ರಾಯಚೂರು ಲೋಕಸಭಾ ಕ್ಷೇತ್ರಕ್ಕೆ 34960 ಕೋಟಿ ರೂ. ಅನುದಾನ: ನನಗೆ ಮತ್ತೊಮ್ಮೆ ಸ್ಪರ್ದಿಸುವ ಅವಕಾಶ ನೀಡಿ- ರಾಜಾ ಅಮರೇಶ್ವರ ನಾಯಕ.

 


ರಾಯಚೂರು ಲೋಕಸಭಾ ಕ್ಷೇತ್ರಕ್ಕೆ  34960 ಕೋಟಿ ರೂ. ಅನುದಾನ:                                                              ನನಗೆ ಮತ್ತೊಮ್ಮೆ ಸ್ಪರ್ದಿಸುವ ಅವಕಾಶ ನೀಡಿ- ರಾಜಾ ಅಮರೇಶ್ವರ ನಾಯಕ.                                   ರಾಯಚೂರು,ಫೆ.24- ಪ್ರಧಾನಿ  ಮೋದಿಯವರ ನೇತೃತ್ವದ ಕೇಂದ್ರ  ಸರ್ಕಾರ ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಸುಮಾರು 34960 ಕೋಟಿ ರೂ.ಗಳ ಅನುದಾನ ನೀಡಿದೆ ಹೀಗಾಗಿ ಕ್ಷೇತ್ರದ ಮತ್ತಷ್ಟು ಅಭಿವೃದ್ಧಿಗೆ ನನಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಸ್ಪರ್ದಿಸುವ ಅವಕಾಶ ಬಿಜೆಪಿ ವರಿಷ್ಟರು ನೀಡಬೇಕೆಂದು ಸಂಸದ ಅಮರೇಶ್ವರ ನಾಯಕ ಹೇಳಿದರು.                                            ಅವರಿಂದು ಸುದ್ದಿಗೋಷ್ಠಿಯಲ್ಲಿ ತಮ್ಮ ಐದು ವರ್ಷದ ಅವಧಿಯಲ್ಲಿ ಕೈಗೊಳ್ಳಲಾದ ಅಭಿವೃದ್ಧಿ ಮತ್ತು  ಕೇಂದ್ರ ಸರ್ಕಾರ ನೀಡಿರುವ ಅನುದಾನ  ಕುರಿತು ಮಾಹಿತಿ ನೀಡಿ ಮಾತನಾಡಿದರು.                                          ಜಿಲ್ಲೆಗೆ ಏಮ್ಸ್ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆಂದ ಅವರು ಕೇಂದ್ರ ಆರೋಗ್ಯ ಸಚಿವರನ್ನು ಸಂಸದ ಕರಡಿ ಸಂಗಣ್ಣ ಜೊತೆಗೂಡಿ ಭೇಟಿಯಾದಾಗ ಏಮ್ಸ್ ಮಂಜೂರಿ ಕುರಿತು ಸಕಾರಾತ್ಮಕವಾಗಿ ಸ್ಪಂದಿಸಿ ಜಿಲ್ಲೆಗೆ ಕೇಂದ್ರದ ತಂಡ ಕಳುಹಿಸಿಕೊಡುವ ಬಗ್ಗೆ ಭರವಸೆ ನೀಡಿದ್ದಾರೆ ಎಂದು ಹೇಳಿದ ಅವರು ನಾನು ಸಂಸತ್ ನಲ್ಲಿ ಏಮ್ಸ್ ಕುರಿತು ಅನೇಕ ಬಾರಿ ಧ್ವನಿ ಎತ್ತಿದ್ದೇನೆಂದರು.                                            ಮೆಗಾ ಟೆಕ್ಸಟೈಲ್ ಪಾರ್ಕ್ ಕಲ್ಬುರ್ಗಿಗೆ ನೀಡಲಾಗಿದೆ ರಾಜ್ಯ ಸರ್ಕಾರ ಜಿಲ್ಲೆಗೆ ಜವಳಿ ಪಾರ್ಕ್ ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ ಎಂದರು. ಸಂಸದ ಕ್ಷೇತ್ರಾಭಿವೃದ್ಧಿ ಅನುದಾನ ಒಟ್ಟು 20 ಕೋಟಿ ಒದಗಿಸಲಾಗಿದೆ ಎಂದರು. ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಅನೇಕ ಹೆದ್ದಾರಿಗಳು ನಿರ್ಮಾಣವಾಗುತ್ತಿದ್ದು ಅಕ್ಕಲಕೋಟ- ಕರ್ನೂಲ್, 150 ಎನ್.ಹೆಚ್, 180ಕೋಟಿ ರೂ ವೆಚ್ಚದಲ್ಲಿ ಕೃಷ್ಣ ನೂತನ ಸೇತುವೆ ಕಾಮಗಾರಿ ಪ್ರಗತಿಯಲ್ಲಿದೆ ತಾಂತ್ರಿಕ ಕುಶಲತೆ ಮೂಲಕ ಬ್ರಿಡ್ಜ್ ನಿರ್ಮಾಣ ನಡೆಯಲಿದೆ ಎಂದರು.   

   ರಾಯಚೂರು ಬೆಳಗಾವಿ, ಬೆಂಗಳೂರು ಬೆಳಗಾವಿ ವಯಾ ರಾಯಚೂರು ಮುಂತಾದ ರಸ್ತೆಗಳು ನಿರ್ಮಾಣವಾಗುತ್ತಿದ್ದು ನಗರದ ಮೂರು ಕಡೆ ಅವುಗಳ ಸಂಪರ್ಕ ರಸ್ತೆಗಳು ಆಗಲಿವೆ ಎಂದರು. ರಾಯಚೂರಿನಲ್ಲಿ ನಮ್ಮ ಪ್ರಯತ್ನದ ಫಲವಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಛೇರಿ ತೆರೆಯಲಾಗಿದೆ ಎಂದರು. ಸಂಸದರ ಆದರ್ಶ್ ಗ್ರಾ.ಪಂ ಗಳಿಗೆ ಕೋಟ್ಯಾಂತರ ರೂ. ಮಂಜೂರು ಮಾಡಲಾಗಿದೆ ಇದೆ ಶಾಮಾ ಪ್ರಸಾದ ಮುಖರ್ಜಿ ಯೋಜನೆಯಡಿ ಗ್ರಾಮೀಣ ಭಾಗದಲ್ಲಿಯೂ ಕೋಲ್ಡ್ ಸ್ಟೋರೇಜ್, ಶಾಲಾ ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂದರು. ಯಾದಗಿರಿ ಜಿಲ್ಲೆಯಲ್ಲಿ 440 ಕೋಟಿ ರೂ. ವೆಚ್ಚದ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಶೇ.60 ಕೇಂದ್ರ ಸರ್ಕಾರ ಅನುದಾನ ನೀಡಿದೆ  ಎಂದರು. ಯಾದಗಿರಿ,  ರಾಯಚೂರಲ್ಲಿ  ಏಕಲವ್ಯ ಶಾಲೆಗಳು ಮಂಜೂರಾತಿ, ನೀಟ್ ಪರೀಕ್ಷಾ ಕೇಂದ್ರ ಪ್ರಾರಂಭಕ್ಕೆ ಅನುಮತಿ , ಯಾದಗಿರಿಯಲ್ಲಿ ಕೇಂದ್ರಯ ವಿದ್ಯಾಲಯ ಮಂಜೂರಿ ಹಂತದಲ್ಲಿದೆ ಹಾಗೂ ಕೇಂದ್ರ ಮುಖ್ಯ ಅಂಚೆ ಕಚೇರಿ ಮತ್ತು ಇಎಸ್ಐ ಡಿಸ್ಪೆಂಸ್ಸರಿ  ಮಂಜೂರಾಗಿದೆ ಎಂದು ಅವರು  ನಾನು ಸುಮಾರು 62 ಜನರಿಗೆ ಆರೋಗ್ಯ ಚಿಕಿತ್ಸೆಗಾಗಿ ದೆಹಲಿಗೆ ಶಿಫಾರಸ್ಸು ಮಾಡಿದ್ದು 1.75ಕೋಟಿ ಹಣ ವಿನಿಯೋಗಿಸಲಾಗಿದೆ ಎಂದರು. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ 168 ಕಿ.ಮಿ ರಸ್ತೆ ನಿರ್ಮಾಣ, ಕೃಷಿ ಇಲಾಖೆಯಡಿ ರಾಷ್ಟ್ರೀಯ ಆಹಾರ ಭದ್ರತೆ ಯೋಜನೆಗೆ 40.82 ಕೋಟಿ,ಪ್ರಧಾನ  ಮಂತ್ರಿ ಕೃಷಿ ಸಿಂಚಾಯಿ ಅಡಿ 56.15ಕೋಟಿ, ಕೃಷಿ ಯಾಂತ್ರೀಕರಣ ಉಪ ಅಭಿಯಾನದಡಿ 30 ಕೋಟಿ , ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ 47 ಲಕ್ಷ ಅನುದಾನ ಬಿಡುಗಡೆಯಾಗಿದೆ ಎಂದರು. ಜಲ ಜೀವನ ಮಿಷನ್ ಅಡಿ ಕುಡಿಯುವ ನೀರು ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಸೂಚಿಸಲಾಗಿದೆ ಎಂದ  ಅವರು ಅಮೃತ ಯೋಜನೆ, ಕೆಬಿಜೆಎನ್ ಎಲ್ ಯೋಜನೆ ಹಾಗೂ ರೈಲ್ವೆ ನಿಲ್ದಾಣದಲ್ಲಿ ಲಿಫ್ಟ್ ಅಳವಡಿಕೆ, ಪ್ಲಾಟ್ ಫಾರಂ ದುರಸ್ತಿ, ಎಸ್ಕಲೇಟರ್ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದ್ದು ಜಿಲ್ಲೆಯಲ್ಲಿ ರೈಲ್ವೆ ಮಾರ್ಗ ವಿಸ್ತರಣೆ ಮತ್ತು ಹೊಸ ಮಾರ್ಗಗಳ ನಿರ್ಮಾಣ ಮಾಡಲಾಗುತ್ತಿದೆ ಎಂದ ಅವರು ತಾಂತ್ರಿಕ ದೋಷ ಸರಿಪಡಿಸಿದ ನಂತರ  ಒಂದೆ  ಭಾರತ ರೈಲು ಈ ಮಾರ್ಗದಲ್ಲಿ ಓಡಿಸಲಾಗುತ್ತದೆ ಎಂದರು. ಇಷ್ಟೆಲ್ಲ ಅಭಿವೃದ್ದಿಗೆ ಜನರು ಸಹಕರಿಸಿದ್ದಾರೆ ಜಿಲ್ಲೆಯಲ್ಲಿ ಮತ್ತಷ್ಟು ಅಭಿವೃದ್ಧಿ ಮಾಡಲು ನನಗೆ ಮತ್ತೊಮ್ಮೆ ಚುನಾವಣೆಯಲ್ಲಿ ಸ್ಪರ್ದಿಸಲು ಅವಕ್ಕೆ ನೀಡಬೇಕೆಂದ ಅವರು ವರಿಷ್ಟರು ತಮಗೆ ಟಿಕೆಟ್ ನೀಡುವ ಆಶಾಭಾವನೆ ವ್ಯಕ್ತಪಡಿಸಿದ ಅವರು ನಾನು ಹೊಸದಾಗಿ ಎಂಪಿ ಕಛೇರಿ ಪ್ರವೇಶಿಸಿದಾಗ ಅಲ್ಲಿ ಚೊಂಬು ಸಹ ಇರಲಿಲ್ಲವೆಂದು ಪರೋಕ್ಷವಾಗಿ ಮಾಜಿ ಸಂಸದರನ್ನು ಕುಟುಕಿದರು.

ಅನೇಕರು ಟಿಕೆಟ್ ಆಕಾಂಕ್ಷಿಗಳು ಇರುತ್ತಾರೆ ಹೈಕಮಾಂಡ್ ನಿರ್ಧರಿಸುತ್ತದೆ ಎಂದ ಅವರು ನಾನು ಕಳಂಕ ರಹಿತ ಮತ್ತು ಪಾರದರ್ಶಕವಾಗಿ ಜನರ ಸೇವೆ ಮಾಡಿದ್ದೇನೆ ಎಂದರು.                                        ಈ ಸಂದರ್ಭದಲ್ಲಿ ಶಾಸಕ ಡಾ.ಶಿವರಾಜ ಪಾಟೀಲ್, ಮಾಜಿ ಎಂಎಲ್ಸಿ ಎನ್.ಶಂಕ್ರಪ್ಪ, ಕಡಗೋಲು ಆಂಜನೇಯ, ಗಿರೀಶ್ ಕನಕವೀಡು ,ಬಂಡೇಶ ವಲ್ಕಂದಿನ್ನಿ, ಬಾಬು ರಾವ್, ಡಾ.ನಾಗರಾಜ ಭಾಲ್ಕಿ, ಶಂಕರ್ ರೆಡ್ಡಿ, ಶರಣಪ್ಪ ಗೌಡ ಇನ್ನಿತರರು ಇದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್