ಫೆ.26 ರಂದು ಏಮ್ಸ್ ಗಾಗಿ ದೆಹಲಿಯಲ್ಲಿ ಪ್ರತಿಭಟನೆ : ರಾಜ್ಯ ಸರ್ಕಾರದ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಮನ್ನಣೆ ನೀಡಬೇಕು- ಕಳಸ


 
ಫೆ.26 ರಂದು  ಏಮ್ಸ್ ಗಾಗಿ ದೆಹಲಿಯಲ್ಲಿ ಪ್ರತಿಭಟನೆ :               ರಾಜ್ಯ ಸರ್ಕಾರದ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಮನ್ನಣೆ ನೀಡಬೇಕು- ಕಳಸ
.                                                                                             ರಾಯಚೂರು,ಫೆ.19- ಏಮ್ಸ್ ಸ್ಥಾಪನೆ ಮಾಡಲು ಆಗ್ರಹಿಸಿ ಫೆ.26 ರಂದು ದೆಹಲಿಯಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಏಮ್ಸ್ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಬಸವರಾಜ ಕಳಸ ಹೇಳಿದರು.                                          ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಳೆದ 648 ದಿನಗಳಿಂದ ಏಮ್ಸ್ ಸ್ಥಾಪನೆಗೆ ಒತ್ತಾಯಿಸಿ ಧರಣಿ ನಡೆಸಲಾಗುತ್ತಿದೆ ಜಿಲ್ಲೆಯ ಏಕೈಕ ಹೆಸರನ್ನು ಸಿಎಂ ಅಧಿಕೃತವಾಗಿ ಕೇಂದ್ರದ ಆರೋಗ್ಯ ಸಚಿವರಿಗೆ ಕಳುಹಿಸಿದ್ದರು ಅದಕ್ಕೆ ಮನ್ನಣೆ ನೀಡದೆ ನಿರ್ಲಕ್ಷಿಸಲಾಗುತ್ತಿದೆ ಆದ್ದರಿಂದ ನಾವು ಇಂದು ದೆಹಲಿಗೆ ತೆರಳಿ ಪ್ರಧಾನಿ ಮತ್ತು ಗೃಹ ಸಚಿವರ ಭೇಟಿಗಾಗಿ ಮನವಿ ಮಾಡುತ್ತೇವೆ ನಮಗೆ ಅಲ್ಲಿ ಸ್ಪಂದನೆ ದೊರೆಯದಿದ್ದರೆ ಫೆ.26 ರಂದು ಜಂತರ್ ಮಂತರ್ ಬಳಿ ಧರಣಿ ನಡೆಸುತ್ತೇವೆ ಎಂದರು. ಧರಣಿಯಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಭಾಗವಹಿಸುವಂತೆ ಕೋರಿದ್ದೇವೆ ಎಂದು ಅವರು ಲೋಕಸಭಾ ಚುನಾವಣೆ ಘೋಷಣೆ ಮುನ್ನ ಏಮ್ಸ್ ಘೋಷಣೆಯಾಗಬೇಕೆಂದರು. 

        ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಏಮ್ಸ್ ಸ್ಥಾಪನೆ ಬಗ್ಗೆ ಭರವಸೆ ನೀಡಿದ್ದರು ಅದು ಈಡೇರುತ್ತಿಲ್ಲವೆಂದ ಅವರು ಏಮ್ಸ್ ಗಾಗಿ ಕಾನೂನು ಹೋರಾಟದ ಬಗ್ಗೆಯೂ ಯೋಚಿಸಲಾಗಿತ್ತು ಜಸ್ಟೀಸ್ ಡಾ.ಶಿವರಾಜ ಪಾಟೀಲ್ ರವರು ನಮ್ಮೊಂದಿಗೆ ಸಮಾಲೋಚಿಸಿ ಸಾಧಕ ಬಾಧಕ ನೋಡಿಕೊಂಡು ಕಾನೂನು ಹೋರಾಟದ ಕುರಿತಂತೆ ಹೇಗೆ ಮುಂದಿನ ಹೆಜ್ಜೆಯಿಡಬೇಕೆಂದೆ ಸಲಹೆ ನೀಡಿದ್ದಾರೆ ಎಂದರು. ಜಿಲ್ಲೆಯ ಸಂಸದರಿಗೆ ಏಮ್ಸ್ ಸ್ಥಾಪನೆಗಾಗಿ ಪರಿಶೀಲನೆ ನಡೆಸಲು ಕೇಂದ್ರ ಆರೋಗ್ಯ ಸಚಿವರು ತಂಡ ಕಳುಹಿಸುವ ಬಗ್ಗೆ ಹೇಳಿರುವ ಕುರಿತು  ನಮಗೆ ಮಾಹಿತಿಯಿಲ್ಲ  ಸಂಸದರೆ ಈ ಬಗ್ಗೆ ಉತ್ತರಿಸಬೇಕೆಂದರು.                                       ಈ ಸಂದರ್ಭದಲ್ಲಿ ಎನ್.ಮಹಾವೀರ, ಎಸ್.ಎಸ್. ಪಾಟೀಲ್, ಶಾಮಲಾ, ಸುಲೋಚನಾ, ರಮೇಶ್ ರಾವ್ ಕಲ್ಲೂರಕರ್, ವಿನಯ್ ಚಿತ್ರಗಾರ್ ಇದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ