಚಾರಕ್ಕೆ ಸಾರ್ವಜನಿಕರಿಗೆ ಮುಕ್ತ ಮಾಡಲಾಗುತಿದ್ದು ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೊಸ ಸೇತುವೆ ನಿರ್ಮಾಣ ಆಗುವವರೆಗೂ ಈ ಹಳೇ ಸೇತುವೆ ಮೇಲೆ ಅಧಿಕ ಭಾರ ಹೊತ್ತ ಬೂದಿ ತುಂಬಿದ ವಾಹನಗಳನ್ನು ನಿರ್ಬಂಧಿಸಲು ಜಿಲ್ಲಾಡಳಿತವು ನಿರ್ಧರಿಸಬೇಕು ಬೂದಿ ತುಂಬಿದ ಭಾರಿ ವಾಹನ ಸಂಚಾರ ಮುಕ್ತವಾದರೆ ಸೇತುವೆಯನ್ನು ಅನೇಕ ದಿನಗಳವರೆಗೆ ಕಾಪಾಡಬಹುದು ಎಂದು ತಮ್ಮ ಅನಿಸಿಕೆಯನ್ನು ಸಂಸದರಾದ ರಾಜಾ ಅಮರೇಶ್ವರ ನಾಯಕ ವ್ಯಕ್ತಪಡಿಸಿದ್ದಾರೆ .
Comments
Post a Comment