ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ 13ನೇ ಘಟಿಕೋತ್ಸವ: ಕೃಷಿ ಕ್ಷೇತ್ರ ದೇಶದ ಆಧಾರ ಸ್ತಂಭ -ರಾಜ್ಯಪಾಲರು.


ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ 13ನೇ ಘಟಿಕೋತ್ಸವ:                   
ಕೃಷಿ ಕ್ಷೇತ್ರ ದೇಶದ ಆಧಾರ ಸ್ತಂಭ -ರಾಜ್ಯಪಾಲರು.                                                                       
ರಾಯಚೂರು,ಫೆ.29- ಕೃಷಿ ಕ್ಷೇತ್ರ ಭಾರತದ ಆಧಾರ ಸ್ತಂಭವಾಗಿದೆ ಎಂದು ಘನತವೆತ್ತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಹೇಳಿದರು. ಅವರಿಂದು ಕೃಷಿ ವಿವಿ ಪ್ರೇಕ್ಷಾಗೃಹದಲ್ಲಿ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ 13ನೇ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದರು. ಜಿಡಿಪಿ ಬೆಳವಣಿಯಲ್ಲಿ ಕೃಷಿ ಕ್ಷೇತ್ರ ಮಹತ್ತರ ಪಾತ್ರ ವಹಿಸುತ್ತದೆ ಎಂದ ಅವರು ಕೃಷಿ ಕ್ಷೇತ್ರದಲ್ಲಿ ಹೊಸ ವಿಕಾಸ್ ತರಲು ವಿಶ್ವವಿದ್ಯಾಲಯ ಪಾತ್ರ ಹಿರಿದಾಗಿದೆ ಎಂದರು. 

ಸಿರಿಧಾನ್ಯಕ್ಕೆ ಉತ್ತೇಜನ ನೀಡಲು ಸುಮಾರು 25 ಕೋಟಿ  ರೂ ವೆಚ್ಚದಲ್ಲಿ ಸಿರಿಧಾನ್ಯ ಪಾರ್ಕ್ ಸ್ಥಾಪನೆಗೆ ಮುಂದಾಗಿದೆ ಎಂದರು. ಪದವಿ ಸ್ನಾತಕೋತ್ತರ ಪದವಿ, ಪಿಹೆಚ್ ಡಿ ಪಡೆದ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ನಾಂದಿ ಹಾಡಲಿ ಎಂದರು .ಆತ್ಮ ನಿರ್ಭರ ಭಾರತಕ್ಕೆ ಕೃಷಿ ಕ್ಷೇತ್ರ ಸಹಕಾರಿಯಾಗಲಿದೆ ಎಂದ ಅವರು ನಮ್ಮ ದೇಶ ಸದೃಡವಾಗಲು ಶಿಕ್ಷಣದಿಂದ ಮಾತ್ರ ಸಾಧ್ಯವೆಂದರು. ಕೃಷಿಯಲ್ಲಿ ಮಹಿಳೆಯರು ತೊಡಗಿಸಿಕೊಂಡು ಸ್ವಾವಲಂಬಿಯಾಗಿ ದ್ದಾರೆ ಎಂದರು. ಕೃಷಿ ಕ್ಷೇತ್ರಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿವಿಧ ಯೋಜನೆ ರೂಪಿಸಿವೆ ಎಂದರು.ಕೃಷಿ ವಿಜ್ಞಾನಿಗಳು ರೈತರೊಂದಿಗೆ ನಿಕಟ ಸಂಪರ್ಕ ಹೊಂದಿರಬೇಕು ಅವರೊಂದಿಗೆ ಸಮಾಲೋಚಿಸಿ ಸಂಶೋಧನೆ ಮಾಡಬೇಕೆಂದರು. ಭಾರತ ಇಂದು ಉತ್ತಮ  ಆರ್ಥಿಕತೆ ಪಟ್ಟಿಯಲ್ಲಿ ಐದನೆ ಸ್ಥಾನದಲ್ಲಿದೆ ಮುಂಬರುವ ದಿನಗಳಲ್ಲಿ ಮೂರನೆ ಸ್ಥಾನಕ್ಕೆ ತಲುಪಲಿದೆ ಎಂದರು. ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವೆಂದ ಅವರು ಜಲ, ವನ, ವಾಯು ಜೊತೆಗೆ ಮಣ್ಣಿನ ಫಲವತ್ತತೆ ಕಾಪಾಡುವ ನಿಟ್ಟಿನಲ್ಲಿ  ಜಾಗೃತಿ ವಹಿಸಿದರೆ ಸುಸ್ಥಿರ ಕೃಷಿ ಸಾಧ್ಯವೆಂದರು. ಕೃಷಿ ಕ್ಷೇತ್ರದಲ್ಲಿರುವ ಸವಾಲುಗಳನ್ನು ಸಾಧನೆಯ ಮೆಟ್ಟಿಲುಗಳನ್ನಾಗಿ ಮಾಡಿಕೊಳ್ಳಬೇಕೆಂದರು.         

   ಮುಖ್ಯ ಅತಿಥಿಗಳಾಗಿ ಆಗಮಿಸಿದ ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಮಂಡಳಿಯ ಉಪ ಮಹಾನಿರ್ದೇಶಕ ಡಾ.ಎಸ್.ಎನ್.ಝಾ ಮಾತನಾಡಿ ರಾಯಚೂರು ಮಣ್ಣಿನಲ್ಲಿ ಫಲವತ್ತತೆ ಅಗಾಧವಾಗಿದೆ  ಇಲ್ಲಿ  ತೊಗರಿ, ಹತ್ತಿ, ಭತ್ತ, ಜೋಳ, ಮೆಣಸಿನಕಾಯಿ ಮುಂತಾದ ಪ್ರಮುಖ ಬೆಳೆಗಳನ್ನು ಬೆಳೆಯುತ್ತಿದ್ದು ಕೃಷಿ ವಿವಿ ವಿವಿಧ ಬೀಜ ತಳಿಗಳನ್ನು ಸಂಶೋಧಿಸಿ ರೈತರಿಗೆ ಉತ್ತಮ ಇಳುವರಿ ಬರುವಂತೆ ಕಾರ್ಯ ಮಾಡಿದೆ ಎಂದ ಅವರು ಪದವಿ ಪಡೆದ ವಿದ್ಯಾರ್ಥಿಗಳು ರೈತರಿಗೆ ತಂತ್ರಾಜ್ಞಾನಯುತವಾಗಿ ಮಾರ್ಗದರ್ಶನ ಮಾಡಲಿ ಎಂದರು.

ಕೃಷಿ ವಿವಿ ಕುಲಪತಿ ಡಾ.ಎಂ.ಹನುಮಂತಪ್ಪ ಮಾತನಾಡಿ  ವಿಶ್ವವಿದ್ಯಾಲಯ ರೈತರಿಗೆ ಸದಾ ಬೆಂಬಲವಾಗಿ ನಿಂತಿದೆ ನಮ್ಮ ಸಂಶೋಧನೆಗಳು ರೈತರ ಭೂಮಿ ಗಳಿಗೆ ತಲುಪಿದಾಗ ಮಾತ್ರ ಅದು ಸಾರ್ಥಕವಾಗುತ್ತದೆ ಎಂದು ಪದವಿ ಪಡೆದ ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.                                        ಸ್ನಾತಕ, ಸ್ನಾತಕೋತ್ತರ ಮತ್ತು ಪಿಹೆಚ್ ಡಿ ಪದವಿಯಲ್ಲಿ ಚಿನ್ನದ ಪದಕಗಳನ್ನು ವಿದ್ಯಾರ್ಥಿಗಳಿಗೆ ಪ್ರದಾನ ಮಾಡಿದರು. 

       
ಚಿನ್ನದ ಪದಕ ವಿಜೇತರು:  ಸ್ನಾತಕದಲ್ಲಿ ಸಾಗರ್ ಕೋಲಕುರ್, ಶೋಭಾ ದಾನಗೌಡ 5 ಚಿನ್ನದ ಪದಕ, ದಿವ್ಯ 4 ಚಿನ್ನದ ಪದಕ, ಕರಡಿ ಬಸವ 3 ಚಿನ್ನದ ಪದಕ ಪಡೆದರು .ಒಟ್ಟು ಸ್ನಾತಕದಲ್ಲಿ 25 ಚಿನ್ನದ ಪದಕ ಪ್ರದಾನ ಮಾಡಲಾಯಿತು. ಉಳಿದಂತೆ ಸ್ನಾತಕೋತ್ತರ, ಡಾಕ್ಟರಲ್ಸ್ ಲ್ಲಿ 29 ಚಿನ್ನದ ಪದಕ ಪ್ರದಾನ ಮಾಡಲಾಯಿತು.       ವೇದಿಕೆ ಮೇಲೆ ಆಡಳಿತ ಮಂಡಳಿ ಸದಸ್ಯರು, ವಿವಿ ಹಿರಿಯ ಪ್ರಾಧ್ಯಾಪಕರು ,ಇನ್ನಿತರರು ಇದ್ದರು. ರಾಜ್ಯಪಾಲರ ಆಗಮನ ಹಿನ್ನಲೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್