ಜವಾಹರ್ ನಗರ ರಾಯರ ಮಠದಲ್ಲಿ ಫೆ.21 ರಿಂದ 26 ರವರೆಗೆ ಶ್ರೀ ಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠದ ಶತಮಾನೋತ್ಸವ ಹಾಗೂ ರಾಯಚೂರು ಸಂಸ್ಕೃತ ವಿದ್ಯಾಪೀಠದ ಪಂಚಮ ವಾರ್ಷಿಕೋತ್ಸವ - ಡಾ.ಎನ್.ವಾದಿರಾಜಾಚಾರ್ಯ.

 


ಜವಾಹರ್ ನಗರ ರಾಯರ ಮಠದಲ್ಲಿ  ಫೆ.21 ರಿಂದ 26 ರವರೆಗೆ ಶ್ರೀ ಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠದ ಶತಮಾನೋತ್ಸವ ಹಾಗೂ ರಾಯಚೂರು ಸಂಸ್ಕೃತ ವಿದ್ಯಾಪೀಠದ ಪಂಚಮ ವಾರ್ಷಿಕೋತ್ಸವ - ಡಾ.ಎನ್.ವಾದಿರಾಜಾಚಾರ್ಯ.             ರಾಯಚೂರು,ಫೆ.20- ಜವಾಹರ್ ನಗರ ರಾಯರ ಮಠದಲ್ಲಿ  ಫೆ.21 ರಿಂದ 26 ರವರೆಗೆ ಶ್ರೀ ಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠದ ಶತಮಾನೋತ್ಸವ ಹಾಗೂ ರಾಯಚೂರು ಸಂಸ್ಕೃತ ವಿದ್ಯಾಪೀಠದ ಪಂಚಮ ವಾರ್ಷಿಕೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠದ ನಿವೃತ್ತ ಪ್ರಾಂಶುಪಾಲರಾದ ಡಾ.ಎನ್.ವಾದಿರಾಜಾಚಾರ್ಯ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಂತ್ರಾಲಯದಲ್ಲಿ 1924ಇಸ್ವಿಯಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಅಂದಿನ ಪೀಠಾಧಿಪತಿಗಳಾದ ಶ್ರೀ ಸುಶೀಲೇಂದ್ರ ತೀರ್ಥ ಶ್ರೀಪಾದಂಗಳವರು ಪರಿಮಳ ಎಂಬ ಪಾಠಶಾಲೆಯನ್ನು ಸ್ಥಾಪಿಸಿದರು. ನಂತರ ಪೀಠಾಧಿಪತಿಗಳಾದ ಶ್ರೀ ಸುಜಯೀಂದ್ರತೀರ್ಥ ಶ್ರೀ ಪಾದಂಗಳವರು ಶ್ರೀ ಗುರುಸಾರ್ವಭೌಮ ವಿದ್ಯಾಪೀಠ ಎಂದು ನಾಮಾಂತರ ಮಾಡಿದರು ಎಂದರು. ಪ್ರಸ್ತುತ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ಐದು ವರ್ಷದ ಹಿಂದೆ ರಾಯಚೂರು ನಗರದ ಜವಾಹರ್ ನಗರ ರಾಯರ ಮಠದಲ್ಲಿ ಸಂಸ್ಕೃತ ವಿದ್ಯಾಪೀಠ ಸ್ಥಾಪಿಸಿದರು ಎಂದರು. ಫೆ.21 ರಂದು ಜವಾಹರ್ ನಗರ ರಾಯರ ಮಠದಲ್ಲಿ ಬೆಳಿಗ್ಗೆ 6.15ಕ್ಕೆ ಶ್ರೀ ರಾಮ ಷಡಕ್ಷರಿ ಮಹಾಮಂತ್ರ ಹೋಮ ಪೂರ್ಣಾಹುತಿ ನಂತರ ಭಕ್ತರ ಮನೆಯಲ್ಲಿ ಶ್ರೀ ಮನ್ಮೂಲರಾಮದೇವರ ಸಂಸ್ಥಾನ ಪೂಜೆ, ಸಂಜೆ 4.30 ರಿಂದ 6 ಗಂಟೆವರೆಗೆ ಧರ್ಮ ಗೋಷ್ಟಿ, 6ಕ್ಕೆ ರಮೇಶ್ ಕುಲಕರ್ಣಿಯಿಂದ ದಾಸವಾಣಿ,7ಕ್ಕೆ ಗುಡೆಬಲ್ಲೂರು ವೆಂಕಟ್ ನರಸಿಂಹಾಚಾರ್ ರಿಂದ ಉಪನ್ಯಾಸ, 7.45ಕ್ಕೆ ಶ್ರೀ ಪಾದಂಗಳವರಿಂದ ಆಶೀರ್ವಚನ,8.30ಕ್ಕೆ ಸಾಯಂಕಾಲ ಪೂಜೆ ನಡೆಯಲಿದೆ ಎಂದರು.                                 ಫೆ.22 ರಂದು ಬೆಳಿಗ್ಗೆ 8.30ಕ್ಕೆ ಶ್ರೀ ರಾಘವೇಂದ್ರ ಅಷ್ಟಾಕ್ಷರ ಮಂತ್ರ ಹೋಮ,10.30ಕ್ಕೆ ಸಾಮೂಹಿಕ ಉಪನಯನ, ಶ್ರೀ ಗಳಿಂದ ವಟುಗಳಿಗೆ ಬ್ರಹ್ಮೋಪದೇಶ ಹಾಗೂ ಆಶೀರ್ವಾದ ನಂತರ ಭಕ್ತರ ಮನೆಯಲ್ಲಿ ಶ್ರೀಮನ್ಮೂಲರಾಮ ದೇವರ ಸಂಸ್ಥಾನ ಪೂಜೆ, ಸಂಜೆ 4.30ಕ್ಕೆ ದಾಸ ಸಾಹಿತ್ಯ ಗೋಷ್ಟಿ, 6ಕ್ಕೆ ಮಂಜುನಾಥ ಗೋರ್ಕಲ್ ಮತ್ತು ತಂಡದಿಂದ  ನೃತ್ಯರೂಪಕ,7ಕ್ಕೆ ಶಾಮಾಚಾರ ಬಂಡಿಯವರಿಂದ ಉಪನ್ಯಾಸ, ನಂತರ ಶ್ರೀ ಪಾದಂಗಳವರಿಂದ ಆಶೀರ್ವಚನ , ಸಾಯಂಕಾಲ ಪೂಜೆ ನಡೆಯಲಿದೆ ಎಂದರು.                       ಫೆ.23 ರಂದು ಬೆಳಿಗ್ಗೆ 10.30ಕ್ಕೆ ನರಸಿಂಹ ಮಂತ್ರ ಹೋಮ ಪೂರ್ಣಾಹುತಿ ನಂತರ ಎನ್ ಜಿ ಓ ಕಾಲೋನಿ ವೆಂಕಟೇಶ ದೇವಸ್ಥಾನದಲ್ಲಿ ಶ್ರೀ ಸುಶಮೀಂದ್ರತೀರ್ಥರ ಮೃತ್ತಿಕಾ ಬೃಂದಾವನ ಪ್ರತಿಷ್ಟಾಪನೆ, ಸಂಜೆ 4.30ಕ್ಕೆ ಪುರಾಣ ಗೋಷ್ಟಿ, 6ಕ್ಕೆ ರಾಯಚೂರು ವಿದ್ಯಾಪೀಠದ ವಿದ್ಯಾರ್ಥಿಗಳಿಂದ ದಾಸವಾಣಿ,7ಕ್ಕೆ "ನನಸಾದ ಶ್ರೀ ರಾಮ ಮಂದಿರ" ಡಾ.ಚಕ್ರವರ್ತಿ ಸೂಲಿಬೆಲೆಯವರಿಂದ ಉಪನ್ಯಾಸ, ನಂತರ ಶ್ರೀ ಪಾದಂಗಳವರಿಂದ ಆಶೀರ್ವಚನ, ಸಾಯಂಕಾಲಪೂಜೆ ನಡೆಯಲಿದೆ ಎಂದರು.

ಫೆ.24ರಂದು ಅಷ್ಟ ಹೋಮ ಮಹಾಮಂತ್ರಗಳ ಹೋಮ ಪೂರ್ಣಾಹುತಿ, ಮುಡುಮಾಲೆಯಲ್ಲಿ ಶ್ರೀ ಯಾದವೇಂದ್ರತೀರ್ಥರ ಆರಾಧನೆ ಅಂಗವಾಗಿ ಶ್ರೀ ಪಾದಂಗಳವರಿಂದ ಸಂಸ್ಥಾನ ಪೂಜೆ. ಸಂಜೆ 4.30ಕ್ಕೆ ವೇದ ಗೋಷ್ಟಿ, 6ಕ್ಕೆ ರಾಯಚೂರು ಕಲಾವಿದರಿಂದ ದಾಸವಾಣಿ,7ಕ್ಕೆ ಡಾ.ಜಿ.ಕೆ.ಸತ್ಯಮೂರ್ತಿ ಆಚಾರ್ಯರಿಂದ ಉಪನ್ಯಾಸ,ನಂತರ ಶ್ರೀ ಪಾದಂಗಳವರಿಂದ ಆಶೀರ್ವಚನ, ಸಾಯಂಕಾಲ ಪೂಜೆ ನಡೆಯಲಿದೆ ಎಂದರು.                                                     ಫೆ.25 ರಂದು ಬೆಳಿಗ್ಗೆ 10 ಕ್ಕೆ ಧನ್ವಂತರಿ ಮಹಾಮಂತ್ರ ಹೋಮ ಪೂರ್ಣಾಹುತಿ, 10.30ಕ್ಕೆ ಶ್ರೀ ರಾಯರ  ಮಠದಲ್ಲಿ,   ಸಾಮೂಹಿಕ ಪಾದಪೂಜೆ , ತಪ್ತ ಸಭೆ ಮುದ್ರಾ ಧಾರಣೆ, ಶ್ರೀಪಾದಂಗಳವರಿಂದ ಶ್ರೀ ಮನ್ಮೂಲರಾಮದೇವರ ಸಂಸ್ಥಾನ ಪೂಜೆ, ಸಂಜೆ 4.30ಕ್ಕೆ ವೇದಾಂತ ಗೋಷ್ಟಿ,6ಕ್ಕೆ ರಾಯಚೂರು ವಿದ್ಯಾಪೀಠದ ವಿದ್ಯಾರ್ಥಿಗಳಿಂದ ಕನ್ನಡ ಮತ್ತು ಸಂಸ್ಕೃತ ಭಾಷೆ ಯಲ್ಲಿ ನಾಟಕ,7ಕ್ಕೆ ಇನ್ಫೋಸಿಸ್ ಸುಧಾ ನಾರಾಯಣಮೂರ್ತಿ ಅವರಿಂದು ಉಪನ್ಯಾಸ, ಸಂಜೆ 7ಕ್ಕೆ ಶ್ರೀ ಪಾದಂಗಳವರಿಂದ ಆಶೀರ್ವಚನ ,ವಿದ್ಯಾಪೀಠದ ಶತಮಾನೋತ್ಸವ ವಾರ್ಷಿಕೋತ್ಸವದ ಮಂಗಳ ಮಹೋತ್ಸವ ನಡೆಯಲಿದೆ ಎಂದರು.                                 ಫೆ.26 ರಂದು ಬೆಳಿಗ್ಗೆ 8.30ಕ್ಕೆ ಪವಮಾನಹೋಮ ಪೂರ್ಣಾಹುತಿ, ಬೆಳಿಗ್ಗೆ ವಿದ್ಯಾರ್ಥಿಗಳೊಂದಿಗೆ ಶ್ರೀ ಪಾದಂಗಳವರ ಸಂವಾದ ನಂತರ ಭಕ್ತರ ಮನೆಯಲ್ಲಿ ಶ್ರೀ ಪಾದಂಗಳವರಿಂದ ಶ್ರೀ ಮನ್ಮೂಲರಾಮ ದೇವರ ಸಂಸ್ಥಾನ ಪೂಜೆ,ಸಂಜೆ 5ಕ್ಕೆ ಶೋಭಾಯಾತ್ರೆ,6ಕ್ಕೆ ಜವಾಹರನಗರ ರಾಯರ ಮಠದ ಸರೋವರದಲ್ಲಿ ತೆಪ್ಪೋತ್ಸವ ನೆರವೇರಲಿದ್ದು ಭಕ್ತರು ಆಗಮಿಸುವಂತೆ ಕೋರಿದರು. ಶ್ರೀಮಠದಲ್ಲಿ ಯಾವುದೆ ಜಾತಿ ಮತ ಪಂಥ  ಬೇಧವಿಲ್ಲದೆ ಎಲ್ಲರಿಗೂ ರಾಯರ ಅನುಗ್ರಹಿಸಿಸುತ್ತಿದ್ದಾರೆ .ಆಸಕ್ತ ವಿದ್ಯಾರ್ಥಿಗಳಿಗೆ ಸಂಸ್ಕೃತ ಪಾಠ ಪ್ರವಚನ ಹೇಳಿಕೊಡಲಾಗುತ್ತದೆ ಎಂದರು. ರಾಯರ ಮಠಕ್ಕೆ ವಿದ್ಯಾಪೀಠ ವೆಂದು ಕರೆಯಲಾಗುತ್ತದೆ ಇಲ್ಲಿ ವಿದ್ಯೆಗೆ ಆದ್ಯತೆ ನೀಡಲಾಗಿದೆ ಎಂದರು. ಈ ಎಲ್ಲಾ  ಕಾರ್ಯಕ್ರಮಗಳ ಸರ್ವಾಧ್ಯಕ್ಷತೆಯನ್ನು ಪಂಡಿತ ಕೇಸರಿ ಡಾ. ರಾಜಾ ಎಸ್. ಗಿರಿಯಾಚಾರ್ ವಹಿಸಲಿದ್ದಾರೆ ಎಂದರು. ಈ ಸಂದರ್ಭದಲ್ಲಿ ದ್ವಾರಕಾನಾಥ್ ಆಚಾರ್ಯ ಇದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ